ಸೋಮವಾರ, ಮೇ 17, 2021
23 °C
ಕಾಡು ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ತಯಾರಿಸಲಾಗಿದ್ದ ಹುಳಿ ಅವಲಕ್ಕಿ

ಸುಳ್ವಾಡಿ ದುರಂತ ಪರಿಣಾಮ: ಭಕ್ತರಿಗೆ ಸಿಗದ ಪ್ರಸಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಸುಳ್ವಾಡಿ ‘ವಿಷ ಪ್ರಸಾದ’ ದುರಂತದ ಹಿನ್ನೆಲೆಯಲ್ಲಿ ಸರ್ಕಾರ ಸೋಮವಾರ ಹೊರಡಿಸಿರುವ ಆದೇಶದ ಅನ್ವಯ ವೈಕುಂ‌ಠ ಏಕಾದಶಿಯಂದು ನಗರದ ಕಾಡು ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ಸಿಗಲಿಲ್ಲ.

ಪ್ರತಿ ವರ್ಷ ಇಲ್ಲಿ ವೈಕುಂಠ ಏಕಾದಶಿಗೆ ‘ಹುಳಿ ಅವಲಕ್ಕಿ’ಯನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಆದರೆ, ಮಂಗಳವಾರ ಭಕ್ತರಿಗೆ ಪ್ರಸಾದ ಸಿಗಲಿಲ್ಲ.

ಸರ್ಕಾರದ ಹೊಸ ಆದೇಶದ ಪ್ರಕಾರ, ವೈದ್ಯರೊಬ್ಬರು ಬಂದು ಪ್ರಸಾದವನ್ನು ಪರೀಕ್ಷಿಸಬೇಕು. ಆ ಬಳಕವೇ ವಿತರಣೆ ಮಾಡಬೇಕಾಗಿದ್ದುದರಿಂದ ದೇವಸ್ಥಾನದಲ್ಲಿ ಪ್ರಸಾದವನ್ನೇ ಸಿದ್ಧಪಡಿಸಿರಲಿಲ್ಲ. 

ಲಾಡು ವಿತರಣೆ: ಸೇವಾರ್ಥದಾರರಿಗೆ ವಿತರಣೆ ಮಾಡಲು ತಯಾರಿಸಲಾಗಿದ್ದ ಲಾಡುಗಳನ್ನು ಭಕ್ತರು ಹಾಗೂ ಸೇವಾರ್ಥದಾರರಿಗೆ ವಿತರಿಸಲಾಗಿದೆ. 

‘ವೈದ್ಯರು ಬಂದು ತಯಾರಿಸಿದ ಆಹಾರವನ್ನು ಪರೀಕ್ಷೆ ಮಾಡಬೇಕು. ನಂತರವೇ ಪ್ರಸಾದ ವಿತರಣೆಗೆ ಅವಕಾಶ ಎಂದು ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಹಾಗಾಗಿ, ‘ಹುಳಿ ಅವಲಕ್ಕಿ’ ಪ್ರಸಾದ ತಯಾರಿಸಲು ಮುಂದಾಗಲಿಲ್ಲ’ ಎಂದು ಕಾಡು ನಾರಾಯಣಸ್ವಾಮಿ ದೇವಸ್ಥಾನದ ಅರ್ಚಕ ರಾಮಚಂದ್ರ ಆಚಾರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷ ಪೂಜೆ: ಈ ಮಧ್ಯೆ, ವೈಕುಂಠ ಏಕಾದಶಿಯ ಅಂಗವಾಗಿ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾರಾಯಣ ಸ್ವಾಮಿಯ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆ ಆದೇಶ

ಸುಳ್ವಾಡಿ ‘ವಿಷ ಪ್ರಸಾದ’ ದುರಂತದ ನಂತರ ಎಲ್ಲ ದೇವಾಲಯಗಳಲ್ಲಿ ಪ್ರಸಾದ ಪರೀಕ್ಷೆ ನಡೆಸಿ ಬಳಿಕವೇ ಪ್ರಸಾದ ವಿತರಣೆ ಮಾಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಹಾಗೂ ಎಲ್ಲ ದೇವಾಲಯಗಳಲ್ಲಿ ಅನ್ನದಾಸೋಹಕ್ಕೆ ಅನುಮತಿ ಪಡೆಯಬೇಕು ಎಂದು ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು