ಬಹುಪಕ್ಷೀಯ ಬಾಂಧವ್ಯ: ಮಸೂದೆಗೆ ಟ್ರಂಪ್ ಸಹಿ

7

ಬಹುಪಕ್ಷೀಯ ಬಾಂಧವ್ಯ: ಮಸೂದೆಗೆ ಟ್ರಂಪ್ ಸಹಿ

Published:
Updated:
Prajavani

ವಾಷಿಂಗ್ಟನ್: ಭಾರತದ ಜತೆಗಿನ ಬಹುಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಭಾರತ–ಪೆಸಿಫಿಕ್ ಪ್ರಾಂತದಲ್ಲಿ ಅಮೆರಿಕದ ನಾಯಕತ್ವ ಹೆಚ್ಚಿಸುವಂತಹ ಮಸೂದೆಯೊಂದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. 

ಈ ಮಸೂದೆಯಲ್ಲಿ, 2005ರ ಅಮೆರಿಕ–ಭಾರತದ ರಕ್ಷಣಾ ಬಾಂಧವ್ಯ ಮತ್ತು ತಂತ್ರಜ್ಞಾನ, 2012ರ ವಾಣಿಜ್ಯ ಒಪ್ಪಂದ, 2015ರ ಭಾರತ–ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದ ಜಂಟಿ ವ್ಯೂಹಾತ್ಮಕ ಮುನ್ನೋಟ ಕಾರ್ಯಸೂಚಿಯ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ.

ಭಾರತ–ಪೆಸಿಫಿಕ್ ಪ್ರಾಂತದಲ್ಲಿ ಶಾಂತಿ, ಭದ್ರತೆ ಕಾಪಾಡಿಕೊಳ್ಳುವಲ್ಲಿ ಅಮೆರಿಕ ಹಾಗೂ ಭಾರತದ ನಡುವಿನ ವ್ಯೂಹಾತ್ಮಕ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಈ ಮಸೂದೆಯಲ್ಲಿ ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !