ರಂಗಾಸಕ್ತರಿಗೆ ಗುರುಕುಲ ಮಾದರಿ ಶಿಕ್ಷಣ

7

ರಂಗಾಸಕ್ತರಿಗೆ ಗುರುಕುಲ ಮಾದರಿ ಶಿಕ್ಷಣ

Published:
Updated:

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಯುವ ಜನರನ್ನು ವೃತ್ತಿರಂಗಭೂಮಿಯತ್ತ ಸೆಳೆಯಲು ‘ಗುರುಕುಲ ಮಾದರಿ’ಯ ರಂಗಶಿಕ್ಷಣವನ್ನು ಪ್ರಾಯೋಗಿಕವಾಗಿ ನೀಡಲು ಮುಂದಾಗಿದೆ.

ಆಸಕ್ತರಿಂದ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂದರ್ಶನದ ಮೂಲಕ 15 ಕಲಿಕಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 

ಆಯ್ಕೆಯಾಗುವ ಅಭ್ಯರ್ಥಿಗಳನ್ನು ವೃತ್ತಿರಂಗಭೂಮಿಯ ನಾಟಕ ಕಂಪನಿಗಳಿಗೆ ಕಳುಹಿಸಲು ನಿರ್ಧರಿಸಿಲಾಗಿದೆ. ಕಲಿಕಾರ್ಥಿಗಳು ಅಲ್ಲಿ 6 ತಿಂಗಳ ಕಾಲ ಗುರುಕುಲ ಮಾದರಿಯ ತರಬೇತಿ ಪಡೆಯಲಿದ್ದಾರೆ. ನಟನೆ, ಪ್ರಸಾದನ ಮತ್ತು ರಂಗಸಜ್ಜಿಕೆ ಕಲೆಗಳನ್ನು ಕರಗತ ಮಾಡಿಕೊಳ್ಳಲಿದ್ದಾರೆ. ತರಬೇತಿಯ ವೇಳೆ ಕಲಿಕಾರ್ಥಿಗಳಿಗೆ ಪ್ರತಿ ತಿಂಗಳು ತಲಾ ₹ 10 ಸಾವಿರ ಶಿಷ್ಯವೇತನ ನೀಡಲು ನಿರ್ಧರಿಸಲಾಗಿದೆ. ತರಬೇತಿ ಬಳಿಕ ರಂಗಭೂಮಿಯಡಿಗೆ ಆಕರ್ಷಿತರಾದವರನ್ನು ಆ ರಂಗದಲ್ಲೇ ಮುಂದುವರಿಯಲು ಪ್ರೋತ್ಸಾಹಿಸಲಾಗುತ್ತಿದೆ. 

‘ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡುತ್ತಿದ್ದೇವೆ. ಇದು ಯಶಸ್ವಿಯಾದರೆ, ಮುಂದಿನ ವರ್ಷದಿಂದ ಕಲಿಕಾರ್ಥಿಗಳ ಸಂಖ್ಯೆ ಹೆಚ್ಚಿಸುತ್ತೇವೆ. ಈ ರಂಗಶಿಕ್ಷಣದಲ್ಲಿ ಗ್ರಾಮೀಣ ಪ್ರದೇಶದ ಯುವಜನರಿಗೆ ಆದ್ಯತೆ ನೀಡುತ್ತೇವೆ’ ಎಂದು ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅರ್ಜಿ ಸಲ್ಲಿಸಲು ಜ.10 ಕೊನೆಯ ದಿನ. ಸಂಪರ್ಕ: 080-22237484

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !