ಚಂದ್ರನ ಅಗೋಚರ ಭಾಗ ಪ್ರವೇಶಿಸಿದ ಚೀನಾದ ಬಾಹ್ಯಾಕಾಶ ನೌಕೆ

7
ವಿಶ್ವದಲ್ಲಿಯೇ ಮೊದಲು ಎನ್ನುವ ಹೆಗ್ಗಳಿಕೆ

ಚಂದ್ರನ ಅಗೋಚರ ಭಾಗ ಪ್ರವೇಶಿಸಿದ ಚೀನಾದ ಬಾಹ್ಯಾಕಾಶ ನೌಕೆ

Published:
Updated:
Prajavani

ಬೀಜಿಂಗ್: ಈವರೆಗೆ ಯಾರೂ ಪ್ರವೇಶಿಸದ ಚಂದ್ರನ ಒಂದು ಭಾಗ ಪ್ರವೇಶಿಸುವ ಮೂಲಕ ಚೀನಾದ ಬಾಹ್ಯಾಕಾಶ ನೌಕೆ ಚಾಂಗ್’ಇ–4 ದಾಖಲೆ ನಿರ್ಮಿಸಿದೆ. 

ಬಾಹ್ಯಾಕಾಶ ಕ್ಷೇತ್ರದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಬೇಕೆನ್ನುವ ಚೀನಾದ ಯ‌ತ್ನದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. 

‘ಪೂರ್ವನಿಗದಿತ ಸ್ಥಳದಲ್ಲಿ ಗುರುವಾರ ಬೆಳಿಗ್ಗೆ 10.26ಕ್ಕೆ (ಸ್ಥಳೀಯ ಕಾಲಮಾನ) ಚಾಂಗ್’ಇ–4 ಬಂದಿಳಿದಿದ್ದು, ಚಂದ್ರನ ಈ ಭಾಗ ಪ್ರವೇಶಿಸಿದ ವಿಶ್ವದ ಮೊದಲ ಬಾಹ್ಯಾಕಾಶ ನೌಕೆ ಎನ್ನುವ
ಹೆಗ್ಗಳಿಕೆ ಪಡೆದುಕೊಂಡಿದೆ’ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ತಿಳಿಸಿದೆ. 

ಡಿ.8ರಂದು ಲಾಂಗ್ ಮಾರ್ಚ್–3ಬಿ ರಾಕೆಟ್ ಮೂಲಕ ಉಡಾವಣೆಯಾಗಿದ್ದ ಈ ನೌಕೆ, ಸ್ಥಳದ ಚಿತ್ರ ಸೆರೆಹಿಡಿದು ರವಾನಿಸಿದೆ.

ಚಂದ್ರನ ಒಂದು ಭಾಗ ಮಾತ್ರವೇ ಸದಾ ಭೂಮಿಗೆ ಗೋಚರಿಸುತ್ತದೆ. ಹೀಗೆ ಗೋಚರಿಸದ ಮ‌ತ್ತೊಂದು ಭಾಗದ ಕುರಿತು ಇದೇ ಮೊದಲ ಬಾರಿಗೆ ಅನ್ವೇಷಣೆ ನಡೆಸಲು ಚೀನಾ ಮುಂದಾಗಿದ್ದು, ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಚೀನಾದ ಸುದ್ದಿಮಾಧ್ಯಮ ವರದಿ ಮಾಡಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !