ಕಾಮಗಾರಿ ನಿಧಾನ : ಬೇಗ ಸಾಗುತ್ತಿಲ್ಲ ವಾಹನ

7

ಕಾಮಗಾರಿ ನಿಧಾನ : ಬೇಗ ಸಾಗುತ್ತಿಲ್ಲ ವಾಹನ

Published:
Updated:
Prajavani

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಿಕೆವಿಕೆ ಕ್ರಾಸ್‌ನಿಂದ ಜಕ್ಕೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಜೋಡಿರಸ್ತೆಯಲ್ಲಿ ಕಾವೇರಿನೀರು ಪೂರೈಕೆಯ ಕೊಳವೆಮಾರ್ಗ ಅಳವಡಿಸುವ ಕಾಮಗಾರಿ ನಿಧಾನವಾಗಿ ಸಾಗಿದೆ.

ಬಳ್ಳಾರಿ ಮುಖ್ಯರಸ್ತೆಯಿಂದ ಜಕ್ಕೂರು, ಶ್ರೀರಾಮಪುರ, ಸಂಪಿಗೆಹಳ್ಳಿ, ಚೊಕ್ಕನಹಳ್ಳಿಗೆ ಹಾಗೂ ಹೆಗ್ಡೆನಗರದಿಂದ ಕೆ.ಆರ್.ಪುರ, ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಕಾಮಗಾರಿಗಾಗಿ  ಕಿತ್ತುಹಾಕಲಾಗಿದೆ. ರಸ್ತೆಯಲ್ಲಿ ಸಾವಿರಾರು ವಾಹನಗಳ ಓಡಾಟ ಇರುತ್ತದೆ. ಹಾಗಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಧೂಳು ಹೇಳುತ್ತಿದೆ. ಇದರಿಂದ ದಾರಿಹೋಕರು ಸಹ ತೊಂದರೆ ಅನುಭವಿಸುತ್ತಿದ್ದಾರೆ.

ಜಲಮಂಡಳಿಯು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ಜಿಕೆವಿಕೆ ಜಂಕ್ಷನ್‌ ಸಮೀಪದಲ್ಲಿನ ಕಾಮಗಾರಿ ಕೆಲವು ದಿನಗಳಿಂದ ಸ್ಥಗಿತಗೊಂಡಿದೆ. ಕಾಮಗಾರಿಗೆ ಬಳಸುತ್ತಿದ್ದ ಪ್ರೊಕ್ಲೈನ್‌ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಲಾಗಿದೆ. ಇದರಿಂದ ವಾಹನ ಚಾಲನೆಗೆ ಅಡಚಣೆಯಾಗುತ್ತಿದೆ. 

‘ಕಾಮಗಾರಿಗಾಗಿ ಒಂದು ಕಡೆಯ ರಸ್ತೆಯನ್ನು ಬಂದ್‌ ಮಾಡುವಂತೆ ಸಂಚಾರ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರಿಂದ ಅನುಮತಿ ಸಿಕ್ಕ ತಕ್ಷಣ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಬಾಕಿ ಉಳಿದಿರುವ 40 ಮೀ. ಉದ್ದದ ಕೊಳವೆ ಮಾರ್ಗ ಜೋಡಣೆಯ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುತ್ತೇವೆ’ ಎಂದು ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಬಸವಯ್ಯ ತಿಳಿಸಿದರು.

‘ಜಕ್ಕೂರು ಬಡಾವಣೆಯ ಶನೇಶ್ವರಸ್ವಾಮಿ ದೇವಾಲಯದ ಬಳಿ ಇತ್ತೀಚೆಗೆ ಕೊಳವೆಮಾರ್ಗ ಹಾಕಿದರು. ಬಳಿಕ ರಸ್ತೆಯನ್ನು ಸರಿಯಾಗಿ ದುರಸ್ತಿ ಮಾಡಿಲ್ಲ. ಹಾಕಿದ್ದ ಡಾಂಬರು ಕಿತ್ತುಹೋಗಿದೆ. ಗುಂಡಿಗಳು ಬಿದ್ದಿವೆ. ಇಲ್ಲಿ ಬೀದಿ ದೀಪಗಳು ಇಲ್ಲ. ಅದರಿಂದ ಸಣ್ಣ–ಪುಟ್ಟ ಅಪಘಾತಗಳು ಆಗುತ್ತಿವೆ’ ಎಂದು ಸ್ಥಳೀಯರಾದ ವೆಂಕಟೇಶ್ ದೂರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !