ಚಿನ್ನಾಭರಣ ಇದ್ದ ಬ್ಯಾಗ್ ಮಹಿಳೆಗೆ ವಾಪಸ್: ಜಿಲ್ಲಾಸ್ಪತ್ರೆ ವೈದ್ಯರ ಪ್ರಾಮಾಣಿಕತೆ

7
‍ಪ್ರಾಮಾಣಿಕತೆ ಮೆರೆದ ನವನಗರದ ಜಿಲ್ಲಾ ಆಸ್ಪತ್ರೆಯ ವೈದ್ಯರು

ಚಿನ್ನಾಭರಣ ಇದ್ದ ಬ್ಯಾಗ್ ಮಹಿಳೆಗೆ ವಾಪಸ್: ಜಿಲ್ಲಾಸ್ಪತ್ರೆ ವೈದ್ಯರ ಪ್ರಾಮಾಣಿಕತೆ

Published:
Updated:
Prajavani

ಬಾಗಲಕೋಟೆ: ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣ ಇದ್ದ ಬ್ಯಾಗನ್ನು ಹಿಂತಿರುಗಿಸುವ ಮೂಲಕ ಶುಕ್ರವಾರ ಇಲ್ಲಿನ ನವನಗರದ ಜಿಲ್ಲಾ ಆಸ್ಪತ್ರೆಯ ವೈದ್ಯರು ಪ್ರಾಮಾಣಿಕತೆ ಮೆರೆದಿದ್ದಾರೆ.

ಪೊಲಿಯೊ ಲಸಿಕೆ ಹಾಕಿಸಲು ಮೊಮ್ಮಗಳನ್ನು ಹೊರ ರೋಗಿಗಳ ವಿಭಾಗಕ್ಕೆ (ಒಪಿಡಿ) ಕರೆತಂದಿದ್ದ ಬಾಗಲಕೋಟೆಯ ಪರ್ವಿನ್ ಮುಜಾವರ್, ಲಸಿಕೆ ಹಾಕಿದ ನಂತರ ಮಗು ಅಳುತಿದ್ದ ಕಾರಣ ಸಂತೈಸುವ ಭರದಲ್ಲಿ ಬ್ಯಾಗ್ ಅಲ್ಲಿಯೇ ಬಿಟ್ಟು ತೆರಳಿದ್ದರು ಎನ್ನಲಾಗಿದೆ. ಅದನ್ನು ಗಮನಿಸಿದ ವೈದ್ಯರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದರ ಅವರಿಗೆ ಬ್ಯಾಗ್ ಮುಟ್ಟಿಸಿದ್ದಾರೆ. 

ಬ್ಯಾಗ್ ಪರಿಶೀಲಿಸಿದಾಗ ಮೂರು ಚಿನ್ನದ ಉಂಗುರ, ಬೆಳ್ಳಿ ಗೆಜ್ಜೆ, ಕಡಗ ಸಿಕ್ಕಿವೆ. ಆ ಬಗ್ಗೆ ನವನಗರ ಪಿಎಸ್‌ಐ ಸಂತೋಷ ಹಳ್ಳೂರ ಅವರಿಗೆ ಡಾ.ಪ್ರಕಾಶ ಮಾಹಿತಿ ನೀಡಿದ್ದಾರೆ. ಇತ್ತ ಬ್ಯಾಗ್ ಕಳೆದುಕೊಂಡಿದ್ದ ಪರ್ವಿನ್ ಅಳುತ್ತಾ ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಸಿಬ್ಬಂದಿ ಜಿಲ್ಲಾ ಸರ್ಜನ್ ಬಳಿಗೆ ಕರೆದೊಯ್ದಿದ್ದಾರೆ. ಪಿಎಸ್‌ಐ ಕೂಡ ಅಲ್ಲಿಗೆ ಬಂದಿದ್ದು, ಬ್ಯಾಗ್‌ ಒಳಗಿರುವ ವಸ್ತುಗಳ ಬಗ್ಗೆ ಪರ್ವಿನ್ ಅವರಿಂದ ಮಾಹಿತಿ ಪಡೆದು, ಅವರ ವಿಳಾಸ ಖಚಿತಪಡಿಸಿಕೊಂಡು ವಾಪಸ್ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !