ಎಮ್ಮೆಲ್ಲೆ ಟ್ರೇನಿಂಗ್ ಸ್ಕೂಲ್!

7

ಎಮ್ಮೆಲ್ಲೆ ಟ್ರೇನಿಂಗ್ ಸ್ಕೂಲ್!

Published:
Updated:
Prajavani

‘ಮೇಡ್ ಇನ್ ಇಂಡಿಯಾ’ ಸ್ಲೋಗನ್‌ನಿಂದ ಸ್ಫೂರ್ತಿ ಪಡೆದು ‘ಎಮ್ಮೆಲ್ಲೆ ಟ್ರೇನಿಂಗ್ ಸ್ಕೂಲ್‌’ ಆರಂಭಿಸಿದ್ದ ವಿಜಿ.

‘ಮಾದರಿ ಎಮ್ಮೆಲ್ಲೆ’ ಆಗೋ ಕನಸಲ್ಲಿ ಯುವಕರು ಟ್ರೇನಿಂಗ್‌‌‌ಗೆ ಬರತೊಡಗಿದರು.

‘ಏನೇನ್ ಹೇಳಿಕೊಡ್ತೀರಿ ಸರ್...’ ಯುವಕ ಕುತೂಹಲದಿಂದ ಕೇಳಿದ.

‘ಆತ್ಮರಕ್ಷಣೆ ಕಲೆ ಕಲಿಸ್ತೀವಿ’ ಹೇಳ್ದ ವಿಜಿ.

‘ಅಂದ್ರೆ?’ ‘ಅಂದರೆ, ಸಹ ಶಾಸಕನನ್ನು ಹೇಗೆ ಹೊಡೀಬೇಕು, ಅವನು ತಿರುಗಿ ಹೊಡೆದಾಗ ಹೇಗೆ ತಡ್ಕೋಬೇಕು ಅಂತಾ ಟ್ರೇನಿಂಗ್ ಕೊಡ್ತೀವಿ’.

‘ಮತ್ತೆ ಸರ್...?’

‘ರೆಸಾರ್ಟ್ ಬಿಹೇವಿಯರ್’ ಬಗ್ಗೆ ಪ್ರೊ. ಗಣೇಶ್ ಅನ್ನೋರು ಸ್ಪೆಶಲ್ ಕ್ಲಾಸ್ ತಗೊಳ್ತಾರೆ. ಜೊತೆಗಿರೋ ಎಮ್ಮೆಲ್ಲೆಗೆ ಹಿಗ್ಗಾಮುಗ್ಗಾ ಹೊಡೆದ ನಂತರ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗೋದು ಹೇಗೆ ಅನ್ನೋದನ್ನೂ ಹೇಳಿಕೊಡ್ತಾರೆ’.

‘ಇಂಟರೆಸ್ಟಿಂಗ್ ಆಗಿದೆ ಸರ್... ಮುಂದೆ?’

‘ಹೈಕಮಾಂಡ್‌ಗೆ ಗೊತ್ತಾಗದಂತೆ ವ್ಯವಹಾರ ಮಾಡೋದನ್ನೂ ಹೇಳಿಕೊಡ್ತೀವಿ’.

‘ವ್ಯವಹಾರ ಅಂದ್ರೆ?’ ‘ಅಯ್ಯೋ ದಡ್ಡ. ಚುನಾವಣೆಗೆ ಹೂಡಿದ ಬಂಡವಾಳ ವಾಪಸ್ ತಗೋಬೇಕು ಅಂದ್ರೆ ವ್ಯವಹಾರ ಮಾಡಬೇಕು. ಬೇರೆ ಪಾರ್ಟಿಯವರು ಫೋನ್ ಮಾಡಿದಾಗ, ‘ನನ್ನ ಕ್ಷೇತ್ರದ ಜನರಿಗೆ ಮೋಸ ಮಾಡಲ್ಲ, ಪಾರ್ಟಿ ಬಿಟ್ಟು ಬರಲ್ಲ’ ಅನ್ನಬೇಕು. ಆಮೇಲೆ ಅವರು ನಿನಗೆ ರೇಟ್ ಫಿಕ್ಸ್ ಮಾಡ್ತಾರೆ. ‘ನಾನು ಪ್ರಾಮಾಣಿಕ’ ಅಂತಾ ರಾಗ ಎಳೀಬೇಕು. ಆಗ ಅವರು, ಏನ್ ಬೇಕು ಅಂತಾರೆ. ‘ಮಿನಿಸ್ಟರ್ ಮಾಡೋದಾದ್ರೆ ಬರ್ತೀನಿ’ ಅನ್ನಬೇಕು. ಓಕೆ ಅಂತಾರೆ, ಜಂಪ್ ಮಾಡಿಬಿಡಬೇಕು’.

‘ಸರ್, ಮತ್ತೆ ಈ ಜನರ ಕೆಲಸ, ಕ್ಷೇತ್ರದ ಅಭಿವೃದ್ಧಿ ಬಗ್ಗೆಯೆಲ್ಲ ಟೀಚ್ ಮಾಡಲ್ವ?’

‘ಅದನ್ನ ಹೋಮ್‌ವರ್ಕ್ ಕೊಡ್ತೀವಿ. ಪುಸ್ತಕದಲ್ಲಿ ಓದಬೇಕು, 100 ಸಲ ಬರೀಬೇಕು’.

‘ಓದಿದ್ದನ್ನ ಅನುಷ್ಠಾನಕ್ಕೆ ತರೋದು ಯಾವಾಗ ಸರ್’ ಮುದ್ದಾಗಿ ಕೇಳಿದ ಯುವಕ. ‘ಅಷ್ಟರಲ್ಲೇ ನಿನ್ ಟರ್ಮ್ ಮುಗಿದಿರುತ್ತೆ ಕಣೋ’ ನಕ್ಕ ವಿಜಿ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !