ವಿಶೇಷ ರೈಲು ಸಂಚಾರ

7

ವಿಶೇಷ ರೈಲು ಸಂಚಾರ

Published:
Updated:

ಮಂಗಳೂರು: ರಜೆ ದಿನಗಳಿರುವ ಕಾರಣದಿಂದ ಪ್ರಯಾಣಿಕರ ಸಂಖ್ಯೆಯಲ್ಲಿನ ದಟ್ಟಣೆಗೆ ಪೂರಕವಾಗಿ ಫೆಬ್ರುವರಿ 7 ಮತ್ತು 8ರಂದು ಬಾಂದ್ರಾ– ಮಂಗಳೂರು ನಡುವೆ ವಿಶೇಷ ರೈಲು ಓಡಿಸಲು ಪಶ್ಚಿಮ ರೈಲ್ವೆ ನಿರ್ಧರಿಸಿದೆ. ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಗುರುವಾರ ರಾತ್ರಿ 11.45ಕ್ಕೆ ಬಾಂದ್ರಾ ನಿಲ್ದಾಣದಿಂದ ಹೊರಡುವ ವಿಶೇಷ ರೈಲು ಶುಕ್ರವಾರ ಸಂಜೆ 7.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ಶುಕ್ರವಾರ ರಾತ್ರಿ 11 ಗಂಟೆಗೆ ಮಂಗಳೂರು ಜಂಕ್ಷನ್‌ ನಿಲ್ದಾಣದಿಂದ ಹೊರಡುವ ವಿಶೇಷ ರೈಲು ಶನಿವಾರ ಸಂಜೆ 7.30ಕ್ಕೆ ಬಾಂದ್ರಾ ನಿಲ್ದಾಣ ತಲು‍ಪಲಿದೆ.

ಈ ರೈಲು ಬೊರಿವಿಲಿ, ವಸಾಯ್‌ ರಸ್ತೆ, ಪನ್ವೇಲ್‌, ರೋಹಾ, ಖೇಡ್‌, ಚಿಪ್ಲುನ್‌, ಸಂಗಮೇಶ್ವರ್‌ ರಸ್ತೆ, ರತ್ನಗಿರಿ, ಕನಕವಲ್ಲಿ, ಕುಡಲ್‌, ಸಾವಂತ್‌ವಾಡಿ ರಸ್ತೆ, ಥಿವಿಂ, ಮಡಗಾಂವ್‌ ಜಂಕ್ಷನ್‌, ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರಸ್ತೆ– ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್‌.ಕೆ.ವರ್ಮ ತಿಳಿಸಿದ್ದಾರೆ.

ವಿಶೇಷ ರೈಲು 22 ಎಲ್‌ಎಚ್‌ಬಿ ಬೋಗಿಗಳನ್ನು ಹೊಂದಿದ್ದು, ಒಂದು ಟೂ ಟಯರ್ ಎಸಿ, ನಾಲ್ಕು ತ್ರೀ ಟಯರ್‌ ಎಸಿ, 13 ಸ್ಲೀಪರ್‌, ಎರಡು ಸಾಮಾನ್ಯ ಬೋಗಿಗಳು ಮತ್ತು ಜನರೇಟರ್‌ ಮತ್ತು ತಾಂತ್ರಿಕ ವ್ಯವಸ್ಥೆಗೆ ಸಂಬಂಧಿಸಿದ ಎರಡು ಬೋಗಿಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !