ಬುಧವಾರ, ಮಾರ್ಚ್ 3, 2021
25 °C

ಅಂತೂ ಲಯಕ್ಕೆ ಮರಳಿದ ರಾಹುಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಯನಾಡು: ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯದಿಂದಾಗಿ ಬಸವಳಿದಿದ್ದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಶುಕ್ರವಾರ ಅಂತೂ ಇಂತೂ ಲಯಕ್ಕೆ ಮರಳಿದರು.

ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ’ಟೆಸ್ಟ್‌’ ಪಂದ್ಯದಲ್ಲಿ ಭಾರತ  ‘ಎ’ ತಂಡದ ನಾಯಕತ್ವ ವಹಿಸಿರುವ ರಾಹುಲ್  (ಬ್ಯಾಟಿಂಗ್ 88) ಶತಕದತ್ತ ಹೆಜ್ಜೆ ಇಟ್ಟಿದ್ದಾರೆ. ಕೃಷ್ಣಗಿರಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ  ನವದೀಪ್ ಸೈನಿ (79ಕ್ಕೆ5) ಅವರ ಉತ್ತಮ ಬೌಲಿಂಗ್‌ ಎದುರು ಇಂಗ್ಲೆಂಡ್ ಲಯನ್ಸ್‌ 340 ರನ್‌ಗಳಿಗೆ ಆಲೌಟ್ ಆಯಿತು.

ಗುರಿ ಬೆನ್ನಟ್ಟಿದ ಭಾರತ ‘ಎ’ ತಂಡವು ಉತ್ತಮ ಆರಂಭ ಮಾಡಿತು. 31 ರನ್ ಗಳಿಸಿದ ಈಶ್ವರನ್ ಔಟಾದ ನಂತರ ರಾಹುಲ್ ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅವರು ಪ್ರಿಯಾಂಕ್ ಪಾಂಚಾಲ್ (ಬ್ಯಾಟಿಂಗ್ 89 ) ಜೊತೆಗೂಡಿ ಇನಿಂಗ್ಸ್‌ಗೆ ಗಟ್ಟಿಯಾದ ಅಡಿಪಾಯ ಹಾಕಿದರು. ಇದರಿಂದಾಗಿ ದಿನದಾಟದ ಅಂತ್ಯಕ್ಕೆ ತಂಡವು ಒಂದು ವಿಕೆಟ್ ಗೆ 291 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ ಲಯನ್ಸ್‌: 104.3 ಓವರ್‌ಗಳಲ್ಲಿ 340 (ಬೆನ್ ಡಕೆಟ್ 80, ವಿಲ್ ಜ್ಯಾಕ್‌ 63, ಸ್ಯಾಮ್ ಹೈನ್ 61, ನವದೀಪ್ ಸೈನಿ 79ಕ್ಕೆ5), ಭಾರತ ’ಎ’: ಒಂದು ವಿಕೆಟ್‌ಗೆ 291 (ಕೆ.ಎಲ್. ರಾಹುಲ್ ಬ್ಯಾಟಿಂಗ್ 88, ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ 89, ಎ.ಆರ್. ಈಶ್ವರನ್ 31).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು