ಕನ್ನಡತಿ ನಾಯಕತ್ವದ ಗೋವಾ ತಂಡಕ್ಕೆ ಗೆಲುವು

ಭಾನುವಾರ, ಮೇ 26, 2019
22 °C
ಬಿಸಿಸಿಐ ಎಲೈಟ್ ಹಂತದ ಕ್ರಿಕೆಟ್ ಟೂರ್ನಿ: ಆಲ್‌ರೌಂಡ್ ಆಟ ಪ್ರದರ್ಶಿಸಿದ ತೇಜಸ್ವಿನಿ ದುರ್ಗದ

ಕನ್ನಡತಿ ನಾಯಕತ್ವದ ಗೋವಾ ತಂಡಕ್ಕೆ ಗೆಲುವು

Published:
Updated:
Prajavani

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಹನಾಪುರದ ತೇಜಸ್ವಿನಿ ದುರ್ಗದ ನಾಯಕತ್ವದ ಗೋವಾ ಮಹಿಳಾ ಕ್ರಿಕೆಟ್ ತಂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶನಿವಾರ ಆಯೋಜಿಸಿದ್ದ ಎಲೈಟ್ ಪಂದ್ಯಾವಳಿಯಲ್ಲಿ ತಮಿಳುನಾಡು ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ.

ಗೋವಾದ ಪಣಜಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ ತೇಜಸ್ವಿನಿ ತಂಡವನ್ನು ಗೆಲುವಿನ ದಡಮುಟ್ಟಿಸಿದರು. ನಿಗದಿತ 10 ಓವರ್‌ಗಳಲ್ಲಿ 19 ರನ್‌ ನೀಡಿ ನಾಲ್ಕು ವಿಕೆಟ್ ಪಡೆದ ತೇಜಸ್ವಿನಿ, ಬ್ಯಾಟಿಂಗ್‌ನಲ್ಲಿ 45 ರನ್‌ಗಳಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ 45.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 99 ರನ್ ಗಳಿಸಿತ್ತು. ತಮಿಳುನಾಡು ಪರವಾಗಿ ಎಲೋಕ್ಸಿ 21, ಸುಶಾಂತಿಕಾ 22 ರನ್‌ಗಳಿಸಿದರು. ತಂಡದಲ್ಲಿ ಇಬ್ಬರು ಮಾತ್ರ ಎರಡಂಕಿ ಮೊತ್ತ ತಲುಪಿದರು. ಸುಲಭ ಗುರಿಯನ್ನು ಬೆನ್ನತ್ತಿದ ಅತಿಥೇಯ ಗೋವಾ ತಂಡ ಐದು ವಿಕೆಟ್ ಕಳೆದುಕೊಂಡು 30.1 ಓವರ್‌ಗಳಲ್ಲಿ ವಿಜಯದ ಗುರಿ ಮುಟ್ಟಿತು.

ಗೋವಾ ತಂಡದ ಪರ ತೇಜಸ್ವಿನಿಗೆ ಉತ್ತಮ ಜೊತೆಯಾಟ ನೀಡಿದ ತಾನ್ಯಾ ನಾಯಕ್ 20 ರನ್‌ಗಳಿಸಿದರೆ ದೀಕ್ಷಾ ಗಾವಡೆ 14 ರನ್ ಹೊಡೆದರು. ಗೋವಾ ಪರವಾಗಿ ಬೌಲಿಂಗ್‌ನಲ್ಲಿ ತೇಜಸ್ವಿನಿಗೆ ಉತ್ತಮ ಸಾಥ್ ನೀಡಿದ ದೀಕ್ಷಾ ಗಾವಡೆ ಹಾಗೂ ಸವಾಲಿ ಕೊಲಂಬಕರ್ ತಲಾ ಎರಡು ವಿಕೆಟ್ ಪಡೆದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !