ಪಿಯುಸಿ ಪರೀಕ್ಷೆ ಸುಸೂತ್ರ ಆರಂಭ

ಮಂಗಳವಾರ, ಮಾರ್ಚ್ 19, 2019
28 °C
ಜಿಲ್ಲೆಯ 22 ಕೇಂದ್ರಗಳಲ್ಲಿ ಮೊದಲ ದಿನ 11,528 ವಿದ್ಯಾರ್ಥಿಗಳು ಹಾಜರು, ಭೌತವಿಜ್ಞಾನ, ಅರ್ಥಶಾಸ್ತ್ರ ಪರೀಕ್ಷೆಗಳಿಗೆ 446 ವಿದ್ಯಾರ್ಥಿಗಳು ಗೈರು

ಪಿಯುಸಿ ಪರೀಕ್ಷೆ ಸುಸೂತ್ರ ಆರಂಭ

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ 22 ಕೇಂದ್ರಗಳಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸುಗಮವಾಗಿ ನಡೆದಿದೆ. ಜಿಲ್ಲೆಯಾದ್ಯಂತ ಯಾವುದೇ ಡಿಬಾರ್ ಆಗಿರುವ ಪ್ರಕರಣದ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಈ ಬಾರಿ 13,053 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆ ಪೈಕಿ ಮೊದಲ ದಿನ 11,528 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.

ಅರ್ಥಶಾಸ್ತ್ರ ಮತ್ತು ಭೌತವಿಜ್ಞಾನ ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ನಡೆದವು. ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ 11,974 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಆ ಪೈಕಿ 11,528 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 446 ವಿದ್ಯಾರ್ಥಿಗಳು ಗೈರಾದರು.

ತಾಲ್ಲೂಕುವಾರು ವಿವರ
ಅರ್ಥಶಾಸ್ತ್ರ ವಿಷಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 1,939 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 1,837 ವಿದ್ಯಾರ್ಥಿಗಳು ಹಾಜರಾಗಿ, 102 ಜನರು ಗೈರಾದರು. ಬಾಗೇಪಲ್ಲಿಯಲ್ಲಿ 1,124 ವಿದ್ಯಾರ್ಥಿಗಳ ಪೈಕಿ 1,081 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 61 ವಿದ್ಯಾರ್ಥಿಗಳು ಗೈರಾದರು. ಗೌರಿಬಿದನೂರಿನಲ್ಲಿ 1,624 ವಿದ್ಯಾರ್ಥಿಗಳಲ್ಲಿ 1,561 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡರು.

ಶಿಡ್ಲಘಟ್ಟದಲ್ಲಿ 826 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿಲ್ಲ. 797 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಚಿಂತಾಮಣಿಯಲ್ಲಿ 2,216 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆ ಪೈಕಿ 111 ವಿದ್ಯಾರ್ಥಿಗಳು ಗೈರಾಗಿ, 2,105 ಮಂದಿ ಹಾಜರಾಗಿದ್ದರು. ಗುಡಿಬಂಡೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ 118 ವಿದ್ಯಾರ್ಥಿಗಳ ಪೈಕಿ 11 ಜನರು ಗೈರಾಗಿದ್ದರು.

ಭೌತವಿಜ್ಞಾನ ವಿಷಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 1,157 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 1,141 ವಿದ್ಯಾರ್ಥಿಗಳು ಹಾಜರಾಗಿ, 16 ಜನರು ಗೈರಾದರು. ಬಾಗೇಪಲ್ಲಿಯಲ್ಲಿ 441 ವಿದ್ಯಾರ್ಥಿಗಳ ಪೈಕಿ 8 ಜನರು ಗೈರಾಗಿ 433 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಗೌರಿಬಿದನೂರಿನಲ್ಲಿ 617 ವಿದ್ಯಾರ್ಥಿಗಳ ಪೈಕಿ 13 ಮಂದಿ ಹಾಜರಾಗಲಿಲ್ಲ. 604 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.

ಶಿಡ್ಲಘಟ್ಟದಲ್ಲಿ 671 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿಲ್ಲ. 761 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಚಿಂತಾಮಣಿಯಲ್ಲಿ 1,220 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆ ಪೈಕಿ 22 ವಿದ್ಯಾರ್ಥಿಗಳು ಗೈರಾಗಿ, 1,198 ಮಂದಿ ಹಾಜರಾಗಿದ್ದರು. ಗುಡಿಬಂಡೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ 3 ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾದರು.

ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ 6, ಚಿಂತಾಮಣಿಯಲ್ಲಿ 6, ಶಿಡ್ಲಘಟ್ಟದಲ್ಲಿ 2, ಗೌರಿಬಿದನೂರಿನಲ್ಲಿ 4, ಬಾಗೇಪಲ್ಲಿ-ಯಲ್ಲಿ 1 ಮತ್ತು ಗುಡಿಬಂಡೆಯಲ್ಲಿ 1 ಹೀಗೆ 22 ಕೇಂದ್ರ ತೆರೆಯಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೊಠಡಿಗೂ ಸಿಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷೆ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ವಿಚಕ್ಷಣಾ ದಳ ರಚಿಸಲಾಗಿದೆ. ಈ ದಳದಲ್ಲಿ ತಲಾ ಮೂವರು ಅಧಿಕಾರಿಗಳಿದ್ದು, ಇದಲ್ಲದೆ ತಾಲ್ಲೂಕು ಮಟ್ಟದಲ್ಲಿ 13 ಸಂಚಾರಿ ಜಾಗೃತ ದಳಗಳನ್ನು ನಿಯೋಜಿಸಲಾಗಿದೆ. ಇದರಲ್ಲೂ ತಲಾ ಮೂವರು ಅಧಿಕಾರಿಗಳು ಇರುತ್ತಾರೆ. ಜತೆಗೆ ಇಲಾಖೆಯ ಉಪನಿರ್ದೇಶಕರ ನೇತೃತ್ವದ ಜಾಗೃತ ದಳವೂ ಜಿಲ್ಲೆಯಾದ್ಯಂತ ಸಂಚರಿಸುತ್ತಿದೆ.

ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಸುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಸಮೀಪದ ಝೆರಾಕ್ಸ್‌ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ಕೇಂದ್ರಗಳಲ್ಲಿ ಪೊಲೀಸ್‌ ಸಿಬ್ಬಂದಿ ಜತೆಗೆ ಆರೋಗ್ಯ ಸಹಾಯಕಿಯರ ನಿಯೋಜಿಸಲಾಗಿತ್ತು.

ಅಂಕಿಅಂಶಗಳು...
ಪಿಯುಸಿ ಪರೀಕ್ಷೆ ಚಿತ್ರಣ

13,053 –ಪರೀಕ್ಷೆ ಹೆಸರು ನೋಂದಾಯಿಸಿಕೊಂಡವರು
6,543 –ಬಾಲಕರು
6,510 –ಬಾಲಕಿಯರು
11,039 –ಹೊಸ ವಿದ್ಯಾರ್ಥಿಗಳು
350 –ಮರು ಪರೀಕ್ಷೆ ಬರೆಯುವವರು
1,660 –ಖಾಸಗಿ ಅಭ್ಯರ್ಥಿಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !