ಡುಪ್ಲೆಸಿ ಶತಕ; ದಕ್ಷಿಣ ಆಫ್ರಿಕಾಕ್ಕೆ ಜಯ

ಮಂಗಳವಾರ, ಮಾರ್ಚ್ 26, 2019
22 °C

ಡುಪ್ಲೆಸಿ ಶತಕ; ದಕ್ಷಿಣ ಆಫ್ರಿಕಾಕ್ಕೆ ಜಯ

Published:
Updated:
Prajavani

ಜೋಹಾನ್ಸ್‌ ಬರ್ಗ್ : ನಾಯಕ ಫಾಫ್ ಡುಪ್ಲೆಸಿ (ಔಟಾಗದೆ 112, 114ಎಸೆತ, 15ಬೌಂಡರಿ, 1ಸಿಕ್ಸರ್) ಅವರ ಭರ್ಜರಿ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ  ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಲುಂಗಿ ಎನ್‌ಗಿಡಿ ಮತ್ತು ಇಮ್ರಾನ್ ತಾಹೀರ್ ಅವರ ದಾಳಿಯ ಮುಂದೆ ಶ್ರೀಲಂಕಾ ತಂಡವು 231 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ (81 ರನ್) ಮತ್ತು ಫಾಫ್ ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 136 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಗೆಲುವು ಸುಲಭವಾಯಿತು.

ಸ್ಕೋರು: ಶ್ರೀಲಂಕಾ : 47 ಓವರ್‌ಗಳಲ್ಲಿ 231 (ಕುಶಾಲ ಪರೆರಾ 33, ಫರ್ನಾಂಡೊ 49, ಮೆಂಡಿಸ್ 60, ಡಿಸಿಲ್ವಾ 39, ಲುಂಗಿ ಎನ್‌ಗಿಡಿ 60ಕ್ಕೆ3,  ಇಮ್ರಾನ್ ತಾಹೀರ್ 26ಕ್ಕೆ3) ದಕ್ಷಿಣ ಆಫ್ರಿಕಾ :  38.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 232 (ಕ್ವಿಂಟನ್ ಡಿ ಕಾಕ್ 81, ಫಾಫ್ ಡುಪ್ಲೆಸಿ ಔಟಾಗದೆ 112, ವ್ಯಾನ್‌ ಡೆರ್ ಡಸೆನ್ 32) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 8 ವಿಕೆಟ್‌ಗಳ ಜಯ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !