ರಾಜ್ಯದ ಪಿಜಿ ಮೆಡಿಕಲ್‌ ಸೀಟ್‌ಗಳ ಸಂಖ್ಯೆ ಹೆಚ್ಚಳ

ಶನಿವಾರ, ಮಾರ್ಚ್ 23, 2019
34 °C

ರಾಜ್ಯದ ಪಿಜಿ ಮೆಡಿಕಲ್‌ ಸೀಟ್‌ಗಳ ಸಂಖ್ಯೆ ಹೆಚ್ಚಳ

Published:
Updated:

ಬೆಂಗಳೂರು: ರಾಜ್ಯದ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆಯನ್ನು 571 ಹೆಚ್ಚಿಸಲು ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಸಮ್ಮತಿ ನೀಡಿದೆ.

ಇದರಿಂದ ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆ 771 ರಿಂದ 1,342ಕ್ಕೆ ಏರಿಕೆ ಆಗಲಿದೆ. ಎಂಸಿಐನ ಗವರ್ನರ್‌ಗಳ ಮಂಡಳಿ ಇತ್ತೀಚೆಗೆ ಸಭೆ ಸೇರಿ, ಪಿಜಿ ಡಿಪ್ಲೊಮಾಗಳನ್ನು ಸ್ನಾತಕೋತ್ತರ ಕೋರ್ಸ್‌ಗಳನ್ನಾಗಿ ಪರಿವರ್ತಿಸಲು ಒಪ್ಪಿಕೊಂಡಿದೆ.

‘ತಜ್ಞರ ತಂಡ ನೀಡಿರುವ ಶಿಫಾರಸ್ಸಿನ ಮೇರೆಗೆ ಈ ಪರಿವರ್ತನೆಗೆ ಅನುಮತಿ ನೀಡಲಾಗಿದೆ’ ಎಂದು ಎಂಸಿಐ ತಿಳಿಸಿದೆ.

ಬೆಂಗಳೂರು ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ 36 ಡಿಪ್ಲೊಮಾ ಸೀಟುಗಳನ್ನು ಬಿಟ್ಟುಕೊಟ್ಟು, ಪಿಜಿ ಸಿಟುಗಳನ್ನು ಪಡೆದುಕೊಂಡಿದೆ. ಇದರಿಂದ ಸ್ನಾತಕೋತ್ತರ ಸೀಟುಗಳ ಸಂಖ್ಯೆ 79 ರಿಂದ 115 ಕ್ಕೆ ಏರಿಕೆಯಾಗಿದೆ.

ಅಲ್ಲದೆ, ರಾಜ್ಯಕ್ಕೆ 80 ಹೆಚ್ಚುವರಿ ಸ್ನಾತಕೋತ್ತರ ಸೀಟ್‌ಗಳನ್ನು ನೀಡಲಾಗಿದೆ. ‘ಪಿಜಿ ಡಿಪ್ಲೊಮಾ ಎರಡು ವರ್ಷಗಳ ಕೋರ್ಸ್‌ ಆಗಿದ್ದು, ಸ್ನಾತಕೋತ್ತರ ಕೋರ್ಸ್‌ ಮೂರು ವರ್ಷಗಳದ್ದು. ಪಿಜಿ ಡಿಪ್ಲೊಮಾಗಿಂತಲೂ ಸ್ನಾತಕೋತ್ತರ ಕೋರ್ಸ್‌ಗೆ ಹೆಚ್ಚಿನ ಮನ್ನಣೆ ಇದೆ’ ಎಂದು ಬೆಂಗಳೂರು ಮೆಡಿಕಲ್‌ ಕಾಲೇಜಿನ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !