ಐಪಿಎಲ್ ಪಂದ್ಯಗಳು ರಾತ್ರಿ 8ಕ್ಕೆ ಆರಂಭ: ಮೊದಲ ಪಂದ್ಯದಲ್ಲಿ ಆರ್‌ಸಿಬಿvsಸಿಎಸ್‌ಕೆ

ಬುಧವಾರ, ಮಾರ್ಚ್ 27, 2019
26 °C

ಐಪಿಎಲ್ ಪಂದ್ಯಗಳು ರಾತ್ರಿ 8ಕ್ಕೆ ಆರಂಭ: ಮೊದಲ ಪಂದ್ಯದಲ್ಲಿ ಆರ್‌ಸಿಬಿvsಸಿಎಸ್‌ಕೆ

Published:
Updated:

ನವದೆಹಲಿ: ಇದೇ 23ರಿಂದ ನಡೆಯಲಿರುವ  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯಗಳ  ಆರಂಭದ ಸಮಯದಲ್ಲಿ ಬದಲಾವಣೆ ಇಲ್ಲ. ರಾತ್ರಿ ಎಂಟರಿಂದಲೇ ಆರಂಭವಾಗುತ್ತವೆ ಎಂದು ಬಿಸಿಸಿಐ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ  ವಿನೋದ್ ರಾಯ್ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ರಾತ್ರಿಯ ಪಂದ್ಯಗಳು ಏಳು ಗಂಟೆಯಿಂದ ಆರಂಭವಾಗಲಿವೆ ಎಂಬ ಊಹಾಪೋಹಗಳಿಗೆ ಅವರು ಗುರುವಾರ ತೆರೆ ಎಳೆದಿದ್ದಾರೆ.

‘ಮಧ್ಯಾಹ್ನದ ಪಂದ್ಯಗಳು ನಾಲ್ಕು ಗಂಟೆಗೆ ಮತ್ತು ರಾತ್ರಿಯ ಪಂದ್ಯಗಳು ಎಂಟು ಗಂಟೆಗೆ ಆರಂಭವಾಗಲಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಟೂರ್ನಿಯ ಪ್ಲೇ ಆಫ್‌ ಹಂತದ ಪಂದ್ಯಗಳು ಮತ್ತು ಫೈನಲ್ ಪಂದ್ಯವು ರಾತ್ರಿ 7ರಿಂದ ನಡೆಯಲಿವೆ ಎಂದು ತಿಳಿಸಿದ್ದಾರೆ.

23ರಂದು ಮೊದಲ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !