ನವೀನ್‌ಚಂದ್ರ ಸುವರ್ಣ ಪುನರಾಯ್ಕೆ

ಸೋಮವಾರ, ಮಾರ್ಚ್ 25, 2019
21 °C

ನವೀನ್‌ಚಂದ್ರ ಸುವರ್ಣ ಪುನರಾಯ್ಕೆ

Published:
Updated:
Prajavani

ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷರಾಗಿ ಉದ್ಯಮಿ ನವೀನ್‌ಚಂದ್ರ ಡಿ.ಸುವರ್ಣ ಪುನರಾಯ್ಕೆಯಾಗಿದ್ದಾರೆ.

ಯೂನಿಯನ್‌ನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಚಾಲಕ ಕೆ.ಎ.ಜಯಚಂದ್ರ ನೇತೃತ್ವದಲ್ಲಿ ತ್ತೀಚೆಗೆ ನಡೆದ ಸಂಘಟನೆಯ 50 ಆಡಳಿತ ಸದಸ್ಯರ ಸಭೆಯಲ್ಲಿ ನವೀನ್‌ಚಂದ್ರ ಸುವರ್ಣ ಅವರನ್ನು 2019–20ನೇ ಸಾಲಿಗೆ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು. ಇವರು 25 ವರ್ಷಗಳಿಂದ ಅಖಿಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷರಾಗಿದ್ದಾರೆ.

ನವೀನ್‌ಚಂದ್ರ ಸುವರ್ಣ ಅವರು ಯೂನಿಯನ್‌ ನೇತೃತ್ವ ವಹಿಸಿರುವುದರ ಜೊತೆಯಲ್ಲೇ ಕುದ್ರೋಳಿಯ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಸುಂಕದಕಟ್ಟೆಯ ಶ್ರೀ ನಿರಂಜನಸ್ವಾಮಿ ವಿದ್ಯಾಸಂಸ್ಥೆಗಳ ಆಡಳಿತ ಟ್ರಸ್ಟಿಯಾಗಿ, ಕಾಟಿಪಳ್ಳದ ನಾರಾಯಣಗುರು ಶಿಕ್ಷಣ ಸಂಸ್ಥೆ ಮತ್ತು ಕೋಲಾರದ ಡಿ.ದೇವರಾಜ ರಸು ಶಿಕ್ಷಣ ಸಂಸ್ಥೆಗಳ ಟ್ರಸ್ಟಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !