ರವಿಶಾಸ್ತ್ರಿ ಮುಂದುವರಿಕೆಗೆ ನಿಯಮದಲ್ಲಿ ಅವಕಾಶವಿಲ್ಲ: ಬಿಸಿಸಿಐ

ಗುರುವಾರ , ಏಪ್ರಿಲ್ 25, 2019
33 °C

ರವಿಶಾಸ್ತ್ರಿ ಮುಂದುವರಿಕೆಗೆ ನಿಯಮದಲ್ಲಿ ಅವಕಾಶವಿಲ್ಲ: ಬಿಸಿಸಿಐ

Published:
Updated:
Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲು ಒಪ್ಪಂದ ನಿಯಮದಲ್ಲಿ ಅವಕಾಶ ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.

ಯುರೋಪ್‌ನ ದೊಡ್ಡ ಫುಟ್‌ಬಾಲ್ ಕ್ಲಬ್‌ಗಳೂ ಮತ್ತು ಎನ್‌ಬಿಎನಲ್ಲಿ ತಂಡಗಳ ಕೋಚ್‌ಗಳ ಒಪ್ಪಂದವನ್ನು ನವೀಕರಣ ಮಾಡುವ ಅವಕಾಶ ಇದೆ. ಆದರೆ ಅನಿಲ್ ಕುಂಬ್ಳೆ ಅವರು ಮುಖ್ಯ ಕೋಚ್ ಆದ ಸಂದರ್ಭದಿಂದ ಕೋಚ್ ಒಪ್ಪಂದವನ್ನು ನವೀಕರಿಸುವ ನಿಯಮವನ್ನು ಕಲ್ಪಿಸಲಾಗಿಲ್ಲ/

‘ವಿಶ್ವಕಪ್ ಟೂರ್ನಿ ಮುಗಿಯುವವರೆಗೆ ರವಿಶಾಸ್ತ್ರಿ ಅವರು ತಮ್ಮ ಸ್ಥಾನದಲ್ಲಿ ಇರುತ್ತಾರೆ. ಟೂರ್ನಿಯ ನಂತರ ಅವರ ಸೇವಾವಧಿ ಮುಗಿಯಲಿದೆ. ಒಂದೊಮ್ಮೆ ಭಾರತವು ವಿಶ್ವಕಪ್ ಗೆದ್ದರೂ ಇದೇ ನಿಯಮ ಇರಲಿದೆ. ಹೊಸದಾಗಿ ಅರ್ಜಿ ಆಹ್ವಾನಿಸಿ, ಸಂದರ್ಶನ ನಡೆಸಿ ಕೋಚ್‌ಗಳ ನೇಮಕ ಮಾಡಲಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

’ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಗುತ್ತಿಗೆ ಕೂಡ ವಿಶ್ವಕಪ್ ಟೂರ್ನಿಯ ನಂತರ ಮುಗಿಯಲಿದೆ. ಆದರೆ, ಟೂರ್ನಿ ಮುಗಿದ 15 ದಿನಗಳ ನಂತರ ವಿಶ್ಟ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭವಾಗಲಿದೆ. ಈ ಅಲ್ಪ ಅವಧಿಯಲ್ಲಿಯೇ ಎಲ್ಲ ಪ್ರಕ್ರಿಯೆಗಳನ್ನೂ ಕೈಗೊಳ್ಳಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !