ಶನಿವಾರ, ಡಿಸೆಂಬರ್ 7, 2019
18 °C

ಗಾಲ್ಫರ್‌ಗಳ ಐಪಿಎಲ್ ಪ್ರೀತಿ

Published:
Updated:
Prajavani

ಗುರುಗ್ರಾಮ: ಐಪಿಎಲ್ ಜ್ವರ ಈಗ ಬೇರೆ ಕ್ರೀಡೆಗಳ ಆಟಗಾರರನ್ನೂ ಆವರಿಸುತ್ತಿದೆ.

ಇಲ್ಲಿ ನಡೆಯಲಿರುವ ಹೀರೊ ಇಂಡಿಯನ್ ಓಪನ್ ಗಾಲ್ಫ್‌ ಟೂರ್ನಿಯಲ್ಲಿ ಆಡಲು ಬಂದಿರುವ ವಿಶ್ವದ ಪ್ರಮುಖ ಆಟಗಾರರೂ ಈಗ ಐಪಿಎಲ್ ಕ್ರಿಕೆಟ್ ಪ್ರೀತಿಯಲ್ಲಿ ಸಿಲುಕಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಭಿಮಾನಿಯಾಗಿರುವ ಗಾಲ್ಫರ್ ಶಿವ ಕಪೂರ್, ‘ನ್ಯೂಜಿಲೆಂಡ್‌ನಲ್ಲಿ ಆಡಲು ಹೋದಾಗ ಕ್ರಿಕೆಟ್‌ ಮೇಲೆ ಪ್ರೀತಿ ಹೆಚ್ಚಿತು. ಅಲ್ಲಿ ಸ್ಟೀಫನ್ ಫ್ಲೆಮಿಂಗ್ ಜೊತೆಗೆ ಆಡಿದ್ದೆ‘ ಎಂದು ನೆನಪಿಸಿಕೊಳ್ಳುತ್ತಾರೆ.

ದಕ್ಷಿಣ ಆಫ್ರಿಕಾದ ಗಾಲ್ಫರ್ ಬ್ರೆಂಡನ್ ಸ್ಟೋನ್ ಅವರಿಗೆ ಐಪಿಎಲ್ಪಂದ್ಯ ವೀಕ್ಷಿಸಲು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ, ಕ್ರಿಸ್ ಮೊರಿಸ್ ಅವರು ಟಿಕೆಟ್‌ ಕೊಡುವುದಾಗಿ ಹೇಳಿದ್ದಾರಂತೆ.

‘ಕೆಕೆಆರ್ ತಂಡದಲ್ಲಿಯೂ ನನ್ನ ಗೆಳೆಯ ಜಾಕಸ್ ಕಾಲಿಸ್ ಇದ್ದಾರೆ. ಅವರು ಆ ತಂಡದ ಕೋಚ್ ಆಗಿದ್ದಾರೆ. ಆದ್ದರಿಂದ ಐಪಿಎಲ್ ಜೊತೆಗಿನ ನಂಟು ಗಾಢವಾಗಿದೆ’ ಎಂದು ಸ್ಟೋನ್ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು