ಗುಳ್ಯ: ಗಿರಿಜನರಿಂದ ಚುನಾವಣಾ ಬಹಿಷ್ಕಾರ

ಶುಕ್ರವಾರ, ಏಪ್ರಿಲ್ 26, 2019
21 °C

ಗುಳ್ಯ: ಗಿರಿಜನರಿಂದ ಚುನಾವಣಾ ಬಹಿಷ್ಕಾರ

Published:
Updated:

ಕಳಸ: ತಾಲ್ಲೂಕಿನ ದುರ್ಗಮ ಗ್ರಾಮವಾದ ಗುಳ್ಯದ ಮತದಾರರು ಮುಂಬರುವ ಸಂಸತ್ ಚುನಾವಣೆ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಗ್ರಾಮದ ಮೂಲಸೌಲಭ್ಯಗಳ ಕೊರತೆ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಈ ತೀರ್ಮಾನ ಕೈಗೊಂಡಿರುವುದಾಗಿ ಗ್ರಾಮಸ್ಥರಾದ ಆದಪ್ಪ, ಪ್ರದೀಪ, ಪ್ರಭಾಕರ, ಚೈತ್ರ, ವಾಸುದೇವ, ಜಯಂತ, ಪಾರ್ವತಿ, ಅಮಿತ ಮತ್ತಿತರರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಸಂಸೆ ಗ್ರಾಮದ ಗುಳ್ಯ ಪ್ರದೇಶದಲ್ಲಿ ಗಿರಿಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇದು ನಕ್ಸಲ್ ಪ್ರಭಾವಿತ ಪ್ರದೇಶವೂ ಹೌದು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಇದ್ದರೂ ನಮ್ಮ ಗ್ರಾಮದ ಮೂಲಸೌಲಭ್ಯದ ಬಗ್ಗೆ ಅಧಿಕಾರಿಗಳು ಗಮನ ಹರಿಸದೇ ಇರುವುದು ಬೇಸರದ ಸಂಗತಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮದಲ್ಲಿ ಹರಿಯುವ ಸೋಮಾವತಿ ನದಿಗೆ ಅಡ್ಡಲಾಗಿ ಸೇತುವೆ ಮತ್ತು ಗ್ರಾಮದ ರಸ್ತೆಗೆ ಕಾಂಕ್ರೀಟೀಕರಣ ಮಾಡಬೇಕು ಎಂದು ಬಹಳಷ್ಟು ಅರ್ಜಿಗಳನ್ನು ನೀಡಿ ಬೇಸತ್ತಿದ್ದೇವೆ. ಮಳೆಗಾಲದಲ್ಲಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಸಂಸೆಯ ಶಾಲೆಗೆ ಅಥವಾ ಇತರೆ ಕೆಲಸಕ್ಕೆ ತೆರಳಲು ಅಪಾಯಕಾರಿ ನದಿ ದಾಟಬೇಕಾಗುತ್ತದೆ. 4 ಕಿ.ಮೀ. ಹಾದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವ ಗ್ರಾಮಸ್ಥರ ಕಷ್ಟ ಜನಪ್ರತಿನಿಧಿಗಳಿಗೆ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು ನಮ್ಮನ್ನು ಈ ದುರ್ಗತಿಯಿಂದ ಪಾರು ಮಾಡುವ ಭರವಸೆ ಇಲ್ಲ. ಆದ್ದರಿಂದ ಮುಂಬರುವ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !