ಜಾತಿ ಪ್ರಸ್ತಾಪ: ಶಿವರಾಮೇಗೌಡ ವಿರುದ್ಧ ಎಫ್‌ಐಆರ್‌ ದಾಖಲು

ಸೋಮವಾರ, ಏಪ್ರಿಲ್ 22, 2019
33 °C

ಜಾತಿ ಪ್ರಸ್ತಾಪ: ಶಿವರಾಮೇಗೌಡ ವಿರುದ್ಧ ಎಫ್‌ಐಆರ್‌ ದಾಖಲು

Published:
Updated:

ಮಂಡ್ಯ: ಸುಮಲತಾ, ರಾಕ್‌ಲೈನ್‌ ವೆಂಕಟೇಶ್‌, ದರ್ಶನ್‌ ಅವರ ಜಾತಿ ಪ್ರಸ್ತಾಪ ಮಾಡಿರುವ ಸಂಸದ ಎಲ್‌.ಆರ್‌.ಶಿವರಾಮೇಗೌಡ ವಿರುದ್ಧ ನಾಗಮಂಗಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶಿವರಾಮೇಗೌಡರ ವಿರುದ್ಧ ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಕಬ್ಬಾಳಯ್ಯ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಚುನಾವಣಾಧಿಕಾರಿ ಸೂಚನೆ ಅನ್ವಯ ಎಫ್‌ಐಆರ್‌ ದಾಖಲಾಗಿದೆ. ಜನಪ್ರತಿನಿಧಿ ಕಾಯ್ದೆ ಕಲಂ 125ರ ಅನ್ವರ ಪ್ರಕರಣ ದಾಖಲಾಗಿದೆ.

‘ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ನಾಯ್ಡು ಜನಾಂಗದವರು. ಕಾಕ್‌ಲೈನ್‌ ವೆಂಕಟೇಶ್‌, ದರ್ಶನ್‌ ಕೂಡ ನಾಯ್ಡು ಜನಾಂಗದವರು. ಇವರು ಮಂಡ್ಯವನ್ನು ನಾಯ್ಡುಮಯಗೊಳಿಸಿಲು ಹೊರಟಿದ್ದಾರೆ’ ಎಂದು ಶಿವರಾಮೇಗೌಡ ಆರೋಪಿಸಿದ್ದರು.

ಇವನ್ನೂ ಓದಿ... 

* ಮಂಡ್ಯ ನಾಯ್ಡುಮಯವಾಗುತ್ತೆ: ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ

ಸುಮಲತಾ ಗೌಡ್ತಿ ಅಲ್ಲ, ನಾಯ್ಡು’: ಮತ್ತೆ ಜಾತಿ ಅಸ್ತ್ರ ಹೂಡಿದ ಜೆಡಿಎಸ್‌ ಮುಖಂಡರು

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !