ದೇಶ ಕಾಯುವ ಚೌಕಿದಾರ್‌ನ ಆಡಳಿತ ವಿಫಲ

ಬುಧವಾರ, ಏಪ್ರಿಲ್ 24, 2019
25 °C
ಮಿಥುನ್ ರೈ ಗೆಲ್ಲಿಸಿ: ಇಬ್ರಾಹೀಂ ಕೋಡಿಜಾಲ್

ದೇಶ ಕಾಯುವ ಚೌಕಿದಾರ್‌ನ ಆಡಳಿತ ವಿಫಲ

Published:
Updated:
Prajavani

ಮಂಗಳೂರು: ಕಾಂಗ್ರೆಸ್ ಹೈಕಮಾಂಡ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿದೆ. ವಿದ್ಯಾವಂತ ಮತ್ತು ಪ್ರಜ್ಞಾವಂತ, ಸಮರ್ಥ ಹೋರಾಟಗಾರರು ಆಗಿರುವ ಮಿಥುನ್ ರೈ ಅವರನ್ನು ಮತದಾರರು ಗೆಲ್ಲಿಸುವ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

52 ವರ್ಷದ ರಾಜಕೀಯ ಜೀವನದಲ್ಲಿ ಅನೇಕ ಪ್ರಧಾನ ಮಂತ್ರಿಗಳನ್ನು ಕಂಡಿದ್ದೇನೆ. ಆದರೆ, ಮೋದಿಯಂತಹ ಸುಳ್ಳುಗಾರ ಪ್ರಧಾನಿಯನ್ನು ಕಂಡಿಲ್ಲ. ಅವರ ದುಡುಕಿನ ನಿರ್ಧಾರದಿಂದ ದೇಶವು ಸಮಸ್ಯೆಯಲ್ಲಿ ಸಿಲುಕಿದೆ ವಿನಃ ಯಾವುದೇ ಅಭಿವೃದ್ಧಿ ಕಂಡಿಲ್ಲ. ದೇಶವನ್ನು ಕಾಯುವ ಚೌಕಿದಾರ್‌ ಮೋದಿ ಅವರು ಎಲ್ಲ ರಂಗದಲ್ಲಿಯೂ ವಿಫಲವಾಗಿದ್ದಾರೆ. ನೋಟ್‌ ಬ್ಯಾನ್‌ ಮಾಡುವ ಮೂಲಕ ಸಾಮಾನ್ಯ ಜನರಿಗೆ ಅನೇಕ ತೊಂದರೆ ನೀಡಿದ್ದಾರೆ. ಶ್ರೀಮಂತರಿಗೆ ಮಾತ್ರ ಪ್ರಧಾನಿ ಆಗಿದ್ದಾರೆ. ಇವರ ಬಣ್ಣದ ಮಾತುಗಳಿಗೆ ಯಾರು ಮರಳಾಗಬೇಡಿ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಮೋದಿ ಒಬ್ಬ ಉತ್ತಮ ಭಾಷಣಕಾರ ನಿಜ. ಇದನ್ನು ನಾನು ಕೂಡಾ ಒಪ್ಪುತ್ತೇನೆ. ದೇಶ ಆಳಲು ಭಾಷಣದಿಂದ ಸಾಧ್ಯವಿಲ್ಲ. ಜನರಿಗೆ ಯಾವುದೇ ಅಭಿವೃದ್ಧಿ ಪರವಾದ ಯೋಜನೆಗಳನ್ನು ಜಾರಿಗೆ ತರುವ ಬದಲು, ಸಮಸ್ಯೆಗಳ ಜನಕ ಆಗಿದ್ದಾರೆ. ಜಿಲ್ಲೆಯಲ್ಲಿಯೂ ಅವರ ಮಾದರಿಯಲ್ಲಿಯೇ ಸಂಸದ ನಳಿನ್‌ಕುಮಾರ್‌ ಕಟೀಲ್‌ ನಡೆದುಕೊಂಡು ಬಂದಿದ್ದಾರೆ. ಇವರಿಂದ ಮತ ಹಾಕಿದ ಜನರಿಗೆ ಯಾವುದೇ ಉಪಕಾರ ಆಗಿಲ್ಲ. ವಿಜಯ ಬ್ಯಾಂಕ್‌ ಕೂಡಾ ಇವರಿಂದ ಉಳಿಸಲು ಆಗಲಿಲ್ಲ. ಇವರ ಅಭಿವೃದ್ಧಿಗೆ ಪಂಪ್‌ವೇಲ್‌ ಫ್ಲೈಓವರ್‌ ಸಾಕ್ಷಿಯಾಗಿದೆ. ಇಂತಹ ಸಂಸದರು ಜಿಲ್ಲೆಗೆ ಬೇಡ. ಯುವ ನಾಯಕ ರಾಹುಲ್‌ ಗಾಂಧಿ ಅವರು ಈ ದೇಶದ ಪ್ರಧಾನಿ ಆಗಬೇಕು ಎಂಬುದು ಬಹು ಜನರ ಆಶಯ. ಅವರ ಕೈ ಬಲ ಪಡಿಸಲು ಮೈತ್ರಿಕೂಟದ ಅಭ್ಯರ್ಥಿ ಮಿಥುನ್‌ ರೈ ಅವರ ಆಯ್ಕೆ ಅಗತ್ಯವಿದೆ ಎಂದು ಅವರು ಹೇಳಿದರು.

ಪಕ್ಷದ ಮುಖಂಡರಾದ ಬಿ.ಎಚ್.ಖಾದರ್, ಸದಾಶಿವ ಉಳ್ಳಾಲ್, ಪದ್ಮನಾಭ ನರಿಂಗಾನ, ನೀರಜ್‌ಪಾಲ್, ನವೀನ್ ಡಿಸೋಜ, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಶಬ್ಬೀರ್ ಸಿದ್ದಕಟ್ಟೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !