ಸುಮಲತಾ ಸಾವಿರಾರು ಮತಗಳ ಅಂತರದಿಂದ ಗೆಲ್ತಾರೆ: ಭವಿಷ್ಯ ನುಡಿದ ಕುಂಡಲಿ!

ಗುರುವಾರ , ಏಪ್ರಿಲ್ 25, 2019
21 °C

ಸುಮಲತಾ ಸಾವಿರಾರು ಮತಗಳ ಅಂತರದಿಂದ ಗೆಲ್ತಾರೆ: ಭವಿಷ್ಯ ನುಡಿದ ಕುಂಡಲಿ!

Published:
Updated:
Prajavani

ಮಂಡ್ಯ: ಮತದಾನಕ್ಕೂ ಮೊದಲೇ ಸೋಲು–ಗೆಲುವುಗಳ ಲೆಕ್ಕಾಚಾರ ಕ್ಷೇತ್ರದಾದ್ಯಂತ ತಾರಕಕ್ಕೇರಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಅಂಬರೀಷ್‌ ಅಭಿಮಾನಿಯೊಬ್ಬರು ಕುಂಡಲಿ ಶಾಸ್ತ್ರದ ಮೊರೆ ಹೋಗಿ ಸುಮಲತಾ ಭವಿಷ್ಯ ಕೇಳಿದ್ದಾರೆ.

ಮೇಲುಕೋಟೆಯ ಜ್ಯೋತಿಷಿ ಮುರಳಿಕೃಷ್ಣ ಶಾಸ್ತ್ರಿ ಕುಂಡಲಿ ಲೆಕ್ಕಾಚಾರ ಮಾಡಿದ್ದು ಸುಮಲತಾ ಅವರು ಸಾವಿರಾರು ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕುಂಡಲಿ ಲೆಕ್ಕಾಚಾರದ ಕಾಗದ ಸಾಮಾಜಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕುಂಡಲಿ ಪ್ರಕಾರ ಕ್ರಮಸಂಖ್ಯೆ 20 ಉತ್ತಮವಾಗಿದೆ. ಕುಂಭರಾಶಿ ನಾಲ್ಕನೇ ಪಾದದಲ್ಲಿ ಉತ್ತಮ ಫಲಗಳು ಸಿಗಲಿವೆ. ಸುಮಲತಾ ಅವರಿಗೆ ಏ.18ರಂದು ದಿನ ಚೆನ್ನಾಗಿದೆ. ಹೀಗಾಗಿ ಅವರು ಸಾವಿರಾರು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 29

  Happy
 • 9

  Amused
 • 1

  Sad
 • 2

  Frustrated
 • 11

  Angry

Comments:

0 comments

Write the first review for this !