ಮೈತ್ರಿಯಾಗಿರುವುದು ಸ್ವಾರ್ಥಕ್ಕಲ್ಲ–ದೇಶಕ್ಕಾಗಿ– ಡಿಕೆಶಿ

ಮಂಗಳವಾರ, ಏಪ್ರಿಲ್ 23, 2019
27 °C
ಮಳವಳ್ಳಿಯಲ್ಲಿ ಪ್ರಚಾರ ನಡೆಸಿದ ಡಿ.ಕೆ.ಶಿವಕುಮಾರ್‌

ಮೈತ್ರಿಯಾಗಿರುವುದು ಸ್ವಾರ್ಥಕ್ಕಲ್ಲ–ದೇಶಕ್ಕಾಗಿ– ಡಿಕೆಶಿ

Published:
Updated:
Prajavani

ಮಳವಳ್ಳಿ: ‘35 ವರ್ಷಗಳಿಂದ ವಿರೋಧಿ ರಾಜಕಾರಣ ಮಾಡಿ ಈಗ ದೇಶಕ್ಕಾಗಿ ಮೈತ್ರಿಯಾಗಿ ಸಹೋದರರಂತೆ ಒಗ್ಗೂಡಿ ಆಡಳಿತ ಮಾಡುತ್ತಿದ್ದೇವೆ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದ ಅನಂತರಾಂ ವೃತ್ತದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಡನೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಹಾಗೂ ದೇವೇಗೌಡರ ಕುಟುಬಂದವರು ಪರಸ್ಪರ ವಿರೋಧ ರಾಜಕಾರಣ ಮಾಡಿ ಸೋಲು ಗೆಲವು ಕಂಡಿದ್ದೇವೆ. ಬದಲಾದ ಸನ್ನಿವೇಶದಲ್ಲಿ ಇಡೀ ದೇಶದಲ್ಲಿ ಬಿಜೆಪಿ ಸರ್ಕಾರ ದೂರ ಇಡಲು ಮೈತ್ರಿ ಮಾಡಿಕೊಂಡಿದ್ದೇವೆ. ಅದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ದೀಕ್ಷೆ ನೀಡಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆ ಸಮಯದಲ್ಲಿ ಅಂಬರೀಶ್ ಅವರೂ ಆಶೀರ್ವಾದ ಮಾಡಿದ್ದರು.  ಸುಮಲತಾ ಅವರಿಗೆ ರಾಜಕೀಯ ಪ್ರವೇಶ ಮಾಡಲು ಮೈಸೂರು, ಬೆಂಗಳೂರು ಭಾಗದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದೆವು.  ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ ಅವರು  ನಿಖಿಲ್ ಹಾಗೂ ಅಭಿಷೇಕ್ ಅವರಿಗೆ ಸಹೋದರರಂತೆ ಇರುವಂತೆ ಸಲಹೆ ನೀಡಿದ್ದರು. ಆದರೆ, ಈಗ   ಬಿಜೆಪಿ ಬೆಂಬಲಿತರಾಗಿ ಕಣಕ್ಕೆ ಇಳಿದಿದ್ದಾರೆ. ಆದ್ದರಿಂದ ಈ ಚುನಾವಣೆ ನಮಗೂ ಸುಮಲತಾ ಅವರ ನಡುವೆ ಅಲ್ಲ. ರಾಹುಲ್‌ ಗಾಂಧಿ ಹಾಗೂ ನರೇಂದ್ರ ಮೋದಿ ನಡುವಿನ ಹೋರಾಟ ಎಂದು ಅಭಿಪ್ರಾಯ ವ್ಯಕ್ತಪಡಿಸದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ ‘1995ರಲ್ಲಿ ಕನಕಪುರ ಕ್ಷೇತ್ರದಿಂದ ತಾವು ಸ್ಪರ್ಧಿಸಿದ್ದಾಗ ಮಳವಳ್ಳಿ ತಾಲ್ಲೂಕಿನ ಮತದಾರರು ರಾಜಕೀಯ ಜನ್ಮ ನೀಡಿದ್ದೀರಿ. ಅದೇ ರೀತಿ ಕಾಕತಾಳೀಯ ಎಂಬಂತೆ ನನ್ನ ಪುತ್ರ ನಿಖಿಲ್ ಕೂಡ ನಿಮ್ಮ ಆಶಿರ್ವಾದದಿಂದಲೇ ರಾಜಕೀಯ ಜನ್ಮ ಪಡೆಯುತ್ತಿದ್ದು ಹೆಚ್ಚಿನ ಅಂತರದಿಂದ ಗೆಲ್ಲಿಸಿ’ ಎಂದು ಮನವಿ ಮಾಡಿದರು.

ಏ.18 ರ ನಂತರ ವಿರೋಧಿಗಳು ಯಾರು ಕ್ಷೇತ್ರದಲ್ಲಿ ಇರುವುದಿಲ್ಲ ಮುಂದೆಯೂ ನಿಮ್ಮ ಕಷ್ಟ ಸುಖಗಳಿಗೆ ನಿಖಿಲ್ ನಿಮ್ಮ ಮನೆ ಸೇವಕನಾಗಿ ಕೆಲಸ ನಿರ್ವಹಿಸುತ್ತಾನೆ ಎಂದು ಹೇಳಿದರು.

ಶಾಸಕ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !