ಪಿಯುಸಿ ಫಲಿತಾಂಶ ಕೊಂಚ ಏರಿಕೆ

ಶನಿವಾರ, ಏಪ್ರಿಲ್ 20, 2019
26 °C
ಜಿಲ್ಲೆವಾರು ಒಂದು ಸ್ಥಾನ ಹೆಚ್ಚಳ, ಶೇ 1.5 ರಷ್ಟು ಚೇತರಿಕೆ

ಪಿಯುಸಿ ಫಲಿತಾಂಶ ಕೊಂಚ ಏರಿಕೆ

Published:
Updated:
Prajavani

ಚಿಕ್ಕಬಳ್ಳಾಪುರ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆ ಶೇಕಡಾವಾರು 70.11ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನ ಪಡೆದಿದೆ. ಕಳೆದ ವರ್ಷ 68.61 ರಷ್ಟು ಫಲಿತಾಂಶ ಗಳಿಸಿದ್ದ ಜಿಲ್ಲೆ 14 ನೇ ಸ್ಥಾನದಲ್ಲಿತ್ತು. ಹಿಂದಿನ ಸಾಲಿಗೆ ಹೋಲಿಸಿದರೆ ಈ ವರ್ಷ ಒಂದು ಸ್ಥಾನದಲ್ಲಿ ಏರಿಕೆ ಕಂಡಿದೆ. ಆದರೆ, ಫಲಿತಾಂಶದಲ್ಲಿ ಶೇ 1.5 ರಷ್ಟು ಏರಿಕೆಯಾಗಿದೆ.

ಸೋಮವಾರ ಬೆಳಿಗ್ಗೆ 11 ರಿಂದ ವೆಬ್‌ಸೈಟ್‌ಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಾಗುತ್ತಿದ್ದಂತೆ ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು ಸೈಬರ್‌ ಕೇಂದ್ರಗಳಿಗೆ ಭೇಟಿ ನೀಡಿ, ಫಲಿತಾಂಶ ನೋಡಲು ಧಾವಂತ ತೋರುತ್ತಿದ್ದ ದೃಶ್ಯಗಳು ಗೋಚರಿಸಿದವು. ಇನ್ನು ಬಹುಪಾಲು ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಸ್ಮಾರ್ಟ್‌ಪೋನ್‌ಗಳಲ್ಲಿಯೇ ತಮ್ಮ ‘ಭವಿಷ್ಯ’ ತಿಳಿದುಕೊಂಡರು.

ಪದವಿ ಪೂರ್ಣ ಶಿಕ್ಷಣ ಇಲಾಖೆ ಕಡೆಯಿಂದ ಸೋಮವಾರ ಜಿಲ್ಲೆಯ ಸಂಪೂರ್ಣ ಫಲಿತಾಂಶದ ವಿವರ ಲಭ್ಯವಾಗಲಿಲ್ಲ. ಮಂಗಳವಾರ ಸಂಜೆ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ 21 ಸರ್ಕಾರಿ, 10 ಅನುದಾನಿತ, 71 ಅನುದಾನ ರಹಿತ ಪಿಯು ಕಾಲೇಜುಗಳಿವೆ. ಈ ಪೈಕಿ ವಿವಿಧ ವಿಭಾಗಗಳಿಂದ 10,996 ಹೊಸ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಜತೆಗೆ 1,659 ಪುನರಾವರ್ತಿತರು, 354 ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 13,009 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.

ಪರೀಕ್ಷೆಗೆ ನೋಂದಾಯಿಸಿಕೊಂಡವರ ಪೈಕಿ 8,549 ಆಂಗ್ಲ ಮಾಧ್ಯಮ ಮತ್ತು 4,460 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿದ್ದರು. ಒಟ್ಟು ನೋಂದಾಯಿತರಲ್ಲಿ 8,235 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.

ಅಂಕಿಅಂಶಗಳು..

13,009 ಪರೀಕ್ಷೆಗೆ ನೋಂದಾಯಿತರು

8,235 ಉತ್ತೀರ್ಣರಾದವರು

6,493 ಪರೀಕ್ಷೆ ಬರೆದ ಬಾಲಕಿಯರು

6,516 ಪರೀಕ್ಷೆ ಬರೆದ ಬಾಲಕರು

ದ್ವಿತೀಯ ಪಿಯುಸಿ ಪರೀಕ್ಷೆಯ ಜಿಲ್ಲೆಯ ಫಲಿತಾಂಶದ ವಿವರ

ಅಭ್ಯರ್ಥಿಗಳು ನೋಂದಣಿ ಉತ್ತೀರ್ಣ ಅನುತ್ತೀರ್ಣ

ಹೊಸ ಅಭ್ಯರ್ಥಿಗಳು 10,996 7,709 3,287

ಪುನರಾವರ್ತಿತರು 1,659 447 1,212

ಬಾಲಕರು 6,516 3816 2,700

ಬಾಲಕಿಯರು 6,493 4,419 2074

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !