ಶುಕ್ರವಾರ, ಸೆಪ್ಟೆಂಬರ್ 17, 2021
26 °C

ರಂಗ ಕಲಾವಿದೆ ಅಮ್ಮಚ್ಚಿಯ ‘ಅಕ್ಕು’

ಲಿಖಿತಾ ಗುಡ್ಡೆಮನೆ Updated:

ಅಕ್ಷರ ಗಾತ್ರ : | |

Prajavani

ರಂಗಭೂಮಿಗೆ ನಟ ನಟಿಯರ ಅಭಾವವಿಲ್ಲ. ಆದರೆ ಇಲ್ಲಿ ಕಲೆಯನ್ನು ಪ್ರೀತಿಸುವವರ ಅಭಾವವಿದೆ. ರಂಭೂಮಿ ಎನ್ನುವುದು ಕಲಾ ಪ್ರೇಮಿಗಳ ಸುಂದರ ಕಲಾ ದೇವಾಲಯವಿದ್ದಂತೆ. ಹಾಗಾಗಿ,  ಕಲೆಯ ಮೌಲ್ಯ, ಗುಣಮಟ್ಟ ಹೆಚ್ಚುವಂತೆ ಮಾಡುವುದೇ ಕಲಾವಿದರ ಗುರಿಯಾಗಿರುತ್ತದೆ. ಹೌದು! ಕಲಾರಸಿಕರ ನಡುವೆ ಕಲೆಯನ್ನು ಪ್ರೀತಿಸುತ್ತಾ ತಮ್ಮನ್ನು ಸಂಪೂರ್ಣವಾಗಿ ಕಲೆಗೆ ಸಮರ್ಪಿಸಿಕೊಂಡವರೇ ದೀಪಿಕಾ .ಪಿ ಆರಾಧ್ಯ. ನಟನೆಗೆ ಅವರು ತಮ್ಮನ್ನು ಅರ್ಪಿಸಿಕೊಂಡು ನಿರಂತರ ದುಡಿಯುತ್ತಿರುವ ಕಲಾವಿದೆ.
ದೀಪಿಕಾ ಆರಾಧ್ಯ ರಂಗಭೂಮಿ ಹಿನ್ನೆಲೆಯವರು. ಹಾಗಾಗಿ ನಟನೆಯಲ್ಲಿ ಚುರುಕು. ಉತ್ತಮ ಗ್ರಹಿಕೆ ಅವರಿಗಿದೆ. ಸದ್ಯಕ್ಕೆ ಕನ್ನಡದ ಪ್ರತಿಯೊಂದು ರಂಗತಂಡವು ದೀಪಿಕಾ ಅವರ ಆಯ್ಕೆಗೆ ಮೊದಲ ಆದ್ಯತೆ ಕೊಡುತ್ತದೆ. 10 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ರಂಗಭೂಮಿಯನ್ನು ಹಿನ್ನಲೆಯಾಗಿರಿಸಿಕೊಂಡು ಅವರು ಮಾಡಿದ ಸಾಧನೆಗಳು ಅನೇಕ. ಹಾಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ವಿಎಎಸ್‍ಪಿ, ರಂಗವರ್ತುಲ, ರಂಗ ಸೌರಭ ಮುಂತಾದ ರಂಗಭೂಮಿ ತಂಡಗಳೊಂದಿಗೆ ದೇಶದಾದ್ಯಂತ ಕಾರ್ಯಕ್ರಮಗಳನ್ನು ಕೊಟ್ಟಿರುತ್ತಾರೆ. ವಿದೇಶದಲ್ಲಿ ಸುಮಾರು 20ಕ್ಕೂ ಹೆಚ್ಚು ವಿವಿಧ ನಾಟಕಗಳಲ್ಲಿಯೂ ಭಾಗವಹಿಸಿದ ಕೀರ್ತಿ ದೀಪಿಕಾರಿಗೆ ಸಲ್ಲುತ್ತದೆ.

2013ರಲ್ಲಿ ದೀಪಿಕಾ ರಂಗಭೂಮಿಯನ್ನು ತಮ್ಮ ಹವ್ಯಾಸಿ ಕ್ಷೇತ್ರವಾಗಿ ಆರಿಸಿಕೊಂಡರು. ಆ ಸಂದರ್ಭ ವಿಎಎಸ್‍ಪಿ ರಂಗಭೂಮಿ ತಂಡದ ಮೂಲಕ ಹೆಜ್ಜೆ ಇಟ್ಟರು. ಬಳಿಕ ತಾವೇ ರಂಗತಂಡವೊಂದನ್ನು ರೂಪಿಸಿದರು. ಹೀಗೆ ನಟನಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಪ್ರಯಾಣಿಸುತ್ತಿದ್ದ ದೀಪಿಕಾ ಸಿನಿಮಾ ಜಗತ್ತಿಗೂ ಕಾಲಿಟ್ಟು ಯಶಸ್ವಿಯಾದರು. ನಟನೆಯ ಅವಕಾಶವನ್ನು ಕಲಿಸಿ ರಂಗಭೂಮಿಯೇ ತನಗಿಷ್ಟ ಎಂದು ಅವರು ಹೇಳಿಕೊಂಡದ್ದುಂಟು.

ಅವನು ಗಜಲ್ ಅವಳು ಶಾಯಿರಿ, ರಬ್ದಿ, ಅಕ್ಕು, ಪರಹಿತ ಪಾಷಾಣ, ಮೈಸೂರು ಮಲ್ಲಿಗೆ, ಬೈಸಿಕಲ್ ಥೀವ್ಸ್, ಆ ಗಾಳಿಗೆ, ಆಕಾಶ ಭೇರಿ, ಭಲೇ ಜೋಡಿ ಹೀಗೆ ಹಲವು ಪ್ರದರ್ಶನಗಳಲ್ಲಿ ದೀಪಿಕಾ ಸೈ ಎನ್ನಿಸಿಕೊಂಡಿದ್ದಾರೆ. ‘ಅವನು ಘಜಲ್ ಅವಳು ಶಾಯಿರಿ’, ‘ರಬ್ದಿ’ ನಾಟಕದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ರಂಗಶ್ರೀ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 2018ರ ಪರಹಿತ ಪಾಷಾಣದಲ್ಲಿ ‘ಅತ್ಯುತ್ತಮ ಪೋಷಕ ನಟಿ’ ಎಂದೂ ಕರೆಸಿಕೊಂಡಿರುತ್ತಾರೆ. ದೇಹಿಯವರ ಕಥೆ ಆಧಾರಿತ ‘ಅಮ್ಮಚ್ಚಿಯೆಂಬ ನೆನಪು’ ಚಲಚನಚಿತ್ರದಲ್ಲಿ ಅಕ್ಕು ಎಂಬ ಪಾತ್ರಧಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರತಿಭಾವಂತ ನಟಿಗೆ ಅವಕಾಶಗಳ ಬಾಗಿಲು ಮುಚ್ಚುವುದಿಲ್ಲ ಎನ್ನುವುದಕ್ಕೆ ದೀಪಿಕಾ ಅವರೇ ಸಾಕ್ಷಿ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು