ಮಂಗಳವಾರ, ಆಗಸ್ಟ್ 20, 2019
25 °C

ಸ್ಮಿತ್ ಮಿಂಚು: ರಾಜಸ್ಥಾನ್ ರಾಯಲ್ಸ್‌ಗೆ ಜಯ

Published:
Updated:
Prajavani

ಜೈಪುರ: ನಾಯಕನಿಗೆ ತಕ್ಕ ಆಟವಾಡಿದ ಸ್ಟೀವನ್ ಸ್ಮಿತ್ ಶನಿವಾರ ಸಂಜೆ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ರಾಜಸ್ಥಾನ್ ರಾಯಲ್ಸ್‌ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಇದರಿಂದಾಗಿ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 161 ರನ್‌ ಗಳಿಸಿತು. ಅದಕ್ಕುತ್ತರವಾಗಿ ರಾಯಲ್ಸ್ ತಂಡವು 19.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 ರನ್‌ಗಳನ್ನು ಗಳಿಸಿತು. ಟೂರ್ನಿಯಲ್ಲಿ ರಾಜಸ್ಥಾನಕ್ಕೆ ಇದು ಮೂರನೇ ಜಯವಾಗಿದೆ.

ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (66; 47ಎಸೆತ, 6ಬೌಂಡರಿ, 2ಸಿಕ್ಸರ್) ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್ ಯಾದವ್ (34 ರನ್) ಮತ್ತು ಹಾರ್ದಿಕ್ ಪಾಂಡ್ಯ (23 ರನ್) ಅವರು ತಮ್ಮ ಕಾಣಿಕೆ ನೀಡಿದರು.

ರಾಯಲ್ಸ್‌ ತಂಡದಲ್ಲಿರುವ ಕನ್ನಡಿಗ ಶ್ರೇಯಸ್ ಗೋಪಾಲ್ (21ಕ್ಕೆ2)  ಅವರು ಕ್ವಿಂಟನ್ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್‌ಗಳನ್ನು ಗಳಿಸಿದರು.  ಸ್ಟುವರ್ಟ್ ಬಿನ್ನಿ, ಜೋಫ್ರಾ ಆರ್ಚರ್ ಮತ್ತು ಜಯದೇವ್ ಉನದ್ಕತ್ ತಲಾ ಒಂದು ವಿಕೆಟ್ ಪಡೆದರು. 

ಸ್ಮಿತ್ ಆಟ: ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಮುಂಬೈ ತಂಡದ ಮಧ್ಯಮವೇಗಿ ರಾಹುಲ್ ಚಾಹರ್ (29ಕ್ಕೆ3) ಕಠಿಣ ಸವಾಲೊಡ್ಡಿದರು.

ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ (12), ಸಂಜು ಸ್ಯಾಮ್ಸನ್ (35 ರನ್) ಮತ್ತು ಬೆನ್ ಸ್ಟೋಕ್ಸ್‌ ಅವರ ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ತಂಡವು ಕೇವಲ 77 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಸ್ಮಿತ್ (ಔಟಾಗದೆ 59; 48ಎ, 5ಬೌಂಡರಿ, 1ಸಿಕ್ಸರ್) ಮತ್ತು ರಿಯಾನ್ ಪರಾಗ್ (43; 29ಎ, 5ಬೌಂ, 1ಸಿ) ತಂಡವನ್ನು ಕಷ್ಟದಿಂದ ಪಾರು ಮಾಡಿದರು. 18ನೇ ಓವರ್‌ನಲ್ಲಿ ಪರಾಗ್ ಅವರು ರನ್‌ಔಟ್ ಅದರು. ಆದರೆ ಸ್ಮಿತ್ ಎದೆಗುಂದದೇ ತಮ್ಮ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

Post Comments (+)