ಮೌಲ್ಯ ಅಳವಡಿಸಿಕೊಂಡರೆ ಜಯಂತಿಗಳಿಗೆ ಅರ್ಥ:ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್

ಸೋಮವಾರ, ಮೇ 20, 2019
33 °C
ವರನಟ ರಾಜಕುಮಾರ್ ಅವರ ಜಯಂತಿ

ಮೌಲ್ಯ ಅಳವಡಿಸಿಕೊಂಡರೆ ಜಯಂತಿಗಳಿಗೆ ಅರ್ಥ:ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್

Published:
Updated:
Prajavani

ಚಿಕ್ಕಬಳ್ಳಾಪುರ: ‘ನಾವು ಜಯಂತಿಗಳನ್ನು ಆಚರಿಸುವ ಮಹನೀಯರಲ್ಲಿನ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸರ್ಕಾರ ಮಾಡುವ ಜಯಂತಿಗಳಿಗೆ ಒಂದು ಅರ್ಥ ಬರುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವರನಟ ರಾಜಕುಮಾರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೇರು ನಟರಾಗಿದ್ದ ರಾಜಕುಮಾರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದರು. ಅವರ ಹುಟ್ಟು ಹಬ್ಬವನ್ನು ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಆರು ದಶಕಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಬದುಕಿದ ಅವರು ನಿಜ ಜೀವನದಲ್ಲಿ ಕೂಡ ಚಿತ್ರದೊಳಗಿನ ಪಾತ್ರಗಳಂತೆ ಸಜ್ಜನಿಕೆಯಿಂದ ಬಾಳಿ ಇತರರಿಗೆ ಮಾದರಿಯಾಗಿದ್ದರು’ ಎಂದು ಹೇಳಿದರು.

‘ಕನ್ನಡ ಚಿತ್ರರಂಗಕ್ಕೆ ಮೊದಲು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ತಂದು ಕೊಟ್ಟ ಕೀರ್ತಿ ರಾಜಕುಮಾರ್ ಅವರಿಗೆ ಸಲ್ಲುತ್ತದೆ. ಅವರು ಬದುಕಿದಷ್ಟು ದಿನ ಯಾವತ್ತಿಗೂ ರಾಜಕೀಯಕ್ಕೆ ಕಾಲಿಡಲಿಲ್ಲ. ಪರಭಾಷೆಗಳ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬಂದಾಗಲೂ ಅವರು ನಿರಾಕರಿಸಿ, ಬದುಕಿನುದ್ದಕ್ಕೂ ಕನ್ನಡದ ಮೇಲೆ ಅಪಾರ ಪ್ರೀತಿ ಮತ್ತು ಗೌರವವಿಟ್ಟುಕೊಂಡು ಕನ್ನಡದ ಏಳ್ಗೆಗಾಗಿ ದುಡಿದರು’ ಎಂದರು.

‘ರಾಜ್ಯದಲ್ಲಿ ನಡೆದ ಅನೇಕ ಚಳವಳಿಗಳಿಂದ ದೂರವಿದ್ದ ರಾಜಕುಮಾರ್ ಅವರು ಕನ್ನಡ ಭಾಷೆ ವಿಚಾರ ಬಂದಾಗ ಗೋಕಾಕ್ ಚಳವಳಿಗೆ ಧುಮುಕಿ ಇಡೀ ಕನ್ನಡಿಗರನ್ನು ಪ್ರೇರೇಪಿಸಿ ಭಾಷೆಗಾಗಿ ಹೋರಾಟ ಮಾಡಿದರು. ಅವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ಬಿಟ್ಟು ಹೋದ ಸಾಕಷ್ಟು ಸಿನಿಮಾಗಳು ನಮ್ಮ ಜತೆ ಇವೆ. ಅವರ ಚಿತ್ರಗಳಿಂದಲೇ ಸಾಕಷ್ಟು ಜನರು ತಂದೆ ತಾಯಿ ಹಾಗೂ ಗುರು ಹಿರಿಯರನ್ನು ಹೇಗೆ ಗೌರವಿಸುವ ಗುಣ ಕಲಿತಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ನಾಗೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‌ ಕುಮಾರ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !