ಸ್ಪಷ್ಟವಾಗದ ಫಲಿತಾಂಶ: ಪೋಷಕರ ಆತಂಕ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ನವನಗರ ಆದರ್ಶ ಶಾಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆ– 35 ಮಕ್ಕಳಿಗೆ ತೊಂದರೆ

ಸ್ಪಷ್ಟವಾಗದ ಫಲಿತಾಂಶ: ಪೋಷಕರ ಆತಂಕ

Published:
Updated:
Prajavani

ಬಾಗಲಕೋಟೆ: ಇಲ್ಲಿನ ನವನಗರದ ಆದರ್ಶ ಶಾಲೆಯ (ಆರ್‌ಎಂಎಸ್‌ಎ) 56 ವಿದ್ಯಾರ್ಥಿಗಳ ಪೈಕಿ 35 ಮಂದಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದರೂ ವೈಯಕ್ತಿಕ ಅಂಕಗಳು ಲಭ್ಯವಾಗಿಲ್ಲ. ಇದು ಮಕ್ಕಳು ಹಾಗೂ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

‘ಫಲಿತಾಂಶ ಪ್ರಕಟವಾಗಿ ಮೂರು ದಿನವಾದರೂ ಕೆಲವು ವಿಷಯಗಳಲ್ಲಿ ನಮ್ಮ ಮಕ್ಕಳು ಪಡೆದ ವೈಯಕ್ತಿಕ ಅಂಕಗಳು ಇನ್ನೂ ಗೊತ್ತಾಗಿಲ್ಲ. ಪರೀಕ್ಷಾ ಮಂಡಳಿ ಆ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿ’ ಎಂದು ಒತ್ತಾಯಿಸಿದ ಮಕ್ಕಳು ಹಾಗೂ ಪೋಷಕರು ಗುರುವಾರ ಶಾಲೆಯ ಎದುರು ಅಳಲು ತೋಡಿಕೊಂಡರು. ‘ಈ ಬಗ್ಗೆ ಮಾಹಿತಿ ಪಡೆಯಲು ಫೋನ್‌ ಮಾಡಿದರೆ ಬೋರ್ಡ್‌ನವರು ಕರೆ ಸ್ವೀಕರಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಮಕ್ಕಳಿಗೆ ಬಹಳಷ್ಟು ತ್ರಾಸ್ ಆಗುತ್ತಿದೆ. ಅದಕ್ಕೆ ಪರಿಹಾರ ಯಾರು ನೀಡಬೇಕು. ಪರೀಕ್ಷಾ ಮಂಡಳಿಗೆ ನಾನೂ ಫೋನ್‌ ಮಾಡುತ್ತಿರುವೆ ಎಂದು ಹೆಡ್‌ಮಾಸ್ಟರ್ ಹೇಳುತ್ತಿದ್ದಾರೆ. ಹೀಗಾಗಲೇ ಪಿಯು ಕಾಲೇಜುಗಳಲ್ಲಿ ದಾಖಲಾತಿ ಆರಂಭವಾಗಿದೆ. ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು. ಊಟ–ನಿದ್ರೆ ಬಿಟ್ಟು ಇಲ್ಲಿ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ವರ್ಷಗಟ್ಟಲೇ ಓದಿದ್ದು ವ್ಯರ್ಥವಾಗಿದೆ. ಇದಕ್ಕೆ ಜವಾಬ್ದಾರಿ ಯಾರು. ಪರೀಕ್ಷಾ ಮಂಡಳಿ ಹೊಣೆ ಹೊರಬೇಕು ಎಂದು ಕಣ್ಣೀರಿಡುತ್ತಲೇ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

‘ಪರೀಕ್ಷಾ ಮಂಡಳಿಯಲ್ಲಿ ಕೇಳಿದರೆ ತಾಂತ್ರಿಕ ಲೋಪವಾಗಿದೆ ಎನ್ನುತ್ತಿದ್ದಾರೆ. ಆ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಹಾಗಿದ್ದಲ್ಲಿ ಇನ್ನಷ್ಟು ಸಮಯ ತೆಗೆದುಕೊಂಡು ನಿಧಾನವಾಗಿ ಫಲಿತಾಂಶ ಕೊಡಬಹುದಿತ್ತು. ಕನ್ನಡ ವಿಷಯದ ಅಂಕ ಗೊತ್ತಾಗಿಲ್ಲ. ಆನ್‌ಲೈನ್‌ನಲ್ಲಿ ಪ್ರಯತ್ನ ಮಾಡಿದರೆ ಶಾಲೆಯನ್ನು ಸಂಪರ್ಕಿಸಿ ಎಂಬ ಸಂದೇಶ ಬರುತ್ತಿದೆ’ ಎಂದು ಪೋಷಕರೊಬ್ಬರು ಅಳಲು ತೋಡಿಕೊಂಡರು.

‘ಎಲ್ಲ ವಿದ್ಯಾರ್ಥಿಗಳು ಒಟ್ಟು ಅಂಕಗಳು ನಮೂದು ಆಗಿದೆ. ಆದರೆ ವಿಷಯವಾರು ಅಂಕ ಬಂದಿಲ್ಲ. ಮಂಡಳಿಗೆ ಮಾತನಾಡಿ, ಪತ್ರ ಕೂಡ ಕಳುಹಿಸಿದ್ದೇವೆ. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಬರೆದು ಕಳುಹಿಸಿದ್ದೇವೆ. ಪರೀಕ್ಷಾ ಮಂಡಳಿ ಅಧಿಕಾರಿಗಳೊಂದಿಗೆ ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ’ ಎಂದು ಮುಖ್ಯ ಶಿಕ್ಷಕ ಎನ್‌.ಬಿ.ಮಕಾನದಾರ ತಿಳಿಸಿದರು.

**
ಆದರ್ಶ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ. ತಾಂತ್ರಿಕ ತೊಂದರೆಯಿಂದ ಅಂಕಗಳ ನಮೂದು ಆಗಿಲ್ಲ. ಶೀಘ್ರ ಸಮಸ್ಯೆ ಸರಿಪಡಿಸುವುದಾಗಿ ಪರೀಕ್ಷಾ ಮಂಡಳಿಯವರು ಹೇಳಿದ್ದಾರೆ. ಮಕ್ಕಳು, ಪೋಷಕರು ಆತಂಕ ಪಡುವ ಅಗತ್ಯವಿಲ್ಲ.
–ಬಿ.ಎಚ್.ಗೋನಾಳ, ಡಿಡಿಪಿಐ, ಬಾಗಲಕೋಟೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !