ಭಾನುವಾರ, ಸೆಪ್ಟೆಂಬರ್ 26, 2021
21 °C

ಸಂಭ್ರಮದ ಶೋಭಾ ಯಾತ್ರೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಅಖಿಲ ಭಾರತ ಮಾಧ್ವ ಮಹಾಮಂಡಲ ವತಿಯಿಂದ ಕೃಷ್ಣ ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಕೃಷ್ಣ ರುಕ್ಮಿಣಿ ಮೂರ್ತಿ, ಸತ್ಯ ಪ್ರಮೋದತೀರ್ಥರ ಪಾದುಕೆ ಹಾಗೂ ಭಾವಚಿತ್ರಗಳ ಮೆರವಣಿಗೆಗೆ ನವಲಿ ಕೃಷ್ಣಾಚಾರ್‌ ಹಾಗೂ ಉತ್ತರಾದಿಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಪಂ. ವಿನೋದಾಚಾರ್ಯ ಘಳಗಲಿ ಚಾಲನೆ ನೀಡಿದರು.

ಗುರುವಾರ ಸಂಜೆ ಆರಂಭವಾದ ಬ್ರಹ್ಮ ಕಳಸ ಮಹೋತ್ಸವವು ನಗರದ ಬ್ರಹ್ಮಪುರದ ಉತ್ತರಾದಿಮಠದಿಂದ ಬ್ರಹ್ಮಪುರದ ಭಗತ್‌ಸಿಂಗ್ ಗಲ್ಲಿ, ವಡ್ಡರ್‌ಗಲ್ಲಿ ಹಾಗೂ ಪ್ರಮುಖ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸಾಗಿತು.

ಬ್ರಹ್ಮಪುರ ಮಠದಲ್ಲಿ ಕೃಷ್ಣನಿಗೆ, ಪಾದುಕೆಗಳಿಗೆ ಪೂಜಾ ಕೈಕರ್ಯಗಳನ್ನು ನೆರವೇರಿಸಿದರು. ಉತ್ತರಾದಿಮಠದ ಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಿದರು.

ರಾಘವೇಂದ್ರ ಕುಲಕರ್ಣಿ, ಪ್ರಶಾಂತ ಆಚಾರ್ಯ, ಪವನ ಫಿರೋಜಾಬಾದ್, ಸಂತೋಶಕುಮಾರ ಫರತಾಬಾದ್, ಡಾ. ಸುದರ್ಶನ, ಶ್ರೀನಿವಾಸ ಸಿರನೂರಕರ್, ಭರತ ಕುಮಾರ, ರವಿ ರಾತೋಡಲ್ಕರ್ ಇದ್ದರು.

ನಂತರ ಪಂ.ಹಣುಮಂತಾಚಾರ್ಯ ಸರಡಗಿ ಅವರಿಂದ ‘ರುಕ್ಮಿಣಿ ವಿಜಯ’ ಕುರಿತಾಗಿ ಪ್ರವಚನ ನೀಡಿದರು. ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.