ಶುಕ್ರವಾರ, 16 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಕಂಕಣ ಬಲದ ಸಾಧ್ಯತೆಯು ಹೆಚ್ಚಾಗಿ ಇರುವುದು
Published 15 ಜನವರಿ 2026, 23:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದಿನದ ಅಂತ್ಯದಲ್ಲಿ ನಾಳೆಯ ಕೆಲಸಗಳ ಬಗ್ಗೆ ಗಮನಹರಿಸಿ ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದರಿಂದ ನಾಳೆ ಸುಲಭವಾಗುತ್ತದೆ. ವೃತ್ತಿಯಲ್ಲಿ ಹೊಸ ಬದುಕು ಆರಂಭಿಸಲು ಅವಕಾಶಗಳ ಬಾಗಿಲು ತೆರೆದಿವೆ.
ವೃಷಭ
ಈ ದಿನ ಕೆಲಸ ಕಾರ್ಯಗಳಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ. ಆದರೆ ಸೋಮಾರಿತನ, ಅತಿಯಾದ ನಿದ್ದೆ ನಿಮ್ಮ ಈ ದಿನದ ಕಾರ್ಯಕ್ಕೆ ಭಂಗವನ್ನು ತರಲಿದೆ. ದುಡಿಕಿನ ಕೆಲವು ನಿರ್ಧಾರಗಳಿಂದ ಆತ್ಮೀಯರಲ್ಲಿ ಮನಸ್ತಾಪವಾಗಲಿದೆ.
ಮಿಥುನ
ಮನೆಯಲ್ಲಿನ ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಿರಿಯರ ಸಲಹೆ ಪಡೆದು ಒಂದು ತೀರ್ಮಾನಕ್ಕೆ ಬರುವುದು ಉತ್ತಮ. ತಾರ್ಕಿಕ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತವಾದ ಸಮಯವಾಗಿದೆ.
ಕರ್ಕಾಟಕ
ಹಿಂದೆ ಯಾವುದೋ ದಿನ ಮಾಡಿದ ಕೆಲಸದ ಫಲವಾಗಿ ಈ ದಿನ ಅದರ ಲಾಭ ಬಂದು ಕೈ ಸೇರಿದ ಸಂತಸ ಆಗಲಿದೆ. ಸಂಬಂಧ ನಿಭಾಯಿಸುವಲ್ಲಿ ಇಂದು ಉಂಟಾಗುವ ಸೋಲಿಗೆ ನಿಮ್ಮ ಆಲಸ್ಯತನವೇ ಮುಖ್ಯ ಕಾರಣವಾಗಿರುತ್ತದೆ.
ಸಿಂಹ
ಸಮಾಜದಲ್ಲಿ ಹೆಸರು ಸಂಪಾದಿಸಲು ಪೂರಕವಾದ ವಾತಾವರಣ ಮೂಡಿಬರಲಿದೆ. ಆಭರಣ ಅಥವಾ ಬಟ್ಟೆ ವ್ಯಾಪಾರ ಮಾಡುವವರು ಪತ್ರಿಕೆಯವರ ಸಹಕಾರದಿಂದ ಪ್ರಚಾರವನ್ನು ಪಡೆದುಕೊಳ್ಳಬಹುದು. ಹೊಸ ಉತ್ಸಾಹ ಮೂಡಲಿದೆ.
ಕನ್ಯಾ
ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯುವುದು. ಇಂದಿನ ಕೆಲಸ, ಇಂದೇ ಮುಗಿಸುವುದನ್ನು ಕಾರ್ಯರೂಪಕ್ಕೆ ತಂದುಕೊಳ್ಳಿರಿ. ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಬಹುದು.
ತುಲಾ
ಪ್ರತಿಷ್ಠಿತ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದಗಳನ್ನು ಮಾಡಿಕೊಳ್ಳುವುದರಿಂದ ಹೆಚ್ಚಿನ ವರಮಾನ ಮತ್ತು ಸಮಾಜದಲ್ಲಿ ಉನ್ನತ ಸ್ಥಾನಮಾನ ನಿರೀಕ್ಷಿಸಬಹುದು. ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸಬೇಕಾಗುತ್ತದೆ.
ವೃಶ್ಚಿಕ
ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮ ರೀತಿಯಲ್ಲಿ ನಡೆಯುವುದು. ಖಾದ್ಯ ತೈಲಗಳ ವ್ಯಾಪಾರಗಳಿಂದ ಹೇರಳ ಲಾಭವನ್ನು ಹೊಂದುವಿರಿ. ದಂತ ವೇದನೆಯಿಂದ ದಂತವೈದ್ಯರನ್ನು ಸಂಪರ್ಕಿಸಬೇಕಾಗಬಹುದು.
ಧನು
ಭೂಸಂಬಂಧಿ ಅದರಲ್ಲೂ ಕೃಷಿ ಭೂಮಿ ವ್ಯವಹಾರದಲ್ಲಿರುವವರಿಗೆ ಧನಲಾಭ. ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನ ನಿಮ್ಮ ಪಾಲಿಗಿರುವುದರಿಂದ ಶುಭವಾಗುವುದು. ಕಂಕಣ ಬಲದ ಸಾಧ್ಯತೆಯು ಹೆಚ್ಚಾಗಿ ಇರುವುದು.
ಮಕರ
ಯಾವುದೇ ಸ್ವಾರ್ಥ ಅಪೇಕ್ಷೆ ಇಲ್ಲದೇ ಮಾಡುತ್ತಿರುವ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಇರುತ್ತದೆ. ಹೊಸ ಹಾದಿಯಲ್ಲಿ ಹೆಜ್ಜೆ ಇಡಲು ಇಂದು ಸುಸಮಯ. ಮನೆಗಾಗಿ ವಿಲಾಸಿ ಸಾಮಗ್ರಿಗಳನ್ನು ಖರೀದಿಸುವುದು ಖರ್ಚಿಗೆ ದಾರಿಯಾಗಲಿದೆ.
ಕುಂಭ
ಬಂಧುಗಳ ಮನೆಯಲ್ಲಿ ನಡೆಯುವ ಕೆಲವು ವಿಚಿತ್ರವಾದ ಆಚರಣೆಗಳಿಂದ ನಿಮಗೆ ಗೊಂದಲ ಮೂಡಬಹುದು. ಉದ್ಯೊಗ ನಿಮಿತ್ತ ಪ್ರಯಾಣದ ಸಾಧ್ಯತೆ ಇರುವುದು. ವಸ್ತ್ರವಿನ್ಯಾಸದಲ್ಲಿ ವಿಶೇಷ ಪರಿಣಿತಿ ಪಡೆದುಕೊಳ್ಳುವಿರಿ.
ಮೀನ
ಈ ದಿನದ ಕಾರ್ಯಸಾಧನೆಯಲ್ಲಿ ಸ್ವಲ್ಪ ಪರಿಶ್ರಮವನ್ನೂ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ನೀವು ಮಾಡುವ ಕೆಲಸದಲ್ಲಿ ದೋಷಗಳು ಇರಲಿವೆ. ಅಧಿಕಾರ, ಅನುಭವದಿಂದ ನಿಮ್ಮ ಆತ್ಮಾಭಿಮಾನ ದುರಾಭಿಮಾನವಾಗದಿರಲಿ.
ADVERTISEMENT
ADVERTISEMENT