ಕರ್ಣಾಟಕ ಬ್ಯಾಂಕ್‌: ₹ 61.73 ಕೋಟಿ ಲಾಭ

ಬುಧವಾರ, ಮೇ 22, 2019
34 °C
ಷೇರುದಾರರಿಗೆ ಶೇ 35ರಷ್ಟು ಲಾಭಾಂಶ ಘೋಷಣೆ

ಕರ್ಣಾಟಕ ಬ್ಯಾಂಕ್‌: ₹ 61.73 ಕೋಟಿ ಲಾಭ

Published:
Updated:

ಮಂಗಳೂರು: ಕರ್ಣಾಟಕ ಬ್ಯಾಂಕ್‌ 2019ರ ಮಾರ್ಚ್‌ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ  ₹ 61.73 ಕೋಟಿ ನಿವ್ವಳ ಲಾಭ ಗಳಿಸಿದೆ.

2017–18ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ ₹ 11 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದಕ್ಕೆ ಹೋಲಿಸಿದರೆ 2018–19ರಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.

2018–19ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ ₹ 477.24 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಶೇ 46.57ರಷ್ಟು ಹೆಚ್ಚಳ ಸಾಧಿಸಿದೆ. ನಿವ್ವಳ ಲಾಭ ಗಳಿಕೆಯಲ್ಲಿ ಇದು ಕರ್ಣಾಟಕ ಬ್ಯಾಂಕ್‌ನ ಸಾರ್ವಕಾಲಿಕ ದಾಖಲೆಯಾಗಿದೆ. 2016–17ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ ₹ 452.26 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದು ಈವರೆಗಿನ ಅತ್ಯಧಿಕ ಲಾಭ ಗಳಿಕೆಯಾಗಿತ್ತು.

ಲಾಭಾಂಶ: ಮಂಗಳೂರಿನಲ್ಲಿ ಸೋಮವಾರ ಕರ್ಣಾಟಕ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆ ನಡೆದಿದ್ದು, ಷೇರುದಾರರಿಗೆ ಶೇ 35ರಷ್ಟು ಲಾಭಾಂಶ (ಡಿವಿಡೆಂಡ್‌) ವಿತರಿಸಲು ನಿರ್ಧರಿಸಲಾಗಿದೆ.

ವಸೂಲಾಗದ ಸಾಲದ (ಎನ್‌ಪಿಎ) ಮೊತ್ತವನ್ನು ಇಳಿಕೆ ಮಾಡುವಲ್ಲೂ ಬ್ಯಾಂಕ್‌ ಗಣನೀಯ ಸಾಧನೆ ಮಾಡಿದೆ. ಬ್ಯಾಂಕ್‌ನ ಒಟ್ಟು ಸರಾಸರಿ ಎನ್‌ಪಿಎ ಮೊತ್ತವು ಶೇ 4.92ರಿಂದ (2018ರ ಮಾರ್ಚ್‌ 31) ಶೇ 4.41ಕ್ಕೆ ಇಳಿದಿದೆ. ಅದೇ ರೀತಿ ನಿವ್ವಳ ಎನ್‌ಪಿಎ ಪ್ರಮಾಣವು ಶೇ 2.96ರಿಂದ ಶೇ 2.95ಕ್ಕೆ ತಗ್ಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !