ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಬ್ರಹ್ಮ ಕಪಾಲದಿಂದ ನೊಂದ ಈಶ್ವರನಂತಾದ ಜಿಂಕೆ: ಪರಿಸರಪ್ರಿಯರ ನಿದ್ದೆಗೆಡಿಸಿದ ಚಿತ್ರ

‘ಬದುಕು ನಿರಂತರ’ ಸಂದೇಶ ಸಾರುತ್ತಿದೆ ಜಿಂಕೆ
Published : 16 ಫೆಬ್ರುವರಿ 2026, 14:44 IST
Last Updated : 16 ಫೆಬ್ರುವರಿ 2026, 14:44 IST
ಫಾಲೋ ಮಾಡಿ
Comments
ಚಿತ್ರಕೃಪೆ: Kohei Nagira / Natural History Museum: Home - London

ಚಿತ್ರಕೃಪೆ: Kohei Nagira / Natural History Museum: Home - London

ಅಂತಿಮ ಸುತ್ತಿನಲ್ಲಿರುವ ಇತರ ಚಿತ್ರಗಳು
ಜೆಲ್ಲಿ ಫಿಷ್‌ & ಏಡಿ
ಇಂಡೋನೇಷ್ಯಾದ ಉತ್ತರ ಸುಲವೇಸಿಯ ಲೆಂಬೆ ಜಲಸಂಧಿಯಲ್ಲಿ ರಾತ್ರಿ ಹೊತ್ತಿನಲ್ಲಿ ಸ್ಕೂಬಾ ಡೈವಿಂಗ್‌ಗೆ ಇಳಿದಾಗ ಕ್ರಿಸ್‌ ಗಗ್‌ ಅವರು ಈ ಚಿತ್ರ ಸೆರೆ ಹಿಡಿದಿದ್ದಾರೆ. ಏಡಿಯು, ಸಣ್ಣ ಸಣ್ಣ ಮೀನುಗಳನ್ನು ತಿನ್ನಲು ಪಾರದರ್ಶಕ ಜೆಲ್ಲಿ ಫಿಷ್‌ ಮುಖಾಂತರ ಹೊಂಚು ಹಾಕುತ್ತಿರಬಹುದು ಅಥವಾ ಮೀನನ್ನೇ ತಿನ್ನಲು ಪ್ರಯತ್ನಿಸುತ್ತಿರಬಹುದು ಎಂದು ವ್ಯಾಖ್ಯಾನಿಸಲಾಗಿದೆ.
ಚಿತ್ರಕೃಪೆ: Chris Gug / Natural History Museum: Home - London

ಚಿತ್ರಕೃಪೆ: Chris Gug / Natural History Museum: Home - London

ಬೆಕ್ಕಿಗೆ ಚೆಲ್ಲಾಟ
ಹೆಬ್ಬೆಕ್ಕು ತನ್ನ ಬೇಟೆಯಾದ ಇಲಿಯನ್ನು ಕೊಂದು ತಿನ್ನುವ ಮುನ್ನ ಚೆಲ್ಲಾಟವಾಡುತ್ತಿರುವ ಚಿತ್ರವನ್ನು ಜೋಸೆಫ್ ಸ್ಟೀಫನ್ ಅವರು ಸ್ಪೇನ್‌ನ ಸಿಯುಡಾಡ್ ರಿಯಲ್‌ನಲ್ಲಿ ಕ್ಲಿಕ್ಕಿಸಿದ್ದಾರೆ.
ಚಿತ್ರಕೃಪೆ: Josef Stefan / Natural History Museum: Home - London

ಚಿತ್ರಕೃಪೆ: Josef Stefan / Natural History Museum: Home - London

ಒಂದೇ ನೋಟ
ವಿಶ್ವದಲ್ಲೇ ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಾಣಿ ಎನಿಸಿರುವ ಸಿಂಹ ಬಾಲದ ಕೋತಿ ಹಾಗೂ ಅದರ ಮರಿಯ ಚಿತ್ರವನ್ನು ಲಲಿತ್ ಏಕನಾಯಕೆ ಅವರು ತಮಿಳುನಾಡಿನ ವಾಲ್ಪರೈನಲ್ಲಿ ಸೆರೆಹಿಡಿದಿದ್ದಾರೆ. ಈ ಪಟ್ಟಣವು ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿದೆ. ಓಡುತ್ತಾ ಬರುತ್ತಿರುವ ಕೋತಿ ಹಾಗೂ ಅದನ್ನು ಬಾಚಿ ಅಪ್ಪಿಕೊಂಡು ತಲೆಕೆಳಗಾಗಿರುವ ಮರಿಯ ನೋಟ ಛಾಯಾಗ್ರಾಹಕನತ್ತಲೇ ನೆಟ್ಟಿರುವುದು ಚಿತ್ರದ ಹೈಲೈಟ್‌.
ಚಿತ್ರಕೃಪೆ: Lalith Ekanayake / Natural History Museum: Home - London

ಚಿತ್ರಕೃಪೆ: Lalith Ekanayake / Natural History Museum: Home - London

ಮರಿ ಪ್ಯಾಂಗೊಲಿನ್‌
ಪ್ಯಾಂಗೊಲಿನ್‌ಗಳು ಅತಿ ಹೆಚ್ಚು ಕಳ್ಳಸಾಗಣೆಯಾಗುವ ಪ್ರಾಣಿಗಳ ಪಟ್ಟಿಯಲ್ಲಿವೆ. ಕಳ್ಳಬೇಟೆಯಿಂದ ರಕ್ಷಿಸಲ್ಪಟ್ಟ ಪ್ಯಾಂಗೊಲಿನ್‌ವೊಂದು ಮರಿಗೆ ಜನ್ಮ ನೀಡಿ, ಸ್ವಲ್ಪ ಸಮಯದ ನಂತರ ಮೃತಪಟ್ಟಿತ್ತು. ಅದರ ಮರಿಯ ಚಿತ್ರವನ್ನು ಲ್ಯಾನ್ಸ್ ವ್ಯಾನ್ ಡಿ ವೈವರ್ ಸೆರೆ ಹಿಡಿದಿದ್ದಾರೆ.
ಚಿತ್ರಕೃಪೆ: Lance van de Vyver / Natural History Museum: Home - London

ಚಿತ್ರಕೃಪೆ: Lance van de Vyver / Natural History Museum: Home - London

ಚಿತ್ರಕೃಪೆ: Nima Sarikhani / Natural History Museum: Home - London

ಚಿತ್ರಕೃಪೆ: Nima Sarikhani / Natural History Museum: Home - London

ಅಮ್ಮನ ತೆಕ್ಕೆಯಲ್ಲಿ
ಸ್ಲೋತ್‌ ಪ್ರಾಣಿಯು ಕೆಲವು ದಿನಗಳ ಹಿಂದಷ್ಟೇ ಹುಟ್ಟಿದ ತನ್ನ ಮರಿಯನ್ನು ಮಳೆಯಿಂದ ರಕ್ಷಿಸಲು ತೋಳ ತೆಕ್ಕೆಯಲ್ಲಿ ಇಟ್ಟುಕೊಂಡಿರುವುದನ್ನು ಡ್ವೀರ್‌ ಬಾರ್ಕೆ ಅವರು ಕ್ಲಿಕ್ಕಿಸಿದ್ದಾರೆ. ಈ ದೃಶ್ಯ ಸಿಕ್ಕಿದ್ದು, ಕೋಸ್ಟರಿಕಾದ ಲಾ ಸೆಲ್ವಾ ಜೈವಿಕ ಕೇಂದ್ರದಲ್ಲಿ.
ಚಿತ್ರಕೃಪೆ: Dvir Barkay / Natural History Museum: Home - London

ಚಿತ್ರಕೃಪೆ: Dvir Barkay / Natural History Museum: Home - London

ಚಿತ್ರಕೃಪೆ: Prasenjeet Yadav / Natural History Museum: Home - London

ಚಿತ್ರಕೃಪೆ: Prasenjeet Yadav / Natural History Museum: Home - London

ಬಲೆಗಳ ರಾಶಿ
ಉಗಾಂಡಾದ ಮುರ್ಚಿಸನ್ ಜಲಪಾತ ರಾಷ್ಟ್ರೀಯ ಉದ್ಯಾನವನದಲ್ಲಿ ಕೇವಲ ಒಂದೇ ವರ್ಷದಲ್ಲಿ ವಶಕ್ಕೆ ಪಡೆದಿರುವ ಬಲೆಗಳ ರಾಶಿ ಎದುರು ಅಲ್ಲಿನ ವನ್ಯಜೀವಿ ಪ್ರಾಧಿಕಾರದ ಸಿಬ್ಬಂದಿ ಕ್ಯಾಮೆರಾಗೆ ಪೋಸ್‌ ನೀಡಿರುವ ಚಿತ್ರವೂ ಪ್ರಶಸ್ತಿ ರೇಸ್‌ನಲ್ಲಿದೆ. ಈ ದೃಶ್ಯವನ್ನು ಆಡಮ್ ಓಸ್ವೆಲ್ ಕಟ್ಟಿಕೊಟ್ಟಿದ್ದಾರೆ. ವನ್ಯಜೀವ ಸಂಕುಲಕ್ಕೆ ಎದುರಾಗಿರುವ ಆಪತ್ತು ಎಂಥದ್ದು ಎಂಬುದನ್ನು ಬಲೆಗಳ ರಾಶಿಯೇ ಬಿಚ್ಚಿಡುತ್ತಿದೆ.
ಚಿತ್ರಕೃಪೆ: Adam Oswell / Natural History Museum: Home - London

ಚಿತ್ರಕೃಪೆ: Adam Oswell / Natural History Museum: Home - London

ಡಾಲ್ಫಿನ್‌ ಜಗತ್ತು
ಕೋಸ್ಟರಿಕಾ ಸಮೀಪದ ಪೆಸಿಫಿಕ್ ಮಹಾಸಾಗರದಲ್ಲಿ ಮುಕ್ತವಾಗಿ ಈಜುತ್ತಿರುವ ಸ್ಪಿನ್ನರ್‌ ಡಾಲ್ಫಿನ್‌ಗಳ ಹಿಂಡು ಕಣ್ಣಿಗೆ ಮುದ ನೀಡುತ್ತದೆ. ಸೆಸಿಲಿ ಗ್ಯಾಬಿಲ್ಲನ್ ಈ ಚಿತ್ರ ಸೆರೆ ಹಿಡಿದಿದ್ದಾರೆ. ಸಾಗರ ಮಲಿನಗೊಳ್ಳುತ್ತಿರುವುದು ಹಾಗೂ ಅತಿಯಾದ ಮೀನುಗಾರಿಕೆಯು ಡಾಲ್ಫಿನ್‌ಗಳನ್ನು ಅಳಿವಿನಂಚಿಗೆ ದೂಡಿವೆ.
ಚಿತ್ರಕೃಪೆ: Cecile Gabillon / Natural History Museum: Home - London

ಚಿತ್ರಕೃಪೆ: Cecile Gabillon / Natural History Museum: Home - London

ಚಿತ್ರಕೃಪೆ: Mogens Trolle / Natural History Museum: Home - London

ಚಿತ್ರಕೃಪೆ: Mogens Trolle / Natural History Museum: Home - London

ಬೇಟೆಯಾದ ಕ್ಯಾಟ್‌ಫಿಷ್‌
ಬ್ರೆಜಿಲ್‌ನ ಮ್ಯಾಟೊ ಗ್ರೊಸೊ ಡೊ ಸುಲ್‌ ಬಳಿ ಲ್ಯೂಸಿಸ್ಟಿಕ್ ನೀರುನಾಯಿಯು ಕ್ಯಾಟ್‌ಫಿಷ್‌ ಅನ್ನು ಹಿಡಿದು ತಿನ್ನುತ್ತಿರುವುದನ್ನು ಡೆನೀಲಾ ಅಂಗರ್‌ ಸೆರೆ ಹಿಡಿದಿದ್ದಾರೆ. ಮೆಲನಿನ್ ಕೊರತೆಯಿಂದಾಗಿ ಈ ನೀರುನಾಯಿಯ ತುಪ್ಪಳ ಮಸುಕಾಗಿದೆ. ಈ ರೀತಿಯಾದಾಗ, ಇತರ ಜೀವಿಗಳಿಂದ ಕಣ್ತಪ್ಪಿಸಿಕೊಳ್ಳಲು, ಸಂಚು ಮಾಡಿ ಬೇಟೆಯಾಡುವುದಕ್ಕೆ ತುಸು ಹಿನ್ನಡೆಯಾಗುತ್ತದೆ.
ಚಿತ್ರಕೃಪೆ: Daniela Anger / Natural History Museum: Home - London

ಚಿತ್ರಕೃಪೆ: Daniela Anger / Natural History Museum: Home - London

ಬಾಲ ಬಿಚ್ಚಿದ ಹಮ್ಮಿಂಗ್‌ ಬರ್ಡ್
ಪೆರುವಿನ ಪೊಮಾಕೊಚಾಸ್‌ನಲ್ಲಿ ಡಸ್ಟಿನ್ ಚೆನ್ ಕ್ಲಿಕ್ಕಿಸಿರುವ ಈ ಚಿತ್ರ ಕಣ್ಮನ ಸೆಳೆಯುತ್ತದೆ. ಹೂವಿನ ದಳಕ್ಕೆ ಕೊಕ್ಕಿಟ್ಟು, ಉದ್ದನೆಯ ಬಾಲವನ್ನು ಆಚೀಚೆ ಹರಡಿ, ಗಾಳಿಯಲ್ಲಿ ಹಾರುತ್ತಾ ಸಮತೋಲನ ಕಾಪಾಡಿಕೊಂಡಿರುವ ಈ ಪಕ್ಷಿ ಸ್ಪಾಟುಲೆಟೈಲ್ ಹಮ್ಮಿಂಗ್‌ ಬರ್ಡ್. ಹೆಣ್ಣನ್ನು ತನ್ನತ್ತ ಆಕರ್ಷಿಸುವುದಕ್ಕಾಗಿಯೂ ಈ ರೀತಿ ಬಾಲ ಬಿಚ್ಚುತ್ತದೆ.
ಚಿತ್ರಕೃಪೆ: Dustin Chen / Natural History Museum: Home - London

ಚಿತ್ರಕೃಪೆ: Dustin Chen / Natural History Museum: Home - London

ಚಿತ್ರಕೃಪೆ: Will Nicholls / Natural History Museum: Home - London

ಚಿತ್ರಕೃಪೆ: Will Nicholls / Natural History Museum: Home - London

ಹಾರುವ ಕಾತರ
ಗೂಡಿನಿಂದ ಹೊರ ಬಂದು ಹಾರಲು ಸಜ್ಜಾಗುತ್ತಿರುವ ಕೆಸ್ಟ್ರೆಲ್‌ ಮರಿಗಳ ಚಿತ್ರವನ್ನು ಪೀಟರ್ ಲಿಂಡೆಲ್ ಅವರು, ಜರ್ಮನಿಯ ಡಾರ್ಟ್ಮಂಡ್‌ನಲ್ಲಿರುವ ತಮ್ಮ ಮನೆಯ ಬಳಿಯೇ ಸೆರೆ ಹಿಡಿದಿದ್ದಾರೆ.
ಚಿತ್ರಕೃಪೆ: Peter Lindel / Natural History Museum: Home - London

ಚಿತ್ರಕೃಪೆ: Peter Lindel / Natural History Museum: Home - London

ಚಿತ್ರಕೃಪೆ: Lior Berman / Natural History Museum: Home - London

ಚಿತ್ರಕೃಪೆ: Lior Berman / Natural History Museum: Home - London

ಬೇಟೆಗೆ ಸಂಚು
ಆಂಬುಷ್‌ ಬಗ್‌ ಕೀಟವು ಹೂವಿನ ಮೇಲೆ ನಿಶ್ಚಲವಾಗಿ ಕುಳಿತು ಬೇಟೆಗಾಗಿ ಕಾಯುತ್ತಿರುವ ಚಿತ್ರವನ್ನು ಜೋಸೆಫ್‌ ಫೆರಾರೊ ಕ್ಲಿಕ್ಕಿಸಿದ್ದಾರೆ. ಅಮೆರಿಕದ ಮಿಚಿಗನ್‌ನ ಫೆರ್ನ್‌ಡೆಲ್‌ನಲ್ಲಿರುವ ತಮ್ಮ ಮನೆಯ ಎದುರೇ ಈ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ.
ಚಿತ್ರಕೃಪೆ: Joseph Ferraro / Natural History Museum: Home - London

ಚಿತ್ರಕೃಪೆ: Joseph Ferraro / Natural History Museum: Home - London

ಬಿಂಬವಲ್ಲ ನಂಬು
ತಾಯಿ ಬ್ರಷ್‌ಟೇಲ್ ಪೊಸಮ್‌ ಜೋಯ್‌, ಆಹಾರ ಹುಡುಕುತ್ತಾ ಕೊಂಬೆಯ ಮೇಲೆ ನಡೆಯುತ್ತಿದ್ದ ಹೊತ್ತಲ್ಲಿ, ಮರಿಯು ಕೆಳಗಿನಿಂದ ಜೋತಾಡುತ್ತಾ ಅಮ್ಮನನ್ನು ಅನುಕರಿಸುತ್ತಿದೆ. ಇದು, ಪ್ರತಿಬಿಂಬವೆಂಬಂತೆ ಕಾಣುತ್ತಿದೆ. ಚಿಗುರೆಲೆ, ಹೂ ಮೊಗ್ಗು, ಕೀಟಗಳೇ ಇವಕ್ಕೆ ಆಹಾರ. ಆಸ್ಟ್ರೇಲಿಯಾದ ತಾಸ್ಮೇನಿಯಾದಲ್ಲಿ ಈ ಚಿತ್ರವನ್ನು ಚಾರ್ಲ್ಸ್‌ ಡೇವಿಸ್‌ ಕ್ಲಿಕ್ಕಿಸಿದ್ದಾರೆ.
ಚಿತ್ರಕೃಪೆ: Charles Davis / Natural History Museum: Home - London

ಚಿತ್ರಕೃಪೆ: Charles Davis / Natural History Museum: Home - London

ಚಿತ್ರಕೃಪೆ: Artur Tomaszek / Natural History Museum: Home - London

ಚಿತ್ರಕೃಪೆ: Artur Tomaszek / Natural History Museum: Home - London

ಅಮ್ಮನ್ನ ಬೆನ್ನೇರಿ..
ಸಾರಸ್‌ ಕ್ರೇನ್‌ ಪಕ್ಷಿಯು ತನ್ನ ಎಳೆಯ ಕಂದಮ್ಮನನ್ನು ಬೆನ್ನ ಮೇಲೆ ಕೂರಿಸಿಕೊಂಡು ಆತ್ಮೀಯವಾಗಿ ಸಂಭಾಷಣೆ ನಡೆಸುತ್ತಿರುವಂತೆ ಕಾಣುವ ಈ ದೃಶ್ಯವು ಥೈಲ್ಯಾಂಡ್‌ನ ಬುರಿ ರಾಮ್‌ ಪ್ರದೇಶದಲ್ಲಿರುವ ಹುವಾಯ್ ಚೋರಾಖೆ ಮಕ್‌ ಎಂಬಲ್ಲಿನ ಭತ್ತದ ಗದ್ದೆಗಳಲ್ಲಿ ಕಂಡು ಬಂದಿದೆ. ಇದನ್ನು ಸೆರೆ ಹಿಡಿದವರು ಪೊನ್ಲಾವತ್‌ ಥೈಪಿನ್ನರೊಂಗ್‌.
ಚಿತ್ರಕೃಪೆ: Ponlawat Thaipinnarong / Natural History Museum: Home - London

ಚಿತ್ರಕೃಪೆ: Ponlawat Thaipinnarong / Natural History Museum: Home - London

ಸೋಲಾರ್‌ ಅಲೆ
ಭೂಮಿಯ ಮೇಲೆ ಅಳವಡಿಸಿರುವ ಸೌರ ಫಲಕಗಳ ಸಾಲು, ಸಾಗರದ ಅಲೆಯಂತೆ ಹರಡಿಕೊಂಡಿರುವ ಚಿತ್ರ ಇದಾಗಿದೆ. ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ಶೈರ್‌ನಲ್ಲಿರುವ ಕೇಂಬ್ರಿಡ್ಜ್‌ ಎಂಬ ಸಣ್ಣ ಹಳ್ಳಿಯ ಸಮೀಪ ಈ ಸೋಲಾರ್‌ ಪಾರ್ಕ್‌ ಇದ್ದು, ಹುಲ್ಲುಗಾವಲಿನ ಮೇಲೆ ಫಲಕಗಳನ್ನು ಅಳವಡಿಸಲಾಗಿದೆ. ಫ್ರಾನ್ಸೆಸ್ಕೊ ರುಸ್ಸೋ ಕ್ಲಿಕ್ಕಿಸಿರುವ ಈ ಚಿತ್ರ, ಪರಿಸರದ ಮೇಲೆ ಮನುಷ್ಯನ ಅತಿಕ್ರಮಣ ಎಂಥದ್ದು ಎಂಬುದನ್ನು ಸ್ಪಷ್ಟವಾಗಿ ದಾಖಲಿಸುತ್ತದೆ.
ಚಿತ್ರಕೃಪೆ: Francesco Russo / Natural History Museum: Home - London

ಚಿತ್ರಕೃಪೆ: Francesco Russo / Natural History Museum: Home - London

ಚಿತ್ರಕೃಪೆ: Alexandre Brisson / Natural History Museum: Home - London

ಚಿತ್ರಕೃಪೆ: Alexandre Brisson / Natural History Museum: Home - London

ಅಮ್ಮನೊಂದಿಗೆ ಹಾಯಾಗಿ..
ಬಿಸಿಲಿನ ಝಳ ಹೆಚ್ಚಾದ ಹೊತ್ತಲ್ಲಿ ಹಿಮಕರಡಿ ಮತ್ತದರ ಮೂರು ಮರಿಗಳು ಹಾಯಾಗಿ ವಿಶ್ರಮಿಸುತ್ತಿರುವ ಚಿತ್ರ ಇದಾಗಿದೆ. ಕೆನಡಾದ ಹಡ್ಸನ್‌ ಕೊಲ್ಲಿಯ ಕರಾವಳಿಯಲ್ಲಿ ಸಿಕ್ಕ ಅಪರೂಪದ ಚಿತ್ರ ಇದಾಗಿದೆ. ತಾಪಮಾನ ಏರಿದರೆ ಮಂಜುಗಡ್ಡೆ ಕರಗುವುದರಿಂದ, ಬೇಸಿಗೆಯಲ್ಲಿ ಆಹಾರ ಹುಡುಕುವುದು ಹಿಮಕರಡಿಗಳಿಗೆ ಕಠಿಣವಾಗುತ್ತದೆ.
ಚಿತ್ರಕೃಪೆ: Christopher Paetkau / Natural History Museum: Home - London

ಚಿತ್ರಕೃಪೆ: Christopher Paetkau / Natural History Museum: Home - London

ಚಿತ್ರಕೃಪೆ: Thomas Hunt / Natural History Museum: Home - London

ಚಿತ್ರಕೃಪೆ: Thomas Hunt / Natural History Museum: Home - London

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT