ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಕಾಡಲಿದೆ ಅನಾರೋಗ್ಯ, ಎಚ್ಚರವಹಿಸಿ
Published 15 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇವತಾನುಗ್ರಹದ ಜತೆಯಲ್ಲಿ ಋಣಭಾದೆಗೆ ಅಂತ್ಯ ಕಾಣಿಸುವ ಕಾಲ ಒದಗಿಬರುವುದು. ಕೊಟ್ಟ ಮಾತಿನಂತೆ ಕೆಲಸ ನೆರವೇರಿಸಿ ಕೊಡುವುದರಿಂದ ಹೆಸರು ಗಳಿಸಬಹುದು. ವ್ಯವಹಾರಗಳಲ್ಲಿ ಹಿಡಿತ ಸಾಧಿಸುವಿರಿ.
15 ಫೆಬ್ರುವರಿ 2026, 22:30 IST
ವೃಷಭ
ಋಣಾತ್ಮಕ ಚಿಂತನೆಯಿಂದ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವ ನಿಮ್ಮ ಅಭ್ಯಾಸ ವ್ಯತ್ಯಾಸ ಆಗುವುದು. ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ.
15 ಫೆಬ್ರುವರಿ 2026, 22:30 IST
ಮಿಥುನ
ರೈತರು ಬೆಳೆಗಳ ಅಭಿವೃದ್ಧಿ, ರಕ್ಷಣೆಯ ಬಗ್ಗೆ ಗಮನಹರಿಸಿ. ನಿಮ್ಮ ಆಹಾರ ಪದ್ಧತಿಯು ಅನಾರೋಗ್ಯಕ್ಕೆ ಮೂಲ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಅಗಾಧವಾದ ಪ್ರಯತ್ನ ಬೇಕಾಗುವುದು.
15 ಫೆಬ್ರುವರಿ 2026, 22:30 IST
ಕರ್ಕಾಟಕ
ಸಿನಿಮಾ ರಂಗದವರಿಗೆ ಮತ್ತು ಜವಳಿ ವ್ಯಾಪಾರಿಗಳಿಗೆ ಹೂಡಿಕೆ ಮಾಡುವ ಯೋಚನೆ ಉತ್ತಮವಲ್ಲ. ಸ್ತ್ರೀಯರಿಗೆಗೌರವ, ಮನ್ನಣೆ ಸಿಗಲಿದೆ. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭ.
15 ಫೆಬ್ರುವರಿ 2026, 22:30 IST
ಸಿಂಹ
ಪ್ರತಿ ವರ್ಷ ಮಾಡಿಕೊಂಡುಬಂದ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸಿ. ಸಹಾಯ ಮಾಡುವಂತಹಾ ನಿಮ್ಮ ನಡವಳಿಕೆಯು ಅಭಿವೃದ್ಧಿಗೆ ರಕ್ಷೆಯಾಗಿ ಇರುತ್ತದೆ.
15 ಫೆಬ್ರುವರಿ 2026, 22:30 IST
ಕನ್ಯಾ
ಷೇರು ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಗಮನಿಸಿ ತೆಗೆದುಕೊಂಡ ತೀರ್ಮಾನ ಸರಿಯಾದದ್ದಾಗಲಿದೆ. ನಿಮ್ಮ ಕೆಲಸದಲ್ಲಿ ಸಮಯ ಪಾಲನೆ ಮಾಡುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಿ.
15 ಫೆಬ್ರುವರಿ 2026, 22:30 IST
ತುಲಾ
ಸಾಮರ್ಥ್ಯಕ್ಕೆ ಮತ್ತು ಕೆಲಸಕ್ಕೆ ಗ್ರಹಣ ಆವರಿಸಿ ಯೋಜನಾಬದ್ಧರಾಗಿ ಕೆಲಸ ನಡೆಯದೇ ಇರಬಹುದು. ಒಮ್ಮೊಮ್ಮೆ ಸಾಮಾಜಿಕ ರಂಗದಲ್ಲಿ ಮುಜುಗರದ ಸನ್ನಿವೇಶಗಳು ಸೃಷ್ಟಿಯಾಗಬಹುದು.
15 ಫೆಬ್ರುವರಿ 2026, 22:30 IST
ವೃಶ್ಚಿಕ
ಬಾಲ್ಯ ಸ್ನೇಹಿತರೊಂದಿಗೆ ಸಮಯ ಕಳೆಯುವ ಸಂದರ್ಭ ಬರಬಹುದು. ಮಕ್ಕಳಿಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಿ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸಬಹುದು.
15 ಫೆಬ್ರುವರಿ 2026, 22:30 IST
ಧನು
ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದರೂ ತಪ್ಪುಗಳು ಪುನರಾವರ್ತನೆಯಾಗುತ್ತವೆ. ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಇರದು. ವ್ಯವಹಾರದಲ್ಲಿ ಬಂಡವಾಳ ಹೂಡುವಂತೆ ಒತ್ತಾಯ ಹೆಚ್ಚಲಿದೆ.
15 ಫೆಬ್ರುವರಿ 2026, 22:30 IST
ಮಕರ
ಫ್ಯಾಷನ್ ಡಿಸೈನರ್‌ಗಳು ಅವಕಾಶಗಳನ್ನು ಹಾಗೂ ಉತ್ತಮ ಧನಲಾಭ ಪಡೆಯುವರು. ಪುಣ್ಯ ಸಂಪಾದನೆ ಮಾಡುವ ಕಾರಣಕ್ಕಾಗಿ ದಾನ-ಧರ್ಮ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ.
15 ಫೆಬ್ರುವರಿ 2026, 22:30 IST
ಕುಂಭ
ಬಿಟ್ಟು ಸ್ವಲ್ಪ ಕಾಲದ ನಂತರ ಮಾಡುತ್ತೇನೆ ಎಂದು ನೀವು ಅಂದುಕೊಳ್ಳುವ ವಿಷಯಗಳು ಬಿಟ್ಟ ಹಂತದಲ್ಲೇ ನಿಂತು ಹೋಗುವ ಸಾಧ್ಯತೆ ಇರುವುದರಿಂದ ಕೂಡಲೇ ಪೂರೈಸುವ ಯೋಚನೆ ಮಾಡಿ.
15 ಫೆಬ್ರುವರಿ 2026, 22:30 IST
ಮೀನ
ವಿಳಂಬವಾಗಿದ್ದ ಕಾರ್ಯ ಕಲಾಪಗಳು ಚುರುಕುಗೊಂಡು ಅನುಕೂಲ ಒದಗಿ ಬರಲಿದೆ. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯ ನಿವಾರಣೆಯಾಗುವಂತೆ ವರ್ತಿಸಿ. ಉದ್ಯೋಗಕ್ಕಾಗಿ ಅಲೆದಾಟ ತಪ್ಪದು.
15 ಫೆಬ್ರುವರಿ 2026, 22:30 IST