ಬುಧವಾರ, ಸೆಪ್ಟೆಂಬರ್ 22, 2021
21 °C

ಹಾಕಿ: ಭಾರತ ತಂಡಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್: ಭಾರತ ಹಾಕಿ ತಂಡವು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸೋತಿತು.

ಬುಧವಾರ ನಡೆದ ಹಣಾಹಣಿಯಲ್ಲಿ ಭಾರತ ತಂಡವು 0–4 ಗೋಲುಗಳಿಂದ ಆಸ್ಟ್ರೇಲಿಯಾ ಎದುರು ಸೋತಿತು. 

ಆಸ್ಟ್ರೇಲಿಯಾ ತಂಡದ ಬ್ಲೇಕ್ ಗೋವರ್ಸ್ (15ನೇ ನಿಮಿಷ, 60ನೇ ನಿ) ಮತ್ತು ಜೆರೆಮೈ ಹೇವರ್ಡ್‌ (20ನೇ ನಿ, 59ನಿ) ತಲಾ ಎರಡು ಗೋಲು ಹೊಡೆದರು. ಆಸ್ಟ್ರೇಲಿಯಾದ ರಕ್ಷಣಾಕೋಟೆ ಭದ್ರವಾಗಿತ್ತು. ಭಾರತದ ಫಾರ್ವರ್ಡ್‌ ಆಟಗಾರರಿಗೆ ಒಂದೇ ಒಂದು ಗೋಲು ಹೊಡೆಯಲು ಕೂಡ ಸಾಧ್ಯವಾಗಲಿಲ್ಲ. ಆದರೆ, ಭಾರತದ ಆಟಗಾರರು ಪಂದ್ಯದ ಆರಂಭದಲ್ಲಿ ಉತ್ತಮವಾಗಿ ಆಡಿದರು.  ಐದನೇ ನಿಮಿಷದಲ್ಲಿ ಲಭಿಸಿದ್ದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರ ನಿಖರ ಹೊಡೆತವನ್ನು ಆತಿಥೇಯ ರಕ್ಷಣಾ ಪಡೆಯು ತಡೆಯಿತು. 12ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಮತ್ತು ನೀಲಕಂಠ ಶರ್ಮಾ ಅವರು ಉತ್ತಮ ಹೊಂದಾಣಿಕೆಯ ಆಟದ ಮೂಲಕ ಚೆಂಡನ್ನು ಗೋಲುಪೆಟ್ಟಿಗೆ ಸಮೀಪ ತಂದಿದ್ದರು. ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು