ಸೋಮವಾರ, ಸೆಪ್ಟೆಂಬರ್ 20, 2021
28 °C

ಕಪಿಲ್ ದಾಖಲೆ ಮುರಿದ ಇಮಾಮ್: ಇಂಗ್ಲೆಂಡ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಟಲ್, ಇಂಗ್ಲೆಂಡ್ (ಎಎಫ್‌ಪಿ): ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಅವರು ಮೂವತ್ತಾರು ವರ್ಷಗಳ ಹಿಂದೆ ಭಾರತದ ಕಪಿಲ್ ದೇವ್ ಅವರು ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಮಂಗಳವಾರ ರಾತ್ರಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 23 ವರ್ಷದ ಇಮಾಮ್ ಅವರು ಶತಕ (151; 131 ಎಸೆತ)ಬಾರಿಸಿದರು. ಇಂಗ್ಲೆಂಡ್‌ನಲ್ಲಿ  ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಕಿರಿಯ ವಯಸ್ಸಿನ ಆಟಗಾರನಾದರು. 1983ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್‌ ಬಾರಿಸಿದ್ದರು. ಆಗ ಅವರು 24 ವರ್ಷದವರಾಗಿದ್ದರು.

ಇಂಗ್ಲೆಂಡ್ ವಿರುದ್ಧ 150ಕ್ಕೂ ಹೆಚ್ಚು ರನ್‌ ಗಳಿಸಿದ ಪಾಕಿಸ್ತಾನದ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರ ಶತಕದ ಬಲದಿಂದ ಪಾಕಿಸ್ತಾನ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 358 ರನ್‌ ಗಳಿಸಿತು. ಆದರೆ, ಜಾನಿ ಬೆಸ್ಟೊ (128 ರನ್) ಅವರ ಅಬ್ಬರದ ಶತಕದ ಬಲದಿಂದ ಇಂಗ್ಲೆಂಡ್ ತಂಡವು 6 ವಿಕೆಟ್‌ಗಳಿಂದ ಗೆದ್ದಿತು. ಆತಿಥೇಯ ತಂಡವು 44.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 359 ರನ್‌ ಗಳಿಸಿತು. 

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 358 (ಇಮಾಮ್ ಉಲ್ ಹಕ್ 151, ಹ್ಯಾರಿಸ್ ಸೊಹೈಲ್ 41, ಆಸಿಫ್ ಅಲಿ 52 ಇಮಾದ್ ವಾಸೀಂ 22, ಕ್ರಿಸ್ ವೋಕ್ಸ್‌ 67ಕ್ಕೆ4, ಟಾಮ್ ಕರನ್ 74ಕ್ಕೆ2)

ಇಂಗ್ಲೆಂಡ್: 44.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 369 (ಜೇಸನ್ ರಾಯ್ 76, ಜಾನಿ ಬೆಸ್ಟೊ 128, ಜೋ ರೂಟ್ 43, ಬೆನ್ ಸ್ಟೋಕ್ಸ್‌ 37, ಮೋಯಿನ್ ಅಲಿ 46) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 6 ವಿಕೆಟ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು