ಶುಕ್ರವಾರ, ಸೆಪ್ಟೆಂಬರ್ 20, 2019
27 °C

‘ಹಿಮಾಲಯ’ಕ್ಕೆ ಕೊಹ್ಲಿ, ಪಂತ್‌ ರಾಯಭಾರಿಗಳು

Published:
Updated:
Prajavani

ಬೆಂಗಳೂರು(ಪಿಟಿಐ): ಹಿಮಾಲಯ ಔಷಧಿ ಕಂಪನಿಯ ತನ್ನ ಉತ್ಪನ್ನಗಳಿಗೆ ‌ನೂತನ ರಾಯಭಾರಿಗಳನ್ನು ಹೆಸರಿಸಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉದಯೋನ್ಮುಖ ಆಟಗಾರ ರಿಷಭ್‌ ಪಂತ್‌ ಕಂಪನಿಯ ‘ಮೆನ್ಸ್‌ ಫೇಸ್‌ ಕೇರ್‌ ರೇಂಜ್‌‌’ ಹೆಸರಿನ ಉತ್ಪನ್ನದ ಕುರಿತು ಪ್ರಚಾರ ನಡೆಸಲಿದ್ದಾರೆ.

ಒಪ್ಪಂದದ ಕುರಿತು ಮಾತನಾಡಿರುವ ವಿರಾಟ್‌ ಕೊಹ್ಲಿ, ’ಹಿಮಾಲಯ ತಂಡದ ಭಾಗವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ.  ಹಲವು ವರ್ಷಗಳಿಂದ ಹಿಮಾಲಯ ಉತ್ಪನ್ನಗಳ ಗ್ರಾಹಕನಾಗಿದ್ದೇನೆ’ ಎಂದಿದ್ದಾರೆ.

ರಿಷಭ್‌ ಪಂತ್‌ ಪ್ರತಿಕ್ರಿಯಿಸಿ ‘ಹಿಮಾಲಯ ಕಂಪೆನಿಯು ಸುಮಾರು 88 ವರ್ಷಗಳಿಗಿಂತ ಅಧಿಕ ಕಾಲ ಜನರ ಬದುಕನ್ನು ಸುಖಮಯ ಹಾಗೂ ಆರೋಗ್ಯಮಯವಾಗಿಸಿದೆ. ಕಂಪನಿಯ ರಾಯಭಾರಿಯಾರಿಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ನುಡಿದರು.

Post Comments (+)