ಗುರುವಾರ , ಡಿಸೆಂಬರ್ 3, 2020
23 °C
ಕಿಂಗ್ಸ್‌ ಕಪ್‌: ಟೂರ್ನಿಗೆ ಇಗೊರ್‌ ಸ್ಟಿಮ್ಯಾಚ್‌ ಸಿದ್ಧತೆ

ಕಿಂಗ್ಸ್‌ ಕಪ್‌: 37 ಆಟಗಾರರ ಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭಾರತ ಫುಟ್‌ ಬಾಲ್‌ ತಂಡದ ನೂತನ ಕೋಚ್‌ ಇಗೊರ್‌ ಸ್ಟಿಮ್ಯಾಚ್‌ ಗುರುವಾರ ತಮ್ಮ ಕಾರ್ಯ ಆರಂಭಿಸಿದರು. ಮುಂದಿನ ತಿಂಗಳು ಥಾಯ್ಲೆಂಡ್‌ನಲ್ಲಿ ನಡೆ ಯಲಿರುವ ಕಿಂಗ್ಸ್‌ ಕಪ್‌ ಟೂರ್ನಿಯ ಪೂರ್ವಸಿದ್ಧತಾ ಶಿಬಿರಕ್ಕೆ ಸಂಭಾವ್ಯ ಆಟಗಾರರ ಪಟ್ಟಿಯನ್ನು ಅವರು ಬಿಡುಗಡೆಗೊಳಿಸಿದರು.

ಕಿಂಗ್ಸ್‌ ಕಪ್‌ ಟೂರ್ನಿಯು ಜೂನ್‌ ಐದರಿಂದ ಥಾಯ್ಲೆಂಡ್‌ನ ಬುರಿರಮ್‌ನಲ್ಲಿ ನಡೆ ಯಲಿದೆ. ಆಟಗಾರರ ಶಿಬಿರವು ನವದೆಹಲಿಯಲ್ಲಿ ಮೇ 20ರಿಂದ ಆರಭವಾಗುವುದು. ಗಾಯಾಳು ಸ್ಟ್ರೈಕರ್‌ ಜೆಜೆ ಲಾಲ್‌ಪೆಕುಲ್ವಾ ಶಿಬಿರ ದಿಂದ ಹೊರಗುಳಿದಿದ್ದಾರೆ. ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ.

ಜೆಜೆ ಅವರನ್ನು ಹೊರತುಪಡಿಸಿ ಗಾಯಾಳುಗಳಾದ ಹಲಿಚರಣ್‌ ನಾರ್ಜರಿ (ಮೊಣಕಾಲು ನೋವು), ಮಂದರ್‌ ರಾವ್‌ ದೇಸಾಯಿ (ಮಂಡಿರಜ್ಜು ಗಾಯ), ಆಶಿಕ್‌ ಕುರುನಿಯನ್‌, ನರೇಂದರ್‌ ಗೆಹ್ಲೋಟ್‌ (ಮೊಣಕಾಲು ನೋವು) ಹಾಗೂ ಜೆರ್ರಿ ಲಾಲ್‌ರಿಂಜುವಾಲಾ ಕೂಡ ಟೂರ್ನಿಯ ಅಭಿಯಾನಕ್ಕೆ ಲಭ್ಯರಿಲ್ಲ.

ಆಟಗಾರರ ಆಯ್ಕೆ ಕುರಿತು ಮಾತನಾಡಿರುವ ಕೋಚ್‌ ಸ್ಟಿಮ್ಯಾಚ್‌ ‘ಎಲ್ಲ ಆಟಗಾರರಿಗೂ ಅಭಿನಂದನೆ. ಜವಾಬ್ದಾರಿಯನ್ನು ನಿಭಾಯಿಸಲು ಕಾತರದಿಂದ ಕಾಯುತ್ತಿದ್ದೇನೆ. ನಾನು ಯಾವಾಗಲೂ ಭಿನ್ನ ಸವಾಲುಗಳನ್ನು ಇಷ್ಟಪಡುತ್ತೇನೆ’ ಎಂದಿದ್ದಾರೆ.

ಕಿಂಗ್ಸ್‌ ಕಪ್‌ ನಂತರ ಜುಲೈನಲ್ಲಿ ಹೀರೊ ಇಂಟರ್‌ನ್ಯಾಶನಲ್‌ ಕಪ್‌ ಟೂರ್ನಿ ನಡೆಯಲಿದೆ.

ಸಂಭಾವ್ಯ ಆಟಗಾರರು: ಗೋಲ್‌ಕೀಪರ್‌ಗಳು: ಗುರ್‌ಪ್ರೀತ್‌ ಸಿಂಗ್‌ ಸಂಧು, ವಿಶಾಲ್‌ ಕೈಥ್‌, ಅಮರಿಂದರ್‌ ಸಿಂಗ್‌, ಕಮಲ್‌ಜೀತ್‌ ಸಿಂಗ್‌.

ಡಿಫೆಂಡರ್ಸ್‌: ಪ್ರೀತಮ್‌ ಕೊಟಲ್‌, ನಿಶು ಕುಮಾರ್‌, ರಾಹುಲ್‌ ಭೆಕೆ, ಸಲಾಮ್‌ ರಂಜನ್‌ ಸಿಂಗ್‌, ಸಂದೇಶ್‌ ಜಿಂಗಾನ್‌, ಆದಿಲ್‌ ಖಾನ್‌, ಅನ್ವರ್‌ ಅಲಿ, ಸುಭಾಶಿಶ್‌ ಬೋಸ್‌ ಹಾಗೂ ನಾರಾಯಣ ದಾಸ್.

ಮಿಡ್‌ಫೀಲ್ಡ್‌ರ್ಸ್‌: ಉದಂತ್‌ ಸಿಂಗ್‌, ಜಾಕಿಚಂದ್‌ ಸಿಂಗ್‌, ಬ್ರೆಂಡನ್‌ ಫರ್ನಾಂಡಿಸ್‌, ಅನಿರುದ್ಧ ಥಾಪಾ, ರೇನಿಯರ್‌ ಫರ್ನಾಂಡಿಸ್‌, ಬಿಕ್ರಮ್‌ಜೀತ್‌ ಸಿಂಗ್‌, ಧನಪಾಲ್‌ ಗಣೇಶ್‌, ಪ್ರಣಯ್‌ ಹಲ್ದಾರ್‌, ರೌಲಿನ್‌ ಬೊರ್ಗೆಸ್‌, ಜರ್ಮನ್‌ಪ್ರೀತ್‌ ಸಿಂಗ್‌, ವಿನೀತ್‌ ರೈ, ಸಹಾಲ್‌ ಅಬ್ದುಲ್‌, ಅಮರ್‌ಜೀತ್‌ ಸಿಂಗ್‌, ರಿಡೀಮ್‌ ತ್ಲಾಂಗ್‌, ಲಾಲ್‌ಲಿಯಾಂಜುವಾಲಾ ಚಾಂಗ್ಟೆ, ನಂದ ಕುಮಾರ್‌, ಕೋಮಲ್‌ ಥಟಲ್ ಹಾಗೂ ಮಿಚೆಲ್‌ ಸೂಸಾಯಿರಾಜ್‌.

ಫಾರ್ವರ್ಡ್‌: ಬಲವಂತ್‌ ಸಿಂಗ್‌, ಸುನೀಲ್‌ ಚೆಟ್ರಿ, ಜಾಬಿ ಜಸ್ಟಿನ್‌, ಸುಮೀತ್‌ ಪಾಸ್ಸಿ, ಫಾರುಕ್‌ ಚೌಧರಿ ಹಾಗೂ ಮಾನ್‌ವೀರ್‌ ಸಿಂಗ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು