ಮುಂಬೈ: ಟಾಟಾ ಮುಂಬೈ ಮ್ಯಾರಥಾನ್ನಲ್ಲಿ ಇಥಿಯೋಪಿಯಾದ ಓಟಗಾರರ ಪ್ರಾಬಲ್ಯ ಮುಂದುವರಿದಿದ್ದು, ತಾಡು ಅಬಾಟೆ ಡೆಮೆ ಹಾಗೂ ಯೆಶಿ ಕಲಯೂ ಚೆಕೊಲೆ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಲೀಟ್ ರೇಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಭಾನುವಾರ ನಡೆದ ಮ್ಯಾರಥಾನ್ನಲ್ಲಿ ಅಬಾಟೆ ಅವರು ಗುರಿ ತಲುಪಲು 2 ಗಂಟೆ 9 ನಿಮಿಷ ಹಾಗೂ 55 ಸೆಕೆಂಡುಗಳನ್ನು ತೆಗೆದುಕೊಂಡರು. ಯೆಶಿ 2 ಗಂಟೆ 25 ನಿಮಿಷ ಹಾಗೂ 13 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿದರು.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕೆನ್ಯಾದ ಲಿಯೊನಾರ್ಡ್ ಕಿಪ್ರೊಟಿಚ್ ಲಾಂಗಟ್ ಹಾಗೂ ಎರಿಟ್ರಿಯಾದ ಮೆರ್ಹಾವಿ ಕೆಸೀಟ್ ಅವರು ತಾಡು ಅವರಿಗೆ ಪ್ರಬಲ ಪೈಪೋಟಿ ಒಡ್ಡಿದರು. ಲಿಯೊನಾರ್ಡ್ (2 ಗಂಟೆ, 10ನಿ., 10ಸೆ.) ಬೆಳ್ಳಿ ಗೆದ್ದರೆ, ಕೆಸೀಟ್ ಕಂಚು ಜಯಿಸಿದರು.

ಮಹಿಳೆಯರ ವಿಭಾಗದಲ್ಲಿ ಇಥಿಯೋಪಿಯಾ ಆಟಗಾರ್ತಿಯರು ಕ್ಲೀನ್ಸ್ವೀಪ್ ಸಾಧಿಸಿದರು. ಕಿಡ್ಸನ್ ಅಲೆಮಾ ಗೆಬ್ರೆಮೆಧಿನ್ (2 ಗಂಟೆ, 27ನಿ., 35ಸೆ.) ಹಾಗೂ ಗೊಜ್ಜಂ ಸೀಗಯೆ ಎನ್ಯೂ (2 ಗಂಟೆ, 28ನಿ., 27ಸೆ.) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ದೀರ್ಘ ಅಂತರದ ಓಟದ ಸ್ಪರ್ಧೆಗಳಲ್ಲಿ ಛಾಪು ಹೊಂದಿರುವ ಇಥಿಯೋಪಿಯಾ ಓಟಗಾರರು ಮುಂಬೈ ಮ್ಯಾರಥಾನ್ನ 21 ಆವೃತ್ತಿಗಳ ಪೈಕಿ 7ನೇ ಬಾರಿಗೆ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.

ಕಾರ್ತಿಕ್, ಸಂಜೀವನಿಗೆ ಪ್ರಶಸ್ತಿ: ಭಾರತೀಯ ಎಲೀಟ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕಾರ್ತಿಕ್ ಕರ್ಕೆರಾ (2 ಗಂಟೆ, 19ನಿ., 55ಸೆ.) ಅವರು ಪ್ರಶಸ್ತಿಗೆ ಕೊರಳೊಡ್ಡಿದರು. ಕಳೆದ ಬಾರಿಯ ಚಾಂಪಿಯನ್ ಅನೀಶ್ ಥಾಪ (2 ಗಂಟೆ, 20ನಿ., 08ಸೆ.) ಹಾಗೂ ಪ್ರದೀಶ್ ಚೌಧರಿ (2 ಗಂಟೆ, 20ನಿ., 49ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಸಂವೀವನಿ ಜಾಧವ್ (2 ಗಂಟೆ, 49ನಿ., 02ಸೆ.) ಮೊದಲಿಗರಾದರು. ನಿರ್ಮಾಬೆನ್ ಠಾಕೂರ್ (2 ಗಂಟೆ, 49ನಿ., 13ಸೆ.) ಎರಡನೆಯವರಾಗಿ ಗುರಿ ತಲುಪಿದರೆ, ಸೋನಮ್ (2 ಗಂಟೆ, 49ನಿ., 24ಸೆ.) ಮೂರನೆಯವಾಗಿ ಸ್ಪರ್ಧೆ ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.