ಭಾನುವಾರ, 18 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಸಾಲದ ಹೊರೆಯು ಕಡಿಮೆಯಾಗಲಿದೆ
Published 18 ಜನವರಿ 2026, 0:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮುಖ್ಯವಾದ ಕೆಲಸಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಬೇಕಾಗುವುದು. ಸ್ಟೇಷನರಿ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಬೇಡಿಕೆ ಹಾಗೂ ಮಾರಾಟದಿಂದ ಲಾಭವಿದೆ.
ವೃಷಭ
ಮಕ್ಕಳ ಮದುವೆಯಂತಹ ವಿಚಾರವನ್ನು ತಿಳಿ ಮನಸ್ಸಿನಿಂದ ಆಲೋಚಿಸಿ, ಸಮಸ್ಯೆಗಳಿಗೆ ಉತ್ತರ ಸಿಗುವುದು. ಸುಡುವ ಪದಾರ್ಥದಿಂದ ದೂರವಿರುವುದು ಉತ್ತಮ. ನಿಮ್ಮ ಆಲೋಚನೆಗಳು ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ.
ಮಿಥುನ
ಅತ್ಯಂತ ಕಠಿಣವಾದ ಪರಿಸ್ಥಿತಿಯನ್ನು ಅನುಭವಿಸಿದ ನಿಮಗೆ ಈ ದಿನ ಆಶಾದಾಯಕ ಹಾಗೂ ಆರಾಮದಾಯಕವಾಗಿರುತ್ತದೆ. ಸೂಕ್ಷ್ಮ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಎಚ್ಚರವಹಿಸುವುದು ಉತ್ತಮ.
ಕರ್ಕಾಟಕ
ಸಮಯದ ಅಭಾವದಿಂದಾಗಿ ಕೆಲವು ವಿಷಯಗಳು ನಿಮಗೆ ಮುಖ್ಯವೆಂದು ತೋರುತ್ತಿದ್ದರೂ ಸಹ ಅದನ್ನು ಇಂದಿನ ವೇಳಾಪಟ್ಟಿಯಿಂದ ತೆಗೆದು ಹಾಕುವಿರಿ. ಸಾಲದ ಹೊರೆಯು ಕಡಿಮೆಯಾಗಲಿದೆ.
ಸಿಂಹ
ಈ ದಿನ ನೀವು ಮಾಡುವ ಕೆಲಸವನ್ನು ಸಮಯೋಚಿತ ಬುದ್ಧಿಯಿಂದ ಯೋಚಿಸಿ ಮಾಡುವುದು ಉತ್ತಮ. ನಿಮ್ಮ ಚಾಣಾಕ್ಷತನದ ನಿರ್ಧಾರಗಳು ನಿಮ್ಮನ್ನು ಗಣ್ಯ ವ್ಯಕ್ತಿಯನ್ನಾಗಿ ಮಾಡಲಿದೆ. ಶ್ರೀ ದುರ್ಗಾದೇವಿಯನ್ನು ಭಜಿಸಿ ಶುಭವಾಗುತ್ತದೆ
ಕನ್ಯಾ
ಕೆಲಸ ಕಾರ್ಯಗಳು ಕೈಗೂಡಲೆಂದು ದೇವರಲ್ಲಿ ಹೊತ್ತ ಹರಕೆಯನ್ನು ತೀರಿಸಲು ಹೆಚ್ಚಿನ ಪ್ರಯತ್ನ ಮತ್ತು ಆಸಕ್ತಿ ಇರಲಿ. ನಿಮ್ಮ ಗೊಂದಲಕ್ಕೆ ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು.
ತುಲಾ
ಜೀವನದಲ್ಲಿ ಕೆಲವು ವಿಚಾರಕ್ಕೆ ಆತಂಕ ಮೂಡಿ ಮನೋಧೈರ್ಯವನ್ನು ಕಟ್ಟಿಹಾಕಿಕೊಳ್ಳುತ್ತದೆ. ನಿಮ್ಮ ಆರನೆಯ ಇಂದ್ರಿಯದ ಸೂಚನೆಯ ಸಹಾಯ ಇಂದು ನಿಮಗೆ ಉಪಯುಕ್ತವಾಗಲಿದೆ. ನಿಮ್ಮ ಸಮಸ್ಯೆಗಳಿಗೆ ಮುಕ್ತಿಸಿಗಲಿದೆ.
ವೃಶ್ಚಿಕ
ನಿಮ್ಮ ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿ ಉತ್ತಮ ಚಟುವಟಿಕೆಗಳು ಇರುವುವು ಜೊತೆಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಇರುವುದು. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಉಂಟಾಗಬಹುದು.
ಧನು
ಉನ್ನತ ಶಿಕ್ಷಣದ ಮನಸ್ಸಿದ್ದರೂ ಸಹ ಹಲವು ನಿಬಂಧನೆಗಳಿಂದ ವೃತ್ತಿಯನ್ನೇ ಆರಿಸಿಕೊಳ್ಳುವಿರಿ. ಪಿತ್ತಕೋಶಕ್ಕೆ ಸಂಬಂಧಿಸಿದಂತೆ ಅನಾರೋಗ್ಯಗಳು ಎದುರಾಗಬಹುದು. ಅಧ್ಯಯನ ನಿರತರಿಗೆ ಸೂಕ್ತ ಸಹಾಯ ಲಭ್ಯವಾಗುವುದು.
ಮಕರ
ಕ್ಷಣಿಕ ಸುಖಗಳಿಗೆ ಗಮನ ನೀಡದೆ, ಮುಖ್ಯವಾದ ವಿಷಯಗಳ ಬಗ್ಗೆ ಗಂಭೀರವಾಗಿ ಆಲೋಚಿಸುವುದು ನಿಮ್ಮ ಏಳಿಗೆಗೆ, ಅಭಿವೃದ್ಧಿಗೆ ಮೆಟ್ಟಿಲುಗಳಾಗುವುದು. ಆಟಿಕೆಗಳ ಮಾರಾಟದವರಿಗೆ ಉತ್ತಮ ಮಾರಾಟ ಹಾಗೂ ಲಾಭವಿದೆ.
ಕುಂಭ
ಈ ದಿನ ದೇವತಾನುಗ್ರಹದಿಂದ ಆರ್ಥಿಕ ಖರ್ಚು-ವೆಚ್ಚಗಳ ಸಮತೋಲನ, ಕುಟುಂಬದಲ್ಲೂ ತೃಪ್ತಿ ಇರುವುದು. ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಇಂದು ಬೇಕಾದಷ್ಟು ಅವಕಾಶಗಳು ಒದಗಿ ಬರುವುವು.
ಮೀನ
ಜೀವನದಲ್ಲಿನ ಪ್ರಮುಖ ಬದಲಾವಣೆಯನ್ನು ನೀವು ಈ ಸಮಯದಲ್ಲಿ ಕಾಣಲಿದ್ದೀರಿ. ಲಾಟರಿಯಂತಹ ಯೋಜನೆಗಳು ಕಣ್ಣಾಮುಚ್ಚಾಲೆಯಾಟ ನಡೆಸಲಿದೆ. ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿಯೇ ಇರುತ್ತದೆ.
ADVERTISEMENT
ADVERTISEMENT