ಬಾಲ್ಯ ವಿವಾಹ: ವರ ಪೊಲೀಸ್ ಅತಿಥಿ

ಬುಧವಾರ, ಮೇ 22, 2019
29 °C
ತಪ್ಪು ಮಾಹಿತಿ ಉಳ್ಳ ಆಧಾರ್ ಕಾರ್ಡ್ ತೋರಿಸಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುವ ಪ್ರಯತ್ನ, ಅಪ್ರಾಪ್ತೆಯೊಂದಿಗೆ ಹಸೆಮಣೆ ಏರಿದವನಿಗೆ ನ್ಯಾಯಾಂಗ ಬಂಧನ

ಬಾಲ್ಯ ವಿವಾಹ: ವರ ಪೊಲೀಸ್ ಅತಿಥಿ

Published:
Updated:
Prajavani

ಚಿಕ್ಕಬಳ್ಳಾಪುರ: ಅಪ್ರಾಪ್ತ ಬಾಲಕಿಯನ್ನು ವಿವಾಹ ಮಾಡಿಕೊಂಡ ವರನೊಬ್ಬ ಹಸೆಮಣೆ ಏರಿ, ಮದುವೆ ಶಾಸ್ತ್ರ ಮುಗಿದ ಮರು ಗಳಿಗೆಯಲ್ಲಿಯೇ ಬಾಲ್ಯ ವಿವಾಹ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿ ಜೈಲು ಕಂಬಿಗಳ ಹಿಂದೆ ಸೇರಿದ್ದಾನೆ.

ನಗರದ ಹೊರವಲಯದ ಚಿತ್ರಾವತಿಯಲ್ಲಿರುವ ಆರ್ಯ ವೈಶ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಸುಕಿನ ಜಾವ 4.30ರ ಸುಮಾರಿಗೆ ತಾಲ್ಲೂಕಿನ ಗುಂಡ್ಲುಗುರ್ಕಿ ನಿವಾಸಿ ವೆಂಕಟೇಶ್‌ (28) ಎಂಬುವರು ಚಿಂತಾಮಣಿ ತಾಲ್ಲೂಕಿನ ಹಳ್ಳಿಯೊಂದರ ಬಾಲಕಿಯೊಂದಿಗೆ ವಿವಾಹ ಕಾರ್ಯ ನೆರವೇರಿಸಿಕೊಂಡಿದ್ದರು.

ಮಕ್ಕಳ ಸಹಾಯವಾಣಿ ಮೂಲಕ ಈ ವಿಚಾರ ತಿಳಿಯುತ್ತಿದ್ದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಲತಾ ಅವರು ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಪೊಲೀಸರು ಮತ್ತು ಮಂಚನಬಲೆ ಗ್ರಾಮ ಪಂಚಾಯಿತಿ ಪಿಡಿಒ ಅವರೊಂದಿಗೆ ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿದರು. ಈ ವೇಳೆ ಸಂತಸ ಮನೆ ಮಾಡಿದ್ದ ಕಲ್ಯಾಣ ಮಂಟಪದಲ್ಲಿ ಏಕಾಏಕಿ ಸೂತಕದ ವಾತಾವರಣ ನಿರ್ಮಾಣಗೊಂಡಿತು.

ಬಾಲಕಿಯ ಪೋಷಕರು ಮತ್ತು ಕುಟುಂಬದವರು ಆಧಾರ್‌ ಕಾರ್ಡ್‌ ತೋರಿಸಿ ಹುಡುಗಿಗೆ 18 ವರ್ಷ ತುಂಬಿದೆ ಎಂದು ನಂಬಿಸಲು ಯತ್ನಿಸಿದರು. ಆದರೆ ಅಧಿಕಾರಿಗಳು ಶಾಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸಿದಾಗ ಬಾಲಕಿಗೆ 16 ವರ್ಷ 6 ತಿಂಗಳು ತುಂಬಿರುವುದು ಬೆಳಕಿಗೆ ಬರುತ್ತಿದ್ದಂತೆ ವಧು–ವರರ ಕಡೆಯವರು ಕ್ಷಮಿಸಿ ಬಿಡುವಂತೆ ಅಂಗಲಾಚಿದರು ಎನ್ನಲಾಗಿದೆ. 

ಬಳಿಕ ಲತಾ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರ ವೆಂಕಟೇಶ್‌ ಮತ್ತು ಅವರ ತಂದೆ ಹಾಗೂ ಬಾಲಕಿಯ ತಂದೆಯ ವಿರುದ್ಧ ಪ್ರಕರಣ ದಾಖಲಿಸಿದರು. ಪೊಲೀಸರು ವೆಂಕಟೇಶ್‌ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಉಳಿದ ಇಬ್ಬರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.

ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕದ ಎದುರು ಹಾಜರುಪಡಿಸಿ, ಬಳಿಕ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !