ಎಲ್ಲ ಧರ್ಮದಲ್ಲೂ ಉಗ್ರರು: ಕಮಲ್‌

ಭಾನುವಾರ, ಮೇ 26, 2019
28 °C

ಎಲ್ಲ ಧರ್ಮದಲ್ಲೂ ಉಗ್ರರು: ಕಮಲ್‌

Published:
Updated:

ಚೆನ್ನೈ: ‘ಪ್ರತಿಯೊಂದು ಧರ್ಮದಲ್ಲಿಯೂ ಭಯೋತ್ಪಾದಕರಿದ್ದಾರೆ ಮತ್ತು ತಮ್ಮ ಧರ್ಮ ಬಹಳ ಸಾಚಾ ಎಂದು ಯಾರೂ ಹೇಳಿಕೊಳ್ಳುವಂತಿಲ್ಲ ಎಂದು ನಟ–ರಾಜಕಾರಣಿ ಕಮಲ್‌ಹಾಸನ್‌ ಹೇಳಿದ್ದಾರೆ. ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ನಾಥೂರಾಂ ಗೋಡ್ಸೆ, ಆತ ಹಿಂದೂ ಆಗಿದ್ದ ಎಂದು ಹೇಳಿಕೆ ನೀಡಿ ಕಮಲ್ ಅವರು ಅರವಕುರಿಚಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಭಾನುವಾರ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. 

ನನಗೆ ಬಂಧನದ ಭೀತಿ ಇಲ್ಲ, ಆದರೆ ನನ್ನನ್ನು ಬಂಧಿಸಿದರೆ ಪರಿಸ್ಥಿತಿ ಇನ್ನಷ್ಟು ಪ್ರಕ್ಷುಬ್ಧವಾಗಲಿದೆ ಎಂಬ ಎಚ್ಚರಿಕೆಯನ್ನು ಮಕ್ಕಳ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥರೂ ಆಗಿರುವ ಕಮಲ್‌ ನೀಡಿದ್ದಾರೆ. 

ಕರೂರು ಜಿಲ್ಲೆಯ ಅರವಕುರಿಚಿಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹಾಗಾಗಿ, ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !