ಬಿಜೆಪಿ ನಾಯಕ ಅಮಾನತು

ಭಾನುವಾರ, ಮೇ 26, 2019
30 °C

ಬಿಜೆಪಿ ನಾಯಕ ಅಮಾನತು

Published:
Updated:

ಭೋಪಾಲ್‌: ಗಾಂಧೀಜಿಯನ್ನು ‘ಪಾಕಿಸ್ತಾನದ ರಾಷ್ಟ್ರಪಿತ’ ಎಂದು ಬಣ್ಣಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದ ಮಧ್ಯಪ್ರದೇಶದ ಬಿಜೆಪಿ ಮುಖಂಡ ಸೌಮಿತ್ರ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಸೌಮಿತ್ರ ಅವರು ಬಿಜೆಪಿಯ ಮಾಧ್ಯಮ ಸಂಪರ್ಕ ಘಟಕದ ರಾಜ್ಯ ಸಂಚಾಲಕರಾಗಿದ್ದರು. ‘ರಾಜ್ಯ ಘಟಕದ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರು ಸೌಮಿತ್ರ ಅವರ ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ’ ಎಂದು ಬಿಜೆಪಿ ಮಾಧ್ಯಮ ಘಟಕದ ಉಸ್ತುವಾರಿ ವಹಿಸಿರುವ ಲೋಕೇಂದ್ರ ಪರಾಶರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅವರು (ಗಾಂಧೀಜಿ) ರಾಷ್ಟ್ರಪಿತ ಎಂಬುದು ನಿಜ,ಆದರೆ ‘ಪಾಕಿಸ್ತಾನದ ಪಿತ’. ಅವರಂಥ ಲಕ್ಷಾಂತರ ಮಕ್ಕಳು ದೇಶದಲ್ಲಿದ್ದರು. ಅವರಲ್ಲಿ ಕೆಲವರು ಉಪಯೋಗಿಗಳಾಗಿದ್ದರೆ ಕೆಲವರು ನಿಷ್ಪ್ರಯೋಜಕರಾಗಿದ್ದರು’ ಎಂದು ಸೌಮಿತ್ರ ಅವರು ಗುರುವಾರ ರಾತ್ರಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !