ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ ಯಥಾಸ್ಥಿತಿ

ಬುಧವಾರ, ಮೇ 22, 2019
24 °C
ಜಿಪ್ಸಾ ಜತೆಗಿನ ಒಪ್ಪಂದ ಮುಂದುವರಿಸಿದ ಫಾನಾ

ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ ಯಥಾಸ್ಥಿತಿ

Published:
Updated:

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಒಕ್ಕೂಟ (ಫಾನಾ) ಮತ್ತು ಜನರಲ್ ಇನ್ಶುರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಷನ್ (ಜಿಪ್ಸಾ) ನಡುವಿನ ಒಪ್ಪಂದ ಮುಂದುವರಿದಿದೆ. ಇದರಿಂದಾಗಿ ಜೂ.1ರಿಂದ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ನಗದು
ರಹಿತ ವೈದ್ಯಕೀಯ ಸೇವೆ ಕೊನೆಗೊಳ್ಳಲಿದೆ ಎಂಬ ಆತಂಕ ದೂರವಾಗಿದೆ.

‘ಜಿಪ್ಸಾ ಪ್ರತಿನಿಧಿಗಳ ಜತೆಗೆ ನಡೆದ ಸಭೆ ಫಲಪ್ರದವಾಗಿದ್ದು, ಜೂ.1ರಿಂದ ನಗದು ರಹಿತ ವೈದ್ಯಕೀಯ ಸೇವೆ ಸ್ಥಗಿತ ಆದೇಶವನ್ನು ಹಿಂಪಡೆಯಲಾಗಿದೆ’ ಎಂದು ಫಾನಾ ಅಧ್ಯಕ್ಷ ಡಾ.ಆರ್. ರವೀಂದ್ರ ತಿಳಿಸಿದ್ದಾರೆ. 

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ವಿಚಾರವಾಗಿ 2014ರಲ್ಲಿ ಫಾನಾ ಮತ್ತು ಜಿಪ್ಸಾ ಜತೆಗೆ ಒಪ್ಪಂದವಾಗಿತ್ತು. ಜಿಪ್ಸಾದಡಿ ಯುನೈಟೆಡ್ ಇಂಡಿಯಾ, ಓರಿಯಂಟಲ್ ಇನ್ಶುರೆನ್ಸ್, ನ್ಯಾಷನಲ್ ಇನ್ಶುರೆನ್ಸ್ ಹಾಗೂ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಆರೋಗ್ಯ ವಿಮೆ ಸೇವೆ ನೀಡುತ್ತಿವೆ. 

ವರ್ಷದಿಂದ ವರ್ಷಕ್ಕೆ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತಿರುವ ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಒಪ್ಪಂದದ ಪ್ರಕಾರ ಹಣವನ್ನು ಪಾವತಿಸುತ್ತಿಲ್ಲ.ಇದರಿಂದಾಗಿ ಚಿಕಿತ್ಸಾ ವೆಚ್ಚದ ಒಟ್ಟು ಮೊತ್ತದಲ್ಲಿ ಶೇ 40ರಷ್ಟು ವ್ಯತ್ಯಯ ಉಂಟಾಗುತ್ತಿರುವುದಾಗಿ ಫಾನಾ ಆರೋಪಿಸಿ, ಜೂನ್ 1ರಿಂದ ಕ್ಯಾಷ್‌ಲೆಸ್ ಸೌಲಭ್ಯವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !