ಭಾನುವಾರ, ಮೇ 16, 2021
22 °C
ರಮ್ಯಾ ಘನತೆಗೆ ಧಕ್ಕೆ ತರುವ ಪೋಸ್ಟ್‌ ಪ್ರಕರಣ

ಪ್ರಾಸಿಕ್ಯೂಷನ್‌ಗೆ ಸಹಕಾರ: ಅವಕಾಶ ಕೋರಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಟಿ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಸಹಕರಿಸಲು ಅವಕಾಶ ನೀಡಬೇಕು’ ಎಂದು ಕೋರಿ ದೂರುದಾರರೂ ಆದ ವಕೀಲೆ ಎಚ್‌.ವಿ.ಭವ್ಯ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಕುರಿತ ಮನವಿಯನ್ನು ಭವ್ಯ ಪರ ವಕೀಲರಾದ ಬಿ.ಸಂಜಯ ಯಾದವ್‌ ಅವರು ಶನಿವಾರ ಸಿಟಿ ಸಿವಿಲ್‌ ಕೋರ್ಟ್‌ನ ರಜಾಕಾಲದ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದರು. ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಲಾಗಿದೆ.

‘ಈ ಪ್ರಕರಣದ ಆರೋ‍ಪಿ ನವೀನ್‌ ಕುಮಾರ್ ಅಲಿಯಾಸ್ ನವೀನ್ ಸಾಗರ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೂ ಹಲವು ಪ್ರಕರಣದಲ್ಲಿ ಇದೇ ರೀತಿ ನಡೆದುಕೊಂಡಿದ್ದಾರೆ’ ಎಂದು ಭವ್ಯ ಮನವಿಯಲ್ಲಿ ವಿವರಿಸಿದ್ದಾರೆ.

‘ನವೀನ್‌ ಸಾಗರ್‌, ರಮ್ಯಾ ಅಭಿನಯಿಸಿದ್ದ ಸಿನಿಮಾವೊಂದರ ಫೋಟೊವನ್ನು ವಿಕೃತವಾಗಿ ಬಿಂಬಿಸಿ, ಅಶ್ಲೀಲ ಪದಗಳನ್ನು ಬಳಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಮೂಲಕ ರಮ್ಯಾ ಅವರ ಘನತೆಗೆ ಧಕ್ಕೆ ತಂದು, ತೇಜೋವಧೆಗೆ ಯತ್ನಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ’ ಎಂದು ಅವರು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು