ದಿನ ಭವಿಷ್ಯ: ನಟ ನಟಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ
Published 26 ಜನವರಿ 2026, 0:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಪೇಕ್ಷಿತ ಜಯವನ್ನು ಹೊಂದುವಿರಿ. ಪ್ರಾಧ್ಯಾಪಕರಿಗೆ ಮತ್ತು ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಶುಭ ದಿನ. ಧನಲಾಭ ಉಂಟಾಗಲಿದೆ.
ವೃಷಭ
ಮನೆಯ ಹಿರಿಯರ ಮಧ್ಯಸ್ತಿಕೆಯಿಂದ ವಿವಾದಗಳು ಬಗೆ ಹರಿಯಲಿವೆ. ಇಷ್ಟ ಬಂಧುಗಳಿಂದ ವಿಶೇಷ ವಸ್ತು ಉಡುಗೊರೆಯ ರೂಪದಲ್ಲಿ ದೊರೆಯುವುದು. ಹಸಿರು ಬಣ್ಣ ಶುಭ ತರುವುದು.
ಮಿಥುನ
ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ತರಬೇತಿಗಳನ್ನು ತೆಗೆದುಕೊಳ್ಳಲು ಯೋಚನೆ ನಡೆಸುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಕಾನೂನು ಸಮಸ್ಯೆಗಳೆಲ್ಲಾ ಬಗೆಹರಿಯಲಿವೆ.
ಕರ್ಕಾಟಕ
ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯಾಪಾರ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ಬೆಲೆಬಾಳುವ ವಸ್ತುವಿನ ಖರೀದಿಯಿಂದ ಹಿರಿಯರು ಮುನಿಸಿಕೊಳ್ಳುವರು.
ಸಿಂಹ
ಇಂದಿನ ಅಪರೂಪದ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಸಂತೋಷವೆನಿಸುವುದು. ಜಾಹೀರಾತುಗಳಲ್ಲಿ ತೋರಿಸಿದ್ದನ್ನು ಪರಿಶೀಲಿಸದೇ ನಂಬಿ ಹಣವ್ಯಯ ಮಾಡಿದಲ್ಲಿ ಮೋಸ ಹೋಗಲಿದ್ದೀರಿ.
ಕನ್ಯಾ
ಯಾವುದರಲ್ಲಾದರೂ ನೀವು ಗೆಲುವನ್ನು ಬಯಸುತ್ತಿದ್ದರೆ ಆಲಸ್ಯತನ ಬಿಟ್ಟು ಗುರಿ ತಲುಪಲು ಶ್ರಮಿಸಬೇಕು. ವ್ಯವಹಾರದಲ್ಲಿ ಪರಿಶ್ರಮದಿಂದಾಗಿ ಕಲ್ಪನೆಗೂ ಮೀರಿದ ಲಾಭವನ್ನು ಗಳಿಸುವಿರಿ.
ತುಲಾ
ಹೊಸ ಪ್ರಯತ್ನಗಳಲ್ಲಿ ಯಾರ ಸಹಕಾರವೂ ಸಿಗದೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಂಗೀತಾಭ್ಯಾಸಿಗರಿಗೆ ದೊಡ್ಡ ವೇದಿಕೆಯಲ್ಲಿ ಗಾಯನ ಪ್ರದರ್ಶಿಸುವ ಅವಕಾಶ ದೊರೆಯುತ್ತದೆ.
ವೃಶ್ಚಿಕ
ಆದಾಯ ಎಲ್ಲರ ಕಣ್ಣಿಗೂ ಅಧಿಕವಾಗಿ ಕಂಡರೂ ಅಧಿಕವಾದ ಖರ್ಚೂ ಇರುವುದರಿಂದ ಉಳಿತಾಯ ಸಾಧ್ಯವಾಗುವುದಿಲ್ಲ. ಮಗನಿಗೆ ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಕುಟುಂಬ ಸಂತಸದಲ್ಲಿರುವುದು.
ಧನು
ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣ ಇರಲಿದೆ. ಆತಂಕಕ್ಕೆ ಒಳಗಾಗಬೇಡಿ. ವೈದ್ಯರ ಸಹಾಯವಿಲ್ಲದೆಯೂ ಗುಣಮುಖರಾಗುವಿರಿ. ನಟ ನಟಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ.
ಮಕರ
ಉದಯೋನ್ಮುಖ ಸಾಹಿತಿಗಳಿಗೆ ಚಿಂತನಾಶೀಲತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೆಂಬ ಸಲಹೆಗಳು ಅಭಿಮಾನಿಗಳ ಕಡೆಯಿಂದ ಬರಬಹುದು. ಪುಸ್ತಕ ಮುದ್ರಕ ಹಾಗೂ ಮಾರಾಟಗಾರರಿಗೆ ಅಧಿಕ ಕೆಲಸ ಇರುತ್ತದೆ.
ಕುಂಭ
ದೊಡ್ಡ ಕಂಪನಿಗಳಲ್ಲಿ ಕೆಲಸ ಹೊಂದಬೇಕೆಂಬ ಆಸೆ ಹೊಂದಿರುವವರು ಸಣ್ಣ ಕಂಪನಿಗಳಲ್ಲಿ ಉದ್ಯೋಗ ಅನುಭವವನ್ನು ಹೊಂದಿದ ನಂತರ ಅಂಥ ಪ್ರಯತ್ನ ಮಾಡಿ.
ಮೀನ
ಇತರರಿಗೆ ಸಹಾಯ ಮಾಡಲೆಂದು ಹೋದ ನಿಮಗೆ ಸಂಕೋಚದ ಸ್ವಭಾವದಿಂದ ಆರ್ಥಿಕವಾಗಿ ನಷ್ಟವಾಗಬಹುದು. ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ.