ಬೌಲರ್‌ಗಳು ನನಗೆ ಹೆದರುತ್ತಾರೆ: ಗೇಲ್

ಭಾನುವಾರ, ಜೂನ್ 16, 2019
32 °C

ಬೌಲರ್‌ಗಳು ನನಗೆ ಹೆದರುತ್ತಾರೆ: ಗೇಲ್

Published:
Updated:
Prajavani

ಲಂಡನ್: ‘ವಿಶ್ವದ ಎಲ್ಲ ಬೌಲರ್‌ಗಳು ನನಗೆ ಭಯಪಡುತ್ತಾರೆ. ಆದರೆ ಕ್ಯಾಮೆರಾಗಳ ಮುಂದೆ ಒಪ್ಪಿಕೊಳ್ಳುವುದಿಲ್ಲ’ ಎಂದು ವೆಸ್ಟ್‌ ಇಂಡೀಸ್‌ ತಂಡದ  ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೇಳಿದ್ದಾರೆ.

ಬುಧವಾರ ಲಂಡನ್‌ಗೆ ಬಂದಿಳಿದಿರುವ ಅವರು ಕ್ರಿಕೆಟ್‌ ಡಾಟ್ ಕಾಮ್ ಡಾಟ್ ಎಯು ವೆಬ್‌ಸೈಟ್‌ನೊಂದಿಗೆ ಮಾತನಾಡಿದರು. 

‘ಯುನಿವರ್ಸಲ್‌ ಬಾಸ್‌ (ತಮ್ಮನ್ನು  ಸಂಬೋಧಿಸಿಕೊಂಡಿದ್ದು ಹೀಗೆ) ಸಾಮರ್ಥ್ಯ ಎನ್ನುವುದು ಯುವ ಬೌಲರ್‌ಗಳು ತಿಳಿದುಕೊಂಡಿರಬೇಕು. ಇಂದಿನ ಕ್ರಿಕೆಟ್‌ನಲ್ಲಿ ಈತ ಎಲ್ಲರಿಗಿಂತಲೂ ಬಹಳ ಅಪಾಯಕಾರಿ ಮತ್ತು ಆಕ್ರಮಣಕಾರಿ ಬ್ಯಾಟ್ಸ್‌ಮನ್’ ಎಂದು ಹೇಳಿ ನಕ್ಕರು.

‘ಬಹುತೇಕ ಬೌಲರ್‌ಗಳು ನನಗೆ ಬೌಲಿಂಗ್ ಮಾಡಲು ಹಿಂಜರಿಯುತ್ತಾರೆ. ಆದರೂ ಅವರು ಮಾಧ್ಯಮಗಳ ಕ್ಯಾಮೆರಾಗಳ ಮುಂದೆ ಅದನ್ನು ಹೇಳುವುದಿಲ್ಲ. ಈಗಲಾದರೂ ಒಪ್ಪಿಕೊಳ್ಳಿ’ ಎಂದು ವ್ಯಂಗ್ಯವಾಡಿದರು.

‘ಮಧ್ಯಮವೇಗದ ಬೌಲರ್‌ಗಳ ಎಸೆತಗಳನ್ನು ಆಡಲು ಬಹಳ ಇಷ್ಟಪಡುತ್ತೇನೆ. ವೇಗದ ಎಸೆತಗಳನ್ನು ಡ್ರೈವ್‌ ಮಾಡುವ ಮಜಾ ಬೇರೆಯೇ ರೀತಿಯಿದೆ. ವೇಗಿಗಳು ಒಡ್ಡುವ ಸವಾಲುಗಳು ನನಗೆ ಇಷ್ಟ’ ಎಂದರು.

‘ಈಗಲೂ ಒಳ್ಳೆಯ ಫಾರ್ಮ್‌ನಲ್ಲಿದ್ದೇನೆ. ಈಚೆಗೆ ಐಪಿಎಲ್‌ನಲ್ಲಿ ಅಷ್ಟೇನೂ ಕೆಟ್ಟದಾಗಿ ಆಡಿಲ್ಲ. ಉತ್ತಮ ಕಾಣಿಕೆ ಕೊಟ್ಟಿದ್ದೆ.

ಮುಂಬರುವ ಸೆಪ್ಟೆಂಬರ್‌ನಲ್ಲಿ 40ನೇ ವಸಂತಕ್ಕೆ ಕಾಲಿಡಲಿರುವ ಗೇಲ್, ಐದನೇ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದು ಅವರಿಗೆ ಬಹುತೇಕ ವಿದಾಯದ ಟೂರ್ನಿಯಾಗಲಿದೆ.  ಇಲ್ಲಿ ವಾರ್ಮ್‌ ಆಪ್‌ ಪಂದ್ಯಗಳಲ್ಲಿ ಆಡಲಿದ್ದೇನೆ. ಅದರಿಂದ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯಕವಾಗಲಿದೆ’ ಎಂದರು.

‘ಇದು ದೊಡ್ಡ ಟೂರ್ನಿಯಾಗಿದೆ. ದೀರ್ಘ ಕಾಲವನ್ನು ಇಲ್ಲಿ ಕಳೆಯಬೇಕಾಗಿದೆ. ಆದ್ದರಿಂದ ನಿರಂತರವಾಗಿ ಮನೋದೈಹಿಕ ಸಬಲತೆಯನ್ನು ಕಾಪಾಡಿಕೊಳ್ಳುವ ಸವಾಲು ಕೂಡ ಇದೆ. ಅದಕ್ಕಾಗಿ ಸಿದ್ಧವಾಗಿದ್ದೇನೆ’ ಎಂದರು.

ವೆಸ್ಟ್ ಇಂಡೀಸ್ ತಂಡವು ಮೇ 31ರಂದು ಟ್ರೆಂಟ್‌ ಬ್ರಿಜ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !