ಭಾನುವಾರ, ಏಪ್ರಿಲ್ 18, 2021
31 °C

ನೈಜೀರಿಯಾ: ಎರಡನೇ ಅವಧಿಗೆ ಅಧ್ಯಕ್ಷರಾಗಿ ಬುಹಾರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಅಬುಜಾ: ಮುಹಮ್ಮದ್ ಬುಹಾರಿ ನೈಜೀರಿಯಾ ಅಧ್ಯಕ್ಷರಾಗಿ 2ನೇ ಅವಧಿಯ ಅಧಿಕಾರವನ್ನು ಬುಧವಾರ ರಾಜಧಾನಿ ಅಬುಜಾದಲ್ಲಿ ಸ್ವೀಕರಿಸಿದರು.

ಆಫ್ರಿಕಾದ ಪ್ರಮುಖ ಆರ್ಥಿಕ ಪ್ರದೇಶವಾದ ನೈಜೀರಿಯಾದಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯುವುದು ಮತ್ತು ದುರ್ಬಲಗೊಂಡಿರುವ ಭದ್ರತೆಯನ್ನು ಸದೃಢಗೊಳಿಸುವ ಪ್ರತಿಜ್ಞೆಯನ್ನು ಅವರು ಸ್ವೀಕರಿಸಿದರು. 

‘ಸಂವಿಧಾನದ ರಕ್ಷಣೆಗೆ ನಾನು ಬದ್ಧ. ನೈಜೀರಿಯಾ ಜನತೆಗೆ ನಾನು ನಿಷ್ಠಾವಂತನಾಗಿರುವ ಪ್ರತಿಜ್ಞೆ ಮಾಡುತ್ತೇನೆ’ ಎಂದರು. 2015ರಿಂದ ಅಧಿಕಾರದಲ್ಲಿರುವ 76 ವರ್ಷದ ಬುಹಾರಿ ಫೆಬ್ರುವರಿಯಲ್ಲಿ ಶೇ 56 ಮತದೊಂದಿಗೆ ಮರು ಆಯ್ಕೆಗೊಂಡಿದ್ದರು. ಇವರ ಆಡಳಿತಾವಧಿ ನಾಲ್ಕು ವರ್ಷ ಇರಲಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು