ದೆಹಲಿಯ ಪ್ರಥಮ ಆಟೋ ಚಾಲಕಿ ದೋಚಿದ ಮತ್ತೊಬ್ಬ ಆಟೋ ಚಾಲಕ

ಮಂಗಳವಾರ, ಜೂನ್ 18, 2019
23 °C

ದೆಹಲಿಯ ಪ್ರಥಮ ಆಟೋ ಚಾಲಕಿ ದೋಚಿದ ಮತ್ತೊಬ್ಬ ಆಟೋ ಚಾಲಕ

Published:
Updated:

 ನವದೆಹಲಿ: ದೆಹಲಿಯ ಪ್ರಥಮ ಆಟೋ ಚಾಲಕಿಯನ್ನು ಮತ್ತೊಬ್ಬ ಆಟೋಚಾಲಕ ಸೇರಿ ಇಬ್ಬರು ವ್ಯಕ್ತಿಗಳು ಗಮನ ಬೇರೆಡೆ ಸೆಳೆದು ಸುಮಾರು ₹30 ಸಾವಿರಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮೀರತ್ ನಿವಾಸಿಯಾದ ಸುನಿತಾ ಚೌದರಿ ದರೋಡೆಗೆ ಒಳಗಾದವರು. ಮಂಗಳವಾರ ಇವರು ಮೀರತ್‌‌ನಿಂದ ದೆಹಲಿಗೆ ಬರಬೇಕಾಗಿತ್ತು. ಮೀರತ್‌‌ನಿಂದ ಬಸ್ಸಿನಲ್ಲಿ ಬಂದು ಮೋಹನ್‌‌ನಗರದಲ್ಲಿ ಇಳಿದು ಅಲ್ಲಿಂದ ದೆಹಲಿಯ ಆನಂದನಗರಕ್ಕೆ ಹೋಗಲು ಆಟೋಗಾಗಿ ಕಾಯುತ್ತಿದ್ದರು. ಸ್ವಲ್ಪ ಸಮಯದ ನಂತರ  ಬಂದ ಆಟೋ ಹತ್ತಿದ್ದಾರೆ. ಚಾಲಕ ಹಾಗೂ ಮತ್ತೊಬ್ಬ ಪ್ರಯಾಣಿಕ ಆಟೋದಲ್ಲಿದ್ದರು. ಸುನಿತಾ ಚೌದರಿ ಚಾಲಕನನ್ನು ಆನಂದ ನಗರಕ್ಕೆ ಹೋಗಬೇಕೆಂದು ಕೇಳಿದಾಗ ಕರೆದುಕೊಂಡು ಹೋಗುವುದಾಗಿ ₹20ಕ್ಕೆ ಒಪ್ಪಿಕೊಂಡು ಕೂರಿಸಿಕೊಂಡಿದ್ದಾನೆ.

ಸ್ವಲ್ಪ ದೂರ ಹೋದ ನಂತರ ಚಾಲಕ ಎಂಜಿನ್‌‌ನಲ್ಲಿ ತೊಂದರೆ ಇದೆ ಎಂದು ಹೇಳಿ ಆಟೋ ನಿಲ್ಲಿಸಿದ. ನಂತರ ಚಾಲಕಿಯಾದ ಸುನಿತಾ ಕೂಡ ತಮ್ಮ ಬ್ಯಾಗನ್ನು ಆಟೋದಲ್ಲಿಯೇ ಬಿಟ್ಟು ನಾನು ಆಟೋ ಚಾಲಕಿ ಸುನಿತಾ ಎಂದು ಹೇಳಿ, ಕೆಳಗೆ ಇಳಿದು ಸರಿಪಡಿಸುವುದಾಗಿ ಹೇಳಿ ಆಟೋ ಹಿಂಬದಿಗೆ ಬಂದಿದ್ದಾರೆ. ಅಷ್ಟರಲ್ಲಿ ಆಟೋ ಚಾಲಕ ಇದು ಸರಿಹೋಗುವುದಿಲ್ಲ. ನೀವು ಬೇರೊಂದು ಆಟೋದಲ್ಲಿ ಹೋಗಿ ಎಂದು ಹೇಳಿದ.

ಚಾಲಕನ ಮಾತು ನಂಬಿ ತಮ್ಮ ಬ್ಯಾಗು ತೆಗೆದುಕೊಂಡ ಸುನಿತಾ ಸ್ವಲ್ಪ ದೂರ ಹೋಗಿ ನಿಂತಿದ್ದಾರೆ. ಕೂಡಲೆ ರಿಪೇರಿ ಎಂದು ನಿಲ್ಲಿಸಿದ್ದ ಚಾಲಕ ಆಟೋದೊಂದಿಗೆ ಪರಾರಿಯಾದ. ಸುನಿತಾ ಕೂಗಿಕೊಂಡರೂ ಆತ ನಿಲ್ಲಿಸದೆ ಪರಾರಿಯಾದ. ನಂತರ ಬ್ಯಾಗಿನಲ್ಲಿದ್ದ ಹಣವನ್ನು ನೋಡಿದಾಗ ಅಲ್ಲಿ ಹಣ ಕಾಣೆಯಾಗಿತ್ತು ಎಂದು ತಿಳಿಸಿದ್ದಾರೆ.

ಕಳ್ಳತನ, ವಂಚನೆ ಪ್ರಕರಣ ದಾಖಲಿಸಿಕೊಂಡ ಸಾಹಿಬಾಬಾದ್ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ರಾತ್ರಿ ವೇಳೆ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಈಗಾಗಲೇ ಬಂಧಿಸಲಾಗಿದೆ. ಮತ್ತೊಂದು ಗ್ಯಾಂಗ್ ಇದೇ ಮಾದರಿಯಲ್ಲಿ ಕೃತ್ಯ ಎಸಗುತ್ತಿವೆ. ಶೀಘ್ರವೇ ಕೃತ್ಯ ಎಸಗುವ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕ ಶ್ಲೋಕ ಕುಮಾರ್ ತಿಳಿಸಿದ್ದಾರೆ. 

15 ವರ್ಷಗಳಿಂದ ದೆಹಲಿಯಲ್ಲಿ ಆಟೋ ರಿಕ್ಷಾ ಚಾಲನೆ ಮಾಡುತ್ತಿರುವ ಸುನಿತಾ ಚೌದರಿ ತಮ್ಮ ಹಳೇ ಆಟೋ ಮಾರಾಟ ಮಾಡಿ ಹೊಸ ಆಟೋ ಖರೀದಿಸಲು ಹಣವನ್ನು ಕೂಡಿಸಿಕೊಂಡಿದ್ದರು. ಆದರೆ, ಹೊಸ ಆಟೋ ಖರೀದಿಸಲು ಇರಿಸಿದ್ದ ಹಣವನ್ನೇ ದುಷ್ಕರ್ಮಿಗಳು ದೋಚಿದ್ದಾರೆ ಎಂದು ಸುನೀತಾ ತಿಳಿಸಿದ್ದಾರೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !