ಮಂಗಳವಾರ, ಆಗಸ್ಟ್ 4, 2020
23 °C

ಭಾರತಕ್ಕೆ ಡ್ರೋನ್‌ ಮಾರಾಟ: ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ (ಪಿಟಿಐ): ಭಾರತಕ್ಕೆ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಮಾರಾಟ ಮಾಡಲು ಅಮೆರಿಕ ಒಪ್ಪಿಗೆ ನೀಡಿದೆ.

ಈ ಡ್ರೋನ್‌ನಿಂದ ಭಾರತೀಯ ಸೇನೆಯ ಆಧುನೀಕರಣ ಮತ್ತು ಸಾಮರ್ಥ್ಯ‌ ಹೆಚ್ಚಿಸಲು ಅನುಕೂಲವಾಗಲಿದೆ.ಡ್ರೋನ್‌ ಮಾರಾಟದ ಜೊತೆಗೆ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಂಚಿಕೊಳ್ಳಲು ಮುಂದಾಗಿರುವುದಾಗಿ ಅಮೆರಿಕ ತಿಳಿಸಿದೆ. 

ಅತ್ಯುತ್ತಮ ರಕ್ಷಣಾ ತಂತ್ರಜ್ಞಾನದ ನೆರವನ್ನು ಭಾರತಕ್ಕೆ ನೀಡಲು ಸಿದ್ಧವಿರುವುದಾಗಿ ಅಮೆರಿಕ ತಿಳಿಸಿದೆ.

ಡ್ರೋನ್‌ಗಳ ಮಾರಾಟ ಒಪ್ಪಂದದ ನಿರ್ಧಾರವನ್ನು ಯಾವಾಗ ಕೈಗೊಳ್ಳಲಾಯಿತು ಎನ್ನುವುದನ್ನು ಅಮೆರಿಕ ಬಹಿರಂಗಪಡಿಸಿಲ್ಲ. ಆದರೆ,  ಕಳೆದ ಫೆಬ್ರುವರಿ 14ರಂದು ನಡೆದ ಪುಲ್ವಾಮಾ ಉಗ್ರರ ದಾಳಿ ಬಳಿಕ ಈ ಪ್ರಕ್ರಿಯೆ ವೇಗ ಪಡೆಯಿತು ಎಂದು ಮೂಲಗಳು ತಿಳಿಸಿವೆ.

 2017ರ ಜೂನ್‌ನಲ್ಲಿ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ ಭೇಟಿಯ ಸಂದರ್ಭದಲ್ಲಿ ಭಾರತಕ್ಕೆ ‘ಗಾರ್ಡಿಯನ್‌’ ಡ್ರೋನ್‌
ಗಳನ್ನು ಮಾರಾಟ ಮಾಡಲು ಅಮೆರಿಕ ನಿರ್ಧರಿಸಿತ್ತು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು