ರೆಡ್‌ಬಸ್‌ನಿಂದ ಕಾರ್‌ ಪೂಲಿಂಗ್‌ ಆ್ಯಪ್‌

ಬುಧವಾರ, ಜೂನ್ 26, 2019
23 °C

ರೆಡ್‌ಬಸ್‌ನಿಂದ ಕಾರ್‌ ಪೂಲಿಂಗ್‌ ಆ್ಯಪ್‌

Published:
Updated:

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರದಟ್ಟಣೆ ನಿಯಂತ್ರಿಸಲು ರೆಡ್‌ಬಸ್‌ ಆನ್‌ಲೈನ್‌ ಬಸ್‌ ಟಿಕೆಟ್‌ ಬುಕಿಂಗ್‌ ಸಂಸ್ಥೆಯು ಕಾರ್‌ ಪೂಲಿಂಗ್‌ಗೆ ಅನುವು ಮಾಡಿಕೊಡಲು ಆ್ಯಪ್‌ ಅಭಿವೃದ್ಧಿಪಡಿಸಿದೆ. ‘ಆರ್‌ಪೂಲ್‌’ ಸೇವೆಯನ್ನು ಬುಧವಾರ ಆರಂಭಿಸಿದೆ.

‘ಮನೆ ಹಾಗೂ ಕಚೇರಿ ನಡುವೆ ಈ ಸಾರಿಗೆ ವ್ಯವಸ್ಥೆ ಲಭ್ಯವಿದೆ. ತಮ್ಮ ಕಾರಿನ ಬದಲಿಗೆ ಅದೇ ಮಾರ್ಗದಲ್ಲಿ ಸಂಚರಿಸುವ ಕಾರಿನಲ್ಲಿ ಉದ್ಯೋಗಿಗಳು ಪ್ರಯಾಣಿಸಬಹುದು. ಇದರಿಂದ ಇಂಧನ, ಹಣ ಉಳಿಕೆಯಾಗಿ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಈಗಿರುವ ರೆಡ್‌ಬಸ್‌ ಆ್ಯಪ್‌ನಲ್ಲೇ ‘ಆರ್‌ಪೂಲ್‌’ ಲಭ್ಯವಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಾಶ್‌ ಸಂಗಮ್‌ ತಿಳಿಸಿದರು.

ದೇಶದಲ್ಲೇ ಬೆಂಗಳೂರು ಅತಿ ಹೆಚ್ಚು ವಾಹನಗಳು ಇರುವ ನಗರವಾಗಿದೆ. ಇದರ ಪರಿಣಾಮವಾಗಿ ಸಂಚಾರದಟ್ಟಣೆ ಹೆಚ್ಚಾಗಿ, ಮಾಲಿನ್ಯ ನಗರವಾಗುತ್ತಿದೆ’ ಎಂದರು. ‘ಈ ಆ್ಯಪ್‌ ಮುಖಾಂತರ ಒಂದೇ ಮಾರ್ಗದ ಪ್ರಯಾಣಿಕರು ತಮ್ಮ ಕಾರಿನ ಬದಲಿಗೆ ಆರ್‌ಪೂಲ್‌ನಲ್ಲಿ ನೋಂದಣಿಯಾದ ಕಾರಿನಲ್ಲಿ ಪ್ರಯಾಣಿಸಬಹುದು. ಆ್ಯಪ್‌ನಲ್ಲಿ ಪ್ರಯಾಣಿಸಲು ಇಚ್ಛಿಸುವ ಹಾಗೂ ಪ್ರಯಾಣಕ್ಕೆ ಆಹ್ವಾನಿಸುವವರ ಭಾವಚಿತ್ರ ಇರಲಿದೆ. ಅವರು ಕೆಲಸ ಮಾಡುವ ಸಂಸ್ಥೆಗಳು ನೀಡಿರುವ ಇಮೇಲ್‌ ಜೊತೆಗೆ ಆ್ಯಪ್‌ ಸಂಪರ್ಕಿಸುತ್ತದೆ’ ಎಂದರು.

‘ಸದ್ಯ ಬೆಂಗಳೂರು, ಹೈದರಾಬಾದ್‌ ಹಾಗೂ ಪುಣೆಯಲ್ಲಿ ಆರ್‌ಪೂಲ್‌ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇತರ ನಗರಗಳಲ್ಲೂ ಈ ಸೇವೆ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !