‘ಐಎಂಎ’; ₹ 1,230 ಕೋಟಿ ವಂಚನೆ ?

ಮಂಗಳವಾರ, ಜೂನ್ 18, 2019
25 °C
ಪ್ರಾಥಮಿಕ ತನಿಖೆಯಲ್ಲಿ ಸಿಕ್ಕ ಲೆಕ್ಕ, ವಿಮಾನ ನಿಲ್ದಾಣದಲ್ಲಿ ಆರೋಪಿ ಕಾರು ಪತ್ತೆ

‘ಐಎಂಎ’; ₹ 1,230 ಕೋಟಿ ವಂಚನೆ ?

Published:
Updated:

ಬೆಂಗಳೂರು: ಸಾವಿರಾರು ಜನರಿಂದ ಷೇರು ಸಂಗ್ರಹಿಸಿರುವ ‘ಐಎಂಎ ಸಮೂಹ ಕಂಪನಿ’, ₹ 1,230 ಕೋಟಿ ವಂಚಿಸಿರುವ ಸಂಗತಿ ವಿಶೇಷ ತನಿಖಾ ದಳದ (ಎಸ್‌ಐಟಿ) ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.   

ರಾಜ್ಯ ಸರ್ಕಾರದ ಆದೇಶದಂತೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಡಿಐಜಿ ಬಿ.ಆರ್.ರವಿಕಾಂತೇಗೌಡ ಅವರ ನೇತೃತ್ವದ ತಂಡ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸ್ ಠಾಣೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಪ್ರಕರಣ ಸಂಬಂಧ ಪೊಲೀಸರು ಬಂಧಿಸಿರುವ ಕಂಪನಿಯ ನಿರ್ದೇಶಕರಾದ ನಿಜಾಮುದ್ದೀನ್ ಖಾನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಅರ್ಷದ್‌ ಖಾನ್, ಅನ್ಸರ್ ಪಾಷಾ, ವಾಸೀಂ ಹಾಗೂ ದಾದಾಪೀರ್ ಅವರನ್ನು ಎಸ್‌ಐಟಿ ತಂಡ ವಶಕ್ಕೆ ಪಡೆಯಿತು.

‘ಕಂಪನಿಯಿಂದ ವಂಚನೆಗೀಡಾಗಿರುವ 21 ಸಾವಿರ ಮಂದಿ ಇದುವರೆಗೆ ದೂರು ನೀಡಿದ್ದಾರೆ. ವಂಚಿತರ ಸಂಖ್ಯೆ ಹೆಚ್ಬಬಹುದು. ಇದುವರೆಗೆ ಬಂದಿರುವ ದೂರುಗಳನ್ನು ಆಧರಿಸಿ ₹1,230 ಕೋಟಿ ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತವು ಜಾಸ್ತಿ ಆಗುವ ಸಂಭವವಿದೆ’ ಎಂದು ಎಸ್ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಪನಿ ವ್ಯವಸ್ಥಾಪಕ ನಿರ್ದೇಶಕರಾದ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಲುಕ್ ಔಟ್ ನೋಟಿಸ್‌ ಜಾರಿ ಮಾಡಲಾಗಿದೆ. ಆತನ ಬಗ್ಗೆ ದೇಶ ಹಾಗೂ ವಿದೇಶದ ವಿಮಾನ ನಿಲ್ದಾಣಗಳ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ವಿವರಿಸಿದರು.

ಕಚೇರಿ, ಕಾರು ಜಪ್ತಿ: ಜಯನಗರ ಹಾಗೂ ಶಿವಾಜಿನಗರದಲ್ಲಿರುವ ಕಂಪನಿಯ ಕಚೇರಿಗೆ ಭೇಟಿ ನೀಡಿದ್ದ ಎಸ್‌ಐಟಿ ತಂಡ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಿತು. ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಖಾನ್‌ ಅವರ ಕಾರನ್ನೂ ಜಪ್ತಿ ಮಾಡಿತು. ಜೂನ್ 8ರಂದು ನಿಲ್ದಾಣದ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿ ಆರೋಪಿ ವಿದೇಶಕ್ಕೆ ಹೋಗಿರುವುದು ಖಚಿತವಾಗಿದೆ’ ಎಂದು ಅಧಿಕಾರಿ ಹೇಳಿದರು.

ನಿರ್ದೇಶಕರಿಗೂ ವಂಚನೆ: ಕಂಪನಿಯನ್ನು ಮುಚ್ಚಿ ವಿದೇಶಕ್ಕೆ ಹೋಗಲು ಮೊದಲೇ ಯೋಜನೆ ರೂಪಿಸಿದ್ದ ಮನ್ಸೂರ್ ಖಾನ್, ತಮ್ಮದೇ ನಿರ್ದೇಶಕರಿಗೂ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಬಂಧಿತ ನಿರ್ದೇಶಕರೊಬ್ಬರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. 

‘ಜೂನ್ 8ರಂದು ಬೆಳಿಗ್ಗೆ ಮನ್ಸೂರ್ ಖಾನ್ ನಮ್ಮನ್ನು (ಮೂವರು ನಿರ್ದೇಶಕರು) ಭೇಟಿ ಮಾಡಿದ್ದರು. ‘ಉದ್ಯಮಿಯೊಬ್ಬರು ₹ 20 ಕೋಟಿ ಹಣ ಕೊಡುತ್ತಾರೆ. ಹಣ ತೆಗೆದುಕೊಂಡು ನೀವು ನೇರವಾಗಿ ನನ್ನ ಮನೆಗೆ ಬನ್ನಿ ಎಂದು ಖಾನ್ ಹೇಳಿದ್ದರು. ಅದನ್ನು ನಂಬಿ ಅವರು ಹೇಳಿದ್ದ ಜಾಗಕ್ಕೆ ಹೋಗಿದ್ದೆವು’ ಎಂದು ನಿರ್ದೇಶಕರೊಬ್ಬರು ಹೇಳಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

‘ಅದರಂತೆ, ನಾವು ಅಲ್ಲಿಗೆ ಹೋದಾಗ ಉದ್ಯಮಿ ವಿಳಾಸದಲ್ಲಿ ಯಾರೂ ಇರಲಿಲ್ಲ. ಖಾನ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್‌ ಆಗಿತ್ತು. ಅನುಮಾನಗೊಂಡ ಅವರ ಮನೆಗೆ ಹೋದಾಗ ಬೀಗ ಹಾಕಿತ್ತು.  ಗಾಬರಿಗೊಂಡು ಖಾನ್‌ ಸ್ನೇಹಿತ ಮೊಹಮ್ಮದ್ ಖಾಲಿದ್ ಅಹ್ಮದ್ ಮನೆಗೆ ಹೋಗಿ ವಿಚಾರಿಸಿದ್ದೆವು. ಅವಾಗಲೇ ಮನ್ಸೂರ್ ಖಾನ್ ಪರಾರಿಯಾಗಿದ್ದು ಗೊತ್ತಾಯಿತು. ಬಳಿಕ ಖಾಲಿದ್‌ ಅವರೇ ಠಾಣೆಗೆ ಹೋಗಿ ದೂರು ನೀಡಿದರು’ ಎಂದು ನಿರ್ದೇಶಕರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !